ಗೋಕರ್ಣ: ಅಕಾಲಿಕ ಮೋಡ ಗುಡುಗು ಸಿಡಿಲು ಮಳೆಗೆ ರೈತರು ತತ್ತರಿಸಿದ್ದಾರೆ. ಭತ್ತದ ತೆನೆಗಳೆಲ್ಲ ಬಾಗಿವೆ, ಕೊಯ್ದ ಫಸಲುಗಳನು ಗದ್ದೆ ಹಾಳಿಯ ಮೇಲೆ ಹರಡಲಾಗಿದೆ, ನೀರು ತುಂಬಿದ ಗದ್ದೆಯಲ್ಲಿಅಳಿದುಳಿದ ಬತ್ತದ ತೆನೆ ಕೊಯ್ಯುವ ಕಾಯಕಕ್ಕೆ ಹಾಲಕ್ಕಿಗಳನೇಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನ್ನದಾತನ ಗೋಳಿಗೆ, ಕೂಗಿಗೆ ಸ್ಪಂದಿಸದ ಕೃಷಿ ಇಲಾಖೆಯ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.

RELATED ARTICLES  ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ಮಾಡಿ ಪರಾರಿಯಾಗಿದ್ದವರ ಬಂಧನ

ಬೆಳೆದ ಬೆಳೆಗೆ ಬೆಲೆಯಿಲ್ಲ. ಈಗ ಪ್ರಕೃತಿಯ ವಿಕೋಪಕ್ಕೆ ಈ ರೀತಿ ಆಗಿರುವುದು ರೈತರ ಬದುಕನ್ನು ಬರಡಾಗಿಸಿದೆ. ಅಕಾಲಿಕ ಮಳೆಯಿಂದ ಸಂಭವಿಸಿದ ಅನಾಹುತದಿಂದ ಹೊಟ್ಟೆಗೆ ಹಿಟ್ಟಿಲ್ಲ ಎಂಬುದು ಇಲ್ಲಿಯ ಜನರ ಮಾತು.

RELATED ARTICLES  ಶ್ರೀ ಶ್ರೀ ರೇಣುಕಾ ಮಾತಾಜಿಯವರಿಗೆ ಗೋಕರ್ಣ ಗೌರವ.

ಅಧಿಕಾರಿಗಳು ಮೌನ ತಾಳಿದ್ದು ಒಮ್ಮೆ ಇಲ್ಲಗೆ ಬಂದು ಸ್ಥಳ ಪರಿಶೀಲಿಸಿ ರೈತರಿಗೆ ಆಧಾರವಾಗುತ್ತಾರೋ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.