ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ನಕಲಿ ಅಂಕಪಟ್ಟಿ, ಉತ್ತರ ಪತ್ರಿಕೆ ಬದಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ. 2012ರ ಮೇ ತಿಂಗಳಿನಲ್ಲಿ ಈ ಹಗರಣ ಬಯಲಿಗೆ ಬಂದಿತ್ತು. ಮಲ್ಲಿಕಾ ಘಂಟಿ ಹತ್ಯೆಗೆ ಸಂಚು ರೂಪಿಸಿದ್ದ ಕುವೆಂಪು ವಿವಿ ಸಿಬ್ಬಂದಿ ಕುವೆಂಪು ವಿಶ್ವವಿದ್ಯಾಲಯ ಸೋಮವಾರ ನಕಲಿ ಅಂಕಪಟ್ಟಿ ಮತ್ತು ಉತ್ತರ ಪತ್ರಿಕೆ ಬದಲಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಜಾಗೊಳಿಸಿ, ಮತ್ತೆ ನಾಲ್ವರಿಗೆ ಹಿಂಬಡ್ತಿ ನೀಡಿ ಆದೇಶ ಹೊರಡಿಸಿದೆ.

RELATED ARTICLES  ವಿಧಾನಪರಿಷತ್ತಿನ ಸಭಾನಾಯಕರಾಗಿ ಚಿತ್ರನಟಿ ಜಯಮಾಲಾ ಆಯ್ಕೆ.

ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಈ ಹಗರಣದ ತನಿಖೆ ನಡೆಸುತ್ತಿದ್ದರು. ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ನಕಲಿ ಅಂಕಪಟ್ಟಿ, ಉತ್ತರ ಪತ್ರಿಕೆ ಬದಲಿ ಮತ್ತು ಅಂಕ ತಿದ್ದುತ್ತಿದ್ದ ದೊಡ್ಡ ಹಗರಣ 2012ರ ಮೇ ನಲ್ಲಿ ಬಯಲಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 9 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗಿದ್ದ 9 ಮಂದಿಯಲ್ಲಿ ಒಬ್ಬರು ವಿಚಾರಣೆ ಹಂತದಲ್ಲಿಯೇ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ಉಳಿದವರ ವಿರುದ್ಧ ಅರೋಪ ಸಾಬೀತಾಗಿದ್ದು, ಕುಲಪತಿ ಪ್ರೊ.ಜೋಗನ್ ಶಂಕರ್ ಸೂಚನೆಯಂತೆ ಕುಲಸಚಿವ ಪ್ರೊ.ಎಚ್.ಎಸ್.ಭೋಜ್ಯಾನಾಯ್ಕ್ ವಜಾ ಮತ್ತು ಹಿಂಬಡ್ತಿ ಆದೇಶ ಹೊರಡಿಸಿದ್ದಾರೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 28-11-2018 ರ ರಾಶಿ ಭವಿಷ್ಯ ಇಲ್ಲಿದೆ.

ವಜಾಗೊಂಡವರು : ವಿಶ್ವವಿದ್ಯಾನಿಲಯ ಪರೀಕ್ಷಾಂಗ ವಿಭಾಗದ ಕಿರಿಯ ಸಹಾಯಕರಾದ ಶಿವಕುಮಾರ್, ಸಿದ್ದಾಚಾರ್ಯ, ರಮೇಶ್ ಹಾಗೂ ಎಲ್.ರಾಮು.

ಹಿಂಬಡ್ತಿ ಪಡೆದವರು : ಸಹಾಯಕ ಕುಲಸಚಿವ ಎಂ.ಜೆ.ಪಾಲಾಕ್ಷಿನಾಯ್ಕ್, ಕಿರಿಯ ಸಹಾಯಕರಾದ ಪೀರ್ಯಾನಾಯ್ಕ್, ಎಚ್.ತಿಮ್ಮಯ್ಯ ಮತ್ತು ಮದನ್‌.