ಸಿದ್ದಾಪುರ: ನಗರದ ಗಾಂಜಾ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಯನ್ನು ರೆಡ್’ಹ್ಯಾಂಡ್ ಆಗಿ ಹಿಡಿಯಲು ಸಾರ್ವಜನಿಕರು ಮುಂದಾದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂಬ ವರದಿ ಸತ್ವಾಧಾರ ನ್ಯೂಸ್ ಗೆ ಲಭ್ಯವಾಗಿದೆ.

ಮುರಾದ್ ಪರಾರಿಯಾದ ವಿದ್ಯಾರ್ಥಿ. ವಿದ್ಯಾರ್ಥಿಯನ್ನು ಬೆನ್ನತ್ತಿದ ವೇಳೆ ಆತನಿಂದ ಒಂದು ಪ್ಯಾಕ್ ಗಾಂಜಾ ಹಾಗೂ ಪರ್ಸ್ ವಶಪಡಿಸಿಕೊಳ್ಳಲಾಗಿದೆ. ನಗರದ ಸ್ಥಳೀಯ ಆಯುರ್ವೇದ ಹಾಗೂ ಎಂಜಿಸಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇತ್ತು. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. ಗಾಂಜಾ ವ್ಯಾಪಾರ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಬಂಧಿಸಿ ಗಾಂಜಾ ಎಲ್ಲಿಂದ ಪೂರೈಕೆ ಆಗುತ್ತಿದೆ ಎನ್ನುವುದನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು ಎಂದು ಬಿಜೆಪಿ ನಾಯಕ ಮಾರುತಿ ಟಿ.ನಾಯ್ಕ ಹೊಸೂರು ಆಗ್ರಹಿಸಿದ್ದಾರೆ.

RELATED ARTICLES  ರಾಜ್ಯ ಮಟ್ಟದ ಹವ್ಯಕ ಪಂದ್ಯಾವಳಿ ಸಂಪನ್ನ.