ಹೊನ್ನಾವರ : ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ತಾರಿಬಾಗಿಲ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಸರಿಪಡಿಸುವಂತೆ ಪ್ರಭಲ ಆಗ್ರಹ ಕೇಳಿಬಂದಿದೆ. ಹೌದು ರಸ್ತೆ ಸರಿಪಡಿಸುವಂತೆ ಸಾವ೵ಜನಿಕರಿಂದ ಹೋರಾಟ ಪ್ರಾರಂಭವಾಗಿದೆ. ಇಂದು ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸಾರ್ವಜನಿಕರು ಹಾಗೂ ಬಿ.ಜೆ.ಪಿ. ಮುಖಡರು ಮತ್ತು ಕಾರ್ಯಕರ್ತರು ಸೇರಿ ಹಳದೀಪುರ – ತಾರಿಬಾಗಿಲ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ಅದನ್ನು ಇಲ್ಲಿಯವರೆಗೆ ಸರಿಪಡಿಸಿದೆ ಇರುವುದನ್ನು ವಿರೋಧಿಸಿ ಶಾಸಕರ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

RELATED ARTICLES  ವಿಶ್ವೇಶ್ವರಯ್ಯನವರು ತಮ್ಮ ವ್ಯಕ್ತಿತ್ವದಿಂದ ವೃತ್ತಿಗೆ, ಈ ನಾಡಿಗೆ ಘನತೆಯನ್ನು ತಂದುಕೊಟ್ಟಿದ್ದಾರೆ : ಶಿವಾನಂದ ನಾಯ್ಕ

ಇದೇ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಬಿ ಜೆ ಪಿ ಮುಖಂಡರಾದ ದಿನಕರ ಶೆಟ್ಟಿಯವರು ಮಾತನಾಡಿ. ಮುಂದಿನ ಒಂದು ತಿಂಗಳ ಒಳಗೆ ಈ ರಸ್ತೆಯ ಕಾಮಗಾರಿಗೆ ಸಂಬಂಧಿಸಿ ಟೆಂಡರ್ ಆಗದಿದ್ದರೆ ಬಿ.ಜೆ ಪಿ. ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಮಂತ್ರಿಯವರಿಗೆ ತಶಿಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು.

RELATED ARTICLES  ಕೇಂದ್ರ ಸಚಿವ ಅನಂತಕುಮಾರ ಹೆಗಡೆ ತಮ್ಮ ಹೇಳಿಕೆಯನ್ನು ಸಾಬೀತುಪಡಿಸಬೇಕು’: ಸವಾಲೆಸೆದ ಆರ್.ವಿ.ದೇಶಪಾಂಡೆ

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಗುಣಮಾಲಾ ಇಂದ್ರ, ಉಪಾದ್ಯಕ್ಷ ಗಣೇಶ ಪೈ, ಬಿಜೆಪಿ ಕಾರ್ಯಕರ್ತರಾದ ಗಣಪತಿ ನಾಯ್ಕ, ರತ್ನಾಕರ ನಾಯ್ಕ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.