ಕಾರವಾರ: ಅಂಕೋಲಾದ ಗಂಗಾವಳಿ ನದಿಗೆ ಹೊನ್ನಳ್ಳಿ ಎಂಬುವಲ್ಲಿ ೧೫೦ ಕೋಟಿ ರೂ. ವೆಚ್ಚದಲ್ಲಿ ೧೧.೫ ಮೀ. ಎತ್ತರದ ಕಿಂಡಿ ಅಣೆಕಟ್ಟು ನಿರ್ಮಿಸುವುದಕ್ಕೆ ಸರ್ಕಾರದ ಅನುಮೋದನೆ ದೊರೆತಿದೆ. ಆದರೆ ಇದರಿಂದ ನದಿಯ ಎರಡೂ ಪಾತ್ರದ ಜನರಿಗೆ ಸಮಸ್ಯೆ ಉಂಟಾಗಲಿದೆ ಎಂದು ಗಂಗಾವಳಿ ನದಿ ಕೊಳ್ಳ ಹಾಗೂ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಶಿವರಾಮ ಗಾಂವ್ಕರ ಹೇಳಿದರು.

RELATED ARTICLES  ಒಂದೇ ಕಡೆ ನಾಲ್ಕು ಹೆಬ್ಬಾವು : ಹಾವು ಕಂಡ ಜನ ಕಂಗಾಲು.

ನದಿಯ ನಿರ್ಬಂಧಿಸುವಿಕೆಯಿಂದ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಮಾರ್ಗಗಳು ಸ್ಥಗಿತಗೊಳ್ಳುತ್ತದೆ. ಸುತ್ತಮುತ್ತಲಿನ ಸಂಪೂರ್ಣ ಅರಣ್ಯ ನಾಶವಾಗಲಿದೆ. ಮುನ್ನೂರು ಎಕರೆಗಿಂತ ಹೆಚ್ಚಿನ ಅರಣ್ಯ ಪ್ರದೇಶ ನಾಶವಾಗಿ ಲಕ್ಷಾಂತರ ಮರಗಿಡಗಳು ನಾಶವಾಗುತ್ತದೆ. ಹೀಗಾಗಿ ಪರಿಸರ ನಾಶ ಮಾಡುವ ಈ ಯೋಜನೆ ಅಗತ್ಯವಿಲ್ಲ. ಇದನ್ನು ಮುಂದುವರಿಸಿದರೆ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

RELATED ARTICLES  ದೇವರ ರಥೋತ್ಸವದ ಹಿನ್ನಲೆ : ರಥ ಸಂಚರಿಸುವ ಮಾರ್ಗಗಳಿಗೆ ತುರ್ತಾಗಿ ರಸ್ತೆ ಕಾಮಗಾರಿ ನಡೆಸುವ ಮೂಲಕ ಶಾಸಕರ ಮಾದರಿ ಕಾರ್ಯ

ಡೋಂಗ್ರಿ ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸುಂಕಸಾಳ ಗ್ರಾ.ಪಂ ಸದಸ್ಯ ಲಕ್ಷ್ಮಣ ನಾಯ್ಕ, ಅಚವೆ ಗ್ರಾ.ಪಂ ಸದಸ್ಯ ಎಮ್.ಎನ್.ಭಟ್ಟ, ಅಂಕೋಲಾ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಗಾಂವ್ಕರ ಉಪಸ್ಥಿತರಿದ್ದರು.