ಮುಂಡಗೋಡ: ಪಡಿತರಿಗೆ ವಿತರಿಸದೆ ಮಾರ್ಕೇಟಿಂಗ್ ಸೊಸೈಟಿಯ ಗೋದಾಮಿನಲ್ಲಿ ಒಂದು ವರ್ಷದಿಂದ ಶೇಖರಿಸಿಟ್ಟಿದ್ದ ಗೋಧಿಯಲ್ಲಿ ಹುಳುಗಳು ಪತ್ತೆಯಾಗಿದ್ದು, ಅಧಿಕಾರಗಳ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮಾರ್ಕೇಟಿಂಗ್ ಸೊಸೈಟಿಯ ಗೋದಾಮಿನಲ್ಲಿ ಸುಮಾರು 56.90 ಕ್ವಿಂಟಲ್ ಗೋಧಿಯನ್ನು ದಾಸ್ತಾನು ಮಾಡಲಾಗಿತ್ತು. ಒಂದು ವರ್ಷದಿಂದ ಶೇಖರಣೆ ಮಾಡಿದ್ದ ಗೋಧಿ ಸಂಪೂರ್ಣ ಹಾಳಾಗಿ ಹುಳದಿಂದ ತುಂಬಿಹೋಗಿದೆ. ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ದಿಂದ ರಾಜ್ಯಕ್ಕೆ ಗೋಧಿ ಸರಬರಾಜಾಗಿದ್ದು, ರಾಜ್ಯದಲ್ಲಿ ಪಡಿತರ ಅಂಗಡಿಗಳಿಗೆ ವಿತರಿಸುವ ಗುತ್ತಿಗೆಯನ್ನು ಎಫ್.ಸಿ.ಐ ಕಂಪನಿಗೆ ನೀಡಲಾಗಿದೆ. ಆದರೆ ಈ ಗೋಧಿ ವಿತರಣೆ ಮಾಡುವುದನ್ನು ತಡೆಹಿಡಿದು ದಾಸ್ತಾನಿಟ್ಟಿದ್ದ ಪರಿಣಾಮ ಗೋಧಿ ಹುಳುಗಳ ಪಾಲು ಆಗಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ನರಸಿಂಹ ಕೊಣೇಮನೆ, ಗುಡ್ಡಪ್ಪ ಕಾತೂರ, ಯಲ್ಲಪ್ಪ ನಾಯಕ, ಉಮೇಶ ಬಿಜಾಪುರ, ರಾಮು ನಾಯ್ಕ, ಅಶೋಕ ಚಲವಾದಿ, ಚೆನ್ನಪ್ಪ ಹಿರೇಮಠ ಸೊಸೈಟಿಯ ಗೋದಾಮಿ ಭೇಟಿ ನೀಡಿ ಈ ವಿಷಯವನ್ನು ಬಹಿರಂಗ ಪಡಿಸಿದರು.
ಈ ವೇಳೆ ಮಾತನಾಡಿದ ಎಂದು ಬಿಜೆಪಿ ಮುಖಂಡ ನರಸಿಂಹ ಕೊಣೇಮನೆ ಬಡವರಿಗೆ ಬಂದಂತಹ ಗೋಧಿಯನ್ನು ಪಡಿತರಿಗೆ ಹಂಚದೆ ಗೋಧಿಯನ್ನು ಹುಳು ಹುಪ್ಪಡಿಯಿಂದ ತುಂಬಿರುವಂತೆ ಮಾಡಿ, ಉಪಯೋಗಕ್ಕೆ ಬಾರದಂತಹ ಸ್ಥಿತಿ ತಲುಪಿದ್ದಾರೆ ಆರೋಪಿಸಿದರು.