ಜೋಯಿಡಾ: ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ೧.೧೫ ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ಉತ್ತರಕನ್ನಡ ಜಿಲ್ಲೆಯ ಅಬಕಾರಿ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಜೊಯಿಡಾದ ಅನಮೋಡದ ಬಳಿ ವಶಕ್ಕೆ ಪಡೆದಿದ್ದಾರೆ.
ಗೋವಾ ರಾಜ್ಯದಿಂದ ಬರುತ್ತಿದ್ದ ವಾಹನಗಳನ್ನು ಅನಮೋಡ ತಪಾಸಣಾ ಠಾಣೆಯಲ್ಲಿ ತಪಾಸಣೆ ಮಾಡುತ್ತಿದ್ದ ವೇಳೆ ಕೆಎ- 31 5619 ಲಾರಿಯಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಲಾರಿಯಲ್ಲಿ ಸುಮಾರು 16 ಟನ್ ಕಟ್ಟಿಗೆಯ ತುಂಡುಗಳನ್ನು ತುಂಬಿಕೊಂಡು, ಅದರ ಅಡಿಯಲ್ಲಿ ಅಕ್ರಮವಾಗಿ 373 ಲೀಟರ್ ಗೋವಾ ಮದ್ಯ ಹಾಗೂ 168 ಲೀಟರ್ ಗೋವಾ ಬಿಯರ್‌ ಅನ್ನು ಅಡಗಿಸಿಡಲಾಗಿತ್ತು. ರಾಯಲ್ ಸ್ಟ್ಯಾಗ್ ವಿಸ್ಕಿ, ರೀಯಲ್ ವಿಸ್ಕಿ, ಓಲ್ಡ್ ಬಿಲ್ ವಿಸ್ಕಿ, ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ ಬಾಟಲಿಗಳನ್ನು ಪೆಟ್ಟಿಗೆಯಲ್ಲಿ ತುಂಬಿ ಅಡಗಿಸಿಡಲಾಗಿತ್ತು.

RELATED ARTICLES  ಸ್ವಚ್ಛತಾ ಕಾರ್ಯಕ್ರಮ ಸಂಪನ್ನ.

ಈ ವೇಳೆ ತಪಾಸಣೆ ನಡೆಸಿರುವ ಅಬಕಾರಿ ಸಿಬ್ಬಂದಿ ಅಕ್ರಮ ಒಂದೂವರೆ ಲಕ್ಷ ಮೌಲ್ಯದ ಗೋವಾ ಮದ್ಯ, ೧.೬೦ ಲಕ್ಷ ರೂ. ಮೌಲ್ಯದ ಕಟ್ಟಿಗೆ ತುಂಡುಗಳು ಹಾಗೂ ೬ ಲಕ್ಷ ರೂ. ಮೌಲ್ಯದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ವಾಹನ ಚಾಲಕನಾದ ಕೃಷ್ಣಾ ಮಾರುತಿ ಪರವರ ಎಂಬುವವನನ್ನು ಬಂಧಿಸಲಾಗಿದೆ.

RELATED ARTICLES  ಅಧ್ಯಯನಕ್ಕೆ ತೆರಳಿದ್ದ ನೌಕೆಯಲ್ಲಿ ಎಂಜಿನ್ ವೈಪಲ್ಯ : ಮುಳುಗುವ ಹಂತ ತಲುಪಿದ ನೌಕೆ

ಸದರಿ ಸ್ವತ್ತುಗಳು ರಾಮನಗರದ ಹುಸೇನಸಾಬ್ ಮುಲ್ಲಾ ಹಾಗೂ ಸಂತೋಷ ವಸಂತ ಮಿರಾಶಿ ಎಂಬುವವರಿಗೆ ಸಂಬಂಧಿಸಿರುವುದು ಎಂದು ಬಂಧಿತ ಆರೋಪಿ ತಿಳಿಸಿದ್ದಾನೆ.

ಕಾರ್ಯಚರಣೆಯಲ್ಲಿ ಅನಮೋಡ ತನಿಖಾ ಠಾಣೆಯ ಅಬಕಾರಿ ಉಪ ನಿರೀಕ್ಷಕ ಕೆ.ಮನೋಹರ, ಶ್ರೀಕಾಂತ ಅಸೋದೆ, ಸಿಬ್ಬಂದಿಗಳಾದ ಎಂ.ಎಚ್.ಅನಮಟ್ಟಿ, ಪುಷ್ಪಾ ಜೊಗಳೇಕರ, ಎಸ್.ಬಿ.ಬನ್ಸೋಡೆ, ಶ್ರೀಕಾಂತ ಜಾಧವ ಮತ್ತು ಯಲ್ಲಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕ ಜಿ.ಎಸ್.ನಾಯ್ಕ ಪಾಲ್ಗೊಂಡಿದ್ದರು.