ಕಾರವಾರ: ದಿ ಎಮೆರೇಟ್ಸ್ ಏರ್ ಲೈನ್ ಸೌಜನ್ಯ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಇಂಪ್ಯಾಕ್ಸ್ ಇಂಡೀಯಾ ಫೌಂಡೇಶನ್‌ರವರ ವತಿಯಿಂದ ಜಿಲ್ಲೆಯ ಕುಮಟಾ ರೇಲ್ವೆ ನಿಲ್ದಾಣದಲ್ಲಿ ಅಕ್ಟೋಬರ 29 ರಿಂದ ನವೆಂಬರ 18ರ ವರೆಗೆ ಸಂಚಾರಿತ ಲೈಪ್‍ಲೈನ್ ಎಕ್ಸಪ್ರೆಸ್ ಉಚಿತ ಆರೋಗ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಶುಲ್ಕರಹಿತ ತಪಾಸಣಾ ಚಿಕಿತ್ಸೆಯನ್ನು ಸುಪ್ರಸಿದ್ದ ಪರಿಣಿತ ಚಿಕಿತ್ಸಕರಿಂದ ಕಣ್ಣಿನ ತಪಾಸಣೆ, ಕಿವಿ ರೋಗ, ಹಾಗೂ ಸುಟ್ಟ ಗಾಯಗಳಿಂದ ಸಂಕೋಚನವಾದವುಗಳ ಚಿಕಿತ್ಸೆ, ಪೋಲಿಯೋ ತಪಾಸಣೆ , ಸ್ತ್ರೀರೋಗ ತಪಾಸಣೆ, ಬಾಯಿ ರೋಗ ತಪಾಸಣೆ ಮತ್ತು ಚಿಕಿತ್ಸೆ, ದಂತಗಳ ತಪಾಸಣೆ ಮತ್ತು ಚಿಕಿತ್ಸೆ, ಮುರ್ಛೆರೋಗಳಿಗೆ ಸೂಕ್ತವಾದ ಚಿಕಿತ್ಸೆ ಮತ್ತು ಕುಟುಂಬ ಯೋಜನೆಯ ಸೇವೆಗಳು ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ನಡೆಯುತ್ತವೆ. ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಸೇವೆಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.

RELATED ARTICLES  ಹೊನ್ನಾವರ ತಾಲೂಕಿನ ರಿಕ್ಷಾ ಚಾಲಕ, ಮಾಲಕರಿಗೆ ಔತಣಕೂಟ, ಉಚಿತ ಸಮವಸ್ತ್ರ ವಿತರಣೆ ಮತ್ತು ರಿಕ್ಷಾ ಪಾಸಿಂಗ್ ಯೋಜನೆ

ಹೆಚ್ಚಿನ ಮಹಿತಿಗಾಗಿ ಮತ್ತು ಸಹಕಾರಕ್ಕಾಗಿ ಲೈಫ್ ಲೈನ್ ಇಂಪ್ಯಾಕ್ಟ ಇಂಡಿಯಾ ಫೌಂಡೇಶನ್ ಯೋಜನಾ ಉಪನಿರ್ದೇಕ, ನೋಡೆಲ ಅಧಿಕಾರಿ ಡಾ.ಯಾಗ್ನಿಕ್ ವಾಝಾ (ಮೊಬೈಲ್: 7022252221) ಹಾಗೂ 08386– 222021 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಕುಮಟಾದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ.