ಕುಮಟಾ: ಮಂಗಳವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಭಾರಿ ಸಿಡಿಲಿಗೆ ಮಹಿಳೆಯೊಬ್ಬಳು ಸಾವನ್ನಪ್ಪಿರುವ‌ ಘಟನೆ ಕುಮಟಾ ತಾಲೂಕಿನ ಅಂತ್ರೊಳ್ಳಿಯಲ್ಲಿ ನಡೆದಿದೆ.

ಸಿಡಿಲಿಗೆ ಲಲಿತಾ ಶ್ರೀಧರ ಗೌಡ (32) ಮೃತ ಪಟ್ಟಿರುವ ಮಹಿಳೆಯಾಗಿದ್ದಾಳೆ. ಈಕೆ ಮಳೆ ಬೀಳುತ್ತಿರುವಾಗ ಮನೆಯಿಂದ ಹೊರಗಡೆ ಹೋಗಿದ್ದ ಸಮಯದಲ್ಲಿ ಆಕೆಗೆ ಸಿಡಿಲು ಬಡಿದು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES  ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ; ಆರೋಪಿತರು ಪೊಲೀಸ್ ವಶಕ್ಕೆ

ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೀಪಾವಳಿ ಮುಗಿದರೂ ನಿಲ್ಲದ ಮಳೆಯ ಅಬ್ಬರಕ್ಕೆ ಕುಮಟಾದಲ್ಲಿ ಒಂದು ಅವಘಡ ಸಂಭವಿಸಿದೆ.