ಕುಮಟಾ : ತಾಲೂಕಿನ ಪಡುವಣಿಯ ಶ್ರೀ ಶಾಂತಿಕಾ ಪರಮೇಶ್ವರಿ ಯುವಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ 14 ನೇ ವರ್ಷದ ಅಂಡರ್ ಆರ್ಮ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಈ ಪಂದ್ಯಾವಳಿಯ ಪ್ರಥಮ ಬಹುಮಾನವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಪ್ರಾಯೊಜಿಸಿದ್ದು ನಮಿತ್ ಕುಮಾರ ನಾಗರಾಜ ಅವರು ಚಾಂಪಿಯನ್ ತಂಡಕ್ಕೆ ಟ್ರೋಫಿ ವಿತರಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಬಹುಮಾನ ವಿತರಕರಾಗಿ ಆಗಮಿಸಿದ ದಿನಕರ ಶೆಟ್ಟಿಯವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಹಾರೈಸಿದರು.

RELATED ARTICLES  ಐಗಳಕುರ್ವೆ ಸೇತುವೆ ಸಂಪರ್ಕ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕರು.

ಈ ಸಂದರ್ಭದಲ್ಲಿ ಸೀತಾರಾಮ ಡಿ. ನಾಯಕ, ಗಣಪತಿ ಪಿ ಪಟಗಾರ, ಸಂತೋಷ ಎಚ್. ಹರಿಕಂತ್ರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.