ಕಾರವಾರ: ‘ಶಿರವಾಡದ ಕಾಳಿ ನದಿ ತಟದ ಶಾಸನವಾಡ ಗ್ರಾಮದ ಜಮೀನು, ಬಾವಿ, ಮನೆಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಇದಕ್ಕೆ ತಡೆಗೋಡೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿಕೊಡಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಉದಯ ಬಶೆಟ್ಟಿ ಶಾಸಕ ಸತೀಶ್ ಸೈಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ಈ ಭಾಗದಲ್ಲಿ ಸುಮಾರು ೧೫೦ರಿಂದ ೨೦೦ ಮನೆಗಳಿದ್ದು, ಕಾಳಿ ನದಿಯ ಉಪ್ಪು ನೀರು ಗದ್ದೆಗಳಿಗೆ ನುಗ್ಗಿ ಫಸಲುಗಳು ನಾಶವಾಗುತ್ತಿವೆ. ಬಾವಿಗಳಿಗೂ ಕೂಡ ಉಪ್ಪು ನೀರು ಮಿಶ್ರಣಗೊಳ್ಳುತ್ತಿದ್ದು, ದಿನನಿತ್ಯದ ಆಹಾರ ತಯಾರಿಕೆಗೆ ಬಳಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಅನೇಕ ಮನೆಗಳ ತಳಭಾಗ ಕುಸಿಯುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದರೂ ಸಮಸ್ಯೆ ಪರಿಹರಿಸಲಿಲ್ಲ’ ಎಂದು ದೂರಿದರು.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ಜಂತುಹುಳು ನಿವಾರಣಾ ದಿನಾಚರಣೆ

‘ಸ್ಥಳೀಯರು ೨೦೧೩ರಿಂದ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಕೂಡ ಬಿಡುಗಡೆಯಾಗಿತ್ತು. ಆದರೆ ಅದು ಕಾರಣಾಂತರದಿಂದ ಅಂಕೋಲಾ ತಾಲ್ಲೂಕಿಗೆ ಮಂಜೂರುಗೊಂಡಿತು. ಹೀಗಾಗಿ ಈ ಬಾರಿ ಇದಕ್ಕಾಗಿ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸಬೇಕು. ಶೀಘ್ರವೇ ಇಲ್ಲಿ ತಡೆಗೋಡೆ ನಿರ್ಮಿಸಿ, ಸ್ಥಳೀಯ ನಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.

RELATED ARTICLES  ಕಾಳಮ್ಮ, ದುರ್ಗಮ್ಮ ಗ್ರಾಮ ದೇವಿಯರ ಜಾತ್ರೆ ಫೆ. 22ರಿಂದ