ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಬೆಳೆದಂತೆಲ್ಲಾ ಗ್ಯಾಜೆಟ್ ಲೋಕ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಇಂದು 500 ರೂಪಾಯಿಯಿಂದ ಹಿಡಿದು ಲಕ್ಷ ಲಕ್ಷ ಬೆಲೆಯ ಫೋನ್‌ಗಳು ಲಭ್ಯವಾಗುತ್ತಿವೆ. ಆದ್ರೆ ಲಕ್ಷ ಲಕ್ಷ ಪಾವತಿಸಿ ದುಬಾರಿ ಫೋನ್‌ಗಳನ್ನು ಖರೀದಿಸುವ ಮುನ್ನ ನೀವು ಸ್ಪೋರಿಯನ್ನು ಒಮ್ಮೆ ಓದಲೇಬೇಕು.
ಅದೊಂದು ಕಾಲವಿತ್ತು. 5 ಸಾವಿರ ಮುಖಬೆಲೆಯ ಫೋನ್ ಅನ್ನು ಯಾರಾದ್ರೂ ಖರೀದಿ ಮಾಡಿದ್ರೆ ಅವರ ಶ್ರೀಮಂತಿಕೆ ಬಗ್ಗೆ ಮಾತನಾಡುತ್ತಿದ್ರು. ಆದ್ರೆ ಇದೀಗ ಕಾಲ ಬದಲಾಗಿದ್ದು, ಹೈಸ್ಕೂಲ್ ವಿದ್ಯಾರ್ಥಿಗಳ ಕೈಯಲ್ಲೂ ಸ್ಮಾರ್ಟ್ ಫೋನ್‌ಗಳು ಬಂದಿವೆ. ಇದರ ಮಧ್ಯೆ 1 ಲಕ್ಷ ರೂಪಾಯಿ ಬೆಲೆಯ ಐಪೋನ್ ಎಕ್ಸ್ ಭಾರತದಲ್ಲಿ ಬಿಡುಗಡೆಯಾಗಲು ಕ್ಷಣಗಣನೆ ಆರಂಭವಾಗಿದ್ದು, ಅದಕ್ಕಿಂತ ಅಗ್ಗದ ಅತ್ಯುತ್ತಮ ಬೈಕ್‌ಗಳ ಬಗ್ಗೆ ನಾವು ಹೇಳಕೊಟ್ಟಿದ್ದೇವೆ. ಹೀಗಾಗಿಯೇ ಐಪೋನ್ ಎಕ್ಸ್ ಫೋನ್‌ಗೆ ಫೋನ್‌ಗೆ ಪಾವತಿಸುವ ಬೆಲೆಯಲ್ಲಿ ಒಂದೊಳ್ಳೆ ಬೈಕ್ ಖರೀದಿ ಮಾಡಬಹುದು.
ಇದೇ ಉದ್ದೇಶ ಓದುಗರಿಗಾಗಿ ನಿಮ್ಮ ಡ್ರೈವ್ ಸ್ಪಾರ್ಕ್ ಟಾಪ್ 10 ಬೈಕ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದು, ಬೆಲೆ ಮತ್ತು ಎಂಜಿನ್ ಸಾಮರ್ಥ್ಯದ ಕುರಿತು ಇಲ್ಲಿ ಚರ್ಚಿಸಲಾಗಿದೆ. 01. ಬಜಾಜ್ ಪಲ್ಸರ್ 200ಎನ್ಎಸ್ ಮಧ್ಯಮ ವರ್ಗದ ಗ್ರಾಹಕರಿಗೆ ಬಜಾಜ್ ಪಲ್ಸರ್ ಉತ್ತಮ ಮಾದರಿಯಾಗಿದ್ದು, ಎಕ್ಸ್‌ಶೋರಂಗಳ ಬೆಲೆಗಳ ಪ್ರಕಾರ ರೂ.95,279 ಸಾವಿರದಿಂದ ರೂ. 1,13,184 ಲಕ್ಷವರೆಗೆ ಖರೀದಿಸಬಹುದಾಗಿದೆ. ಜೊತೆಗೆ 199.5 ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. 02. ಬಜಾಜ್ ಪಲ್ಸರ್ 220 ಬಜಾಜ್ ನಿರ್ಮಾಣದ ಮತ್ತೊಂದು ಬೈಕ್ ಮಾದರಿಯಾದ ಪಲ್ಸರ್ 220 ಎಕ್ಸ್‌ಶೋರಂ ಬೆಲೆಗಳ ಪ್ರಕಾರ ರೂ. 87,466 ದಿಂದ ರೂ. 98,600 ರವರೆಗೆ ಖರೀದಿ ಮಾಡಬಹುದಾಗಿದ್ದು, 220 ಸಿಸಿ 4 ಸ್ಟೋಕ್, ಡಿಟಿಎಸ್ಐ ಆಯಿಲ್ ಕೂಲ್ಡ್ ಸಿಂಗಲ್ ಎಂಜಿನ್ ಹೊಂದಿದೆ. 03. ಟಿವಿಎಸ್ ಅಪಾಚಿ 200 ಆರ್‌ಟಿಆರ್ ರೇಸಿಂಗ್ ವಿಭಾಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಟಿವಿಸ್ ಅಪಾಚಿ 200 ಆರ್‌ಟಿಆರ್ ಅತಿಹೆಚ್ಚು ಜನಪ್ರಿಯತೆಗಳಿಸಿದ್ದು, ಎಕ್ಸ್‌ಶೋರಂ ಬೆಲೆಗಳ ಪ್ರಕಾರ ರೂ. 1.07 ಲಕ್ಷದಿಂದ 1.13 ಲಕ್ಷದವರೆಗೆ ಖರೀದಿ ಮಾಡಬಹುದಾಗಿದ್ದು, 197.75 ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. 04. ಯಮಹಾ ಎಫ್‌ಝಡ್ ಎಸ್ ವಿ 2.0 ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಯಮಹಾ ಎಫ್‌ಝಡ್ ಎಸ್ ವಿ 2.0 ಬೈಕ್ ಮಾದರಿಯು ಹಲವು ವಿಶೇಷತೆಗಳಿಂದ ಕೂಡಿದ್ದು, ಮುಂಬೈ ಎಕ್ಸ್‌ಶೋರಂ ಪ್ರಕಾರ ರೂ.83,042ಕ್ಕೆ ಖರೀದಿಸಬಹುದಾಗಿದೆ. ಎಂಜಿನ್ ಸಾಮರ್ಥ್ಯ- 149 ಸಿಸಿ ಏರ್ ಕೂಲ್ಡ್ ಎಂಜಿನ್ ಓದಿರಿ- 05. ಬಜಾಜ್ ಪಲ್ಸರ್ ಎನ್ಎಸ್ 160 ಗ್ರಾಮೀಣ ಹಾಗೂ ನಗರ ವಾಸಿಗಳನ್ನು ಸೆಳೆಯುತ್ತಿರುವ ಬಜಾಜ್ ಪಲ್ಸರ್ ಎನ್ಎಸ್ 160 ಆವೃತ್ತಿ ಕೂಡಾ ಹಲವು ವಿಶೇಷತೆಗಳಿಂದ ಕೂಡಿದ್ದು, ದೆಹಲಿ ಎಕ್ಸ್‌ಶೋರಂ ಬೆಲೆಗಳ ಪ್ರಕಾರ ರೂ. 80,128 ಗಳಿಗೆ ಖರೀದಿ ಮಾಡಬಹುದಾಗಿದೆ.
ಎಂಜಿನ್ ಸಾಮರ್ಥ್ಯ- 160.30 ಸಿಸಿ 06. ಹೋಂಡಾ ಸಿಬಿ ಹಾರ್ನೆಟ್ 160ಆರ್ ಹೋಂಡಾ ಬೈಕ್ ಆವೃತ್ತಿಗಳಲ್ಲೇ ಅತಿಹೆಚ್ಚು ಬೇಡಿಕೆ ಹೊಂದುತ್ತಿರುವ ಸಿಬಿ ಹಾರ್ನೆಟ್ 160 ಆರ್ ಬೈಕ್ ಆವೃತ್ತಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.83,205ಕ್ಕೆ ಖರೀದಿಸಬಹುದಾಗಿದ್ದು, 162.71 ಸಿಸಿ ಎಂಜಿನ್ ಹೊಂದಿದೆ. 07. ಸುಜುಕಿ ಜಿಕ್ಸರ್ ಎಸ್ಎಫ್ ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ಸಂಸ್ಥೆ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಸಂಸ್ಥೆಯು ದೇಶದಲ್ಲಿ ತನ್ನ ಜನಪ್ರಿಯ ಜಿಕ್ಸರ್ ಹಾಗೂ ಜಿಕ್ಸರ್ ಎಸ್‌ಎಫ್ ಮಾದರಿಗಳ 2017 ಎಸ್‌ಪಿ ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ. ಬೆಲೆ- ರೂ.88, 857 ನಿಂದ ರೂ. 99,321 ಎಂಜಿನ್ ಸಾಮರ್ಥ್- 154.9 ಸಿಸಿ 08. ಹೋಂಡಾ ಆಕ್ವಿವಾ 125 ಸ್ಕೂಟರ್ ವಿಭಾಗದಲ್ಲಿ ಭಾರೀ ಬೇಡಿಕೆ ಹೊಂದಿರುವ ಹೋಂಡಾ ಆಕ್ಟಿವಾ 125 ಆವೃತ್ತಿಯು ಕಳೆದ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡಿದ್ದು, ಎಕ್ಸ್‌ಶೋರಂ ಬೆಲೆಗಳ ಪ್ರಕಾರ ರೂ. 59,116ಕ್ಕೆ ಲಭ್ಯವಿದೆ. ಎಂಜಿನ್ ಸಾಮರ್ಥ್ಯ- 124 ಸಿಸಿ 09. ಸುಜುಕಿ ಆಕ್ಸೆಸ್ 125 ಹೊಸ ವಿನ್ಯಾಸಗಳಿಂದ ಸ್ಕೂಟರ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಸುಜುಕಿ ಆಕ್ಸೆಸ್ 125 ಆವೃತ್ತಿಯು ದೆಹಲಿ ಎಕ್ಸ್‌ಶೋರಂ ಬೆಲೆಗಳ ಪ್ರಕಾರ ರೂ. 54,163 ರಿಂದ ರೂ.59,063ಗಳಿಗೆ ಲಭ್ಯವಿದೆ.
ಎಂಜಿನ್ ಸಾಮರ್ಥ್ಯ- 124 ಸಿಸಿ 10. ಹೀರೋ ಸಿಬಿಝಡ್ ಎಕ್ಸ್‌ಟ್ರಿಮ್ ಜನಸಾಮಾನ್ಯರ ನೆಚ್ಚಿನ ಬೈಕ್ ಆವೃತ್ತಿಯಾಗಿರುವ ಹೀರೋ ನಿರ್ಮಾಣದ ಎಕ್ಸ್‌ಟ್ರಿಮ್ ಆವೃತ್ತಿ ಕೂಡಾ ಖರೀದಿಗೆ ಉತ್ತಮವಾಗಿದ್ದು, ಎಕ್ಸ್‌ಶೋರಂ ಬೆಲೆಗಳ ಪ್ರಕಾರ ರೂ.72 ಸಾವಿರಕ್ಕೆ ಲಭ್ಯವಿದೆ. ಜೊತೆಗೆ 149 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ. ನೋಡಿದ್ರಲ್ಲಾ ಓದುಗರೇ. ಐಫೋನ್ ಎಕ್ಸ್‌ಗಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಬಹುದಾದ ಬೈಕ್‌ಗಳು ಯಾವವು ಅಂತಾ. ಈಗ ನೀವೇ ನಿರ್ಧರಿಸಿ 1 ಲಕ್ಷ ಪಾವತಿ ಐಫೋನ್ ಎಕ್ಸ್ ಖರೀದಿ ಮಾಡುತ್ತಿರಾ ಅಥವಾ ಬಹುಉಪಯೋಗಿ ನಿಮ್ಮ ಇಷ್ಟದ ಬೈಕ್ ಖರೀದಿಸುವಿರಾ ಎಂಬುವುದನ್ನು ನೀವೆ ನಿರ್ಧರಿಸಿ.