ಉತ್ತರಕನ್ನಡ : ಮೇಲಿಂದ ಮೇಲೆ ಬದಲಾಗುತ್ತಿರುವ ಹವಾಮಾನದಿಂದ ಉತ್ತರ ಕನ್ನಡದ ಎಲ್ಲ ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯು ಮರೆಯಾಗಿದ್ದನ್ನು ಕಂಡು ಹವಾಮಾನ ಹೀಗೆ ಮುಂದು ವರೆಯಬಹುದು ಎಂದು ಅಂದಾಜಿಸಿದ ರೈತರು ಸಂಪೂರ್ಣವಾಗಿ ಮಾಗಿ ನಿಂತಿರುವ ಭತ್ತ ಹಾಗೂ ಗೋವಿನಜೋಳದ ಫಸಲನ್ನು ಕಟಾವು ಮಾಡುಲು ಮುಂದಾದರು. ಆದರೆ ದೇವರ ಆಟ ಬೇರೆಯೇ ಇತ್ತು. ವರುಣ ಈಗ ಧರೆಗೆ ಅವತರಿಸಿದ. ಹೀಗಾಗಿ ಮಳೆ ಒಂದೇ ಸಮನೆ ಸುರಿಯಿತು. ರೈತರಿಗೆ ನಿನ್ನೆ ಸುರಿದ ಮಳೆಯಿಂದ ತೊಂದರೆ ಉಂಟಾಗಿದೆ. ನಿನ್ನೆ ಮಳೆ ಬಂದಿದ್ದರಿಂದ ಕೊಯ್ಲು ಮಾಡಿದ ರೈತರು ಆತಂಕಕ್ಕೆ ಒಳಗಾಗಬೇಕಾಯಿತು.

ಈಗಾಗಲೇ ಭತ್ತದ ಹಾಗೂ ಗೋವಿನಜೋಳದ ಬೆಳೆ ಸಂಪೂರ್ಣವಾಗಿ ಮಾಗಿ ಕಟಾವು ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದು. ಕಳೆದ 4-5 ದಿನಗಳಿಂದ ರೈತರು ಅಲ್ಲಲ್ಲಿ ಮಾಗಿದ ಭತ್ತ ಹಾಗೂ ಗೋವಿನಜೋಳದ ತೆನೆಗಳನ್ನು ಯಂತ್ರ (ಹಾರ್ವೇಸ್ಟರ್)ಗಳ ಮೂಲಕ ಕಾಳುಗಳನ್ನು ಬೇರ್ಪಡಿಸುತ್ತಿದ್ದಾರೆ. ನಂತರ ಕಾಳುಗಳನ್ನು ಒಣಗಿಸಿ ಮಾರುಕಟ್ಟೆಗೆ ತಂದರಾಯ್ತು ಎನ್ನುವಷ್ಟರಲ್ಲಿ ಮಳೆರಾಯ ಮತ್ತೆ ತನ್ನ ಹೊಟ್ಟೆ ಕಿಚ್ಚಿನ ಆಟವನ್ನು ಮುಂದುವರೆಸಿ ರೈತನ ಬಾಳಿಕೆ ಕೊಳ್ಳೆ ಇಡುತ್ತಿದ್ದಾನೆ.

RELATED ARTICLES  ವೀಕೆಂಡ್ ಕರ್ಫ್ಯೂ ಇದ್ದರೂ ವೈದ್ಯರೇ ಮೋಜು ಮಸ್ತಿಗೆ ಇಳಿದರು..!

ತಾಲೂಕಿನಲ್ಲಿ ಮಳೆರಾಯ ಒಂದು ದಿನ ಕರುಣೆ ತೋರಿದರೆ ಇನ್ನೊಂದು ದಿನ ತನ್ನ ಆಟ ಮುಂದುವರೆಸುತ್ತಿರುವುದಿಂದ ರೈತನಿಗೆ ಮಾಗಿದ ಬೆಳೆಯನ್ನು ಕಟಾವು ಮಾಡುವುದಕ್ಕೆ ತೊಂದರೆ ಆಗುತ್ತಿದ್ದು. ಯಂತ್ರಗಳು ಸಹ ಹಸಿಯಾದ ಜಮೀನುಗಳಲ್ಲಿ ಹೊಗುತ್ತಿಲ್ಲ, ಮತ್ತು ಈಗಾಗಲೇ ಯಂತ್ರಗಳ ಮೂಲಕ ಗೋವಿನಜೋಳದ ತೆನೆಗಳನ್ನು ಕೂಲಿ ಜನರಿಂದ ಮುರಿಸಿ ಸಣ್ಣ ಮಷೀನ್ ನಿಂದ ಕಾಳುಗಳನ್ನು ಬೇರ್ಪಡಿಸುತ್ತಿದ್ದಾರೆ. ಇನ್ನೂ ಕೆಲ ರೈತರು ಕೂಲಿ ಆಳುಗಳ ಕೊರತೆ ಹಾಗೂ ಮಳೆಯ ತೊಂದರೆಯಿಂದ ಭತ್ತ ಕಟಾವು ಮಾಡುವ ರೀತಿಯಲ್ಲಿ ದೊಡ್ಡ ಯಂತ್ರದಿಂದ ನೇರವಾಗಿ ಕಾಳುಗಳನ್ನು ಬೇರ್ಪಡಿಸಿ ಖಾಲಿ ಇರುವ ಜಾಗಗಳಲ್ಲಿ ಹಾಗೂ ರಸ್ತೆಯ ಅಕ್ಕ -ಪಕ್ಕಗಳಲ್ಲಿ ಬಿಸಿಲಿಗೆ ಒಣಗಿಸಲು ಹಾಕಿದ್ದಾರೆ. ಆದರೆ ಮಳೆಯು ಬೀಡುವು ಕೊಡದೆ ಇರುವುದರಿಂದ ರೈತರು ಗೋವಿನಜೋಳವನ್ನು ಒಣಗಿಸಿ ಮಾರುಕಟ್ಟೆಗೆ ತರುವುದಕ್ಕೆ ಹರಸಾಹಸ ಪಡುವಂತಾಗಿದೆ.

RELATED ARTICLES  ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದ 7 ಹೆಣ್ಣುಮಕ್ಕಳು ಮನೆಗೆ ವಾಪಸ್

ಕಳೆದ ವರ್ಷ ಭತ್ತದ ಒಣ ಹುಲ್ಲಿಗೆ ಭಾರಿ ಬೇಡಿಕೆಯ ಜೋತೆಗೆ ಹೆಚ್ಚಿನ ಬೆಲೆ ಸಿಕ್ಕಿದರಿಂದ ಈ ವರ್ಷ ಭತ್ತದ ಬೆಳೆಯನ್ನು ಕೂಲಿ ಜನರಿಂದ ಕಟಾವು ಮಾಡಿಸಿದರಾಯ್ತು ಎಂದು ಲೆಕ್ಕಾಚಾರ ಹಾಕಿದ ರೈತರಿಗೆ ಮಳೆರಾಯ ತಣ್ಣಿರು ಹಾಕುತ್ತಿದ್ದಾನೆ. ಹಾಗಾಗಿ ಎಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಹಾಗುತ್ತದೆ ಎಂಬ ಆತಂಕದಲ್ಲಿ ರೈತರು ಯಂತ್ರಗಳ ಮೂಲಕವೇ ಕಟಾವು ಮಾಡಿಸಲು ಮುಂದಾಗಿದ್ದಾರೆ. ಒಬ್ಬ ಇಬ್ಬರು ರೈತರು ಮಾತ್ರ ಕೂಲಿ ಜನರಿಂದ ಭತ್ತ ಕಟಾವು ಮಾಡಿಸುತಿದ್ದಾರೆ. ಆದರೆ ಮಳೆರಾಯ ಮಾತ್ರ ಯಾವುದಕ್ಕೂ ಅನುಕೂಲ ಮಾಡಿ ಕೊಡದಿರುವುದು ವಿಷಾದರ ಸಂಗತಿಯಾಗಿದೆ.

ಇತ್ತ.ಕುಮಟಾ,ಹೊನ್ನಾವರ,ಸಿರಸಿ,ಸಿದ್ದಾಪುರ ಗೋಕರ್ಣದಲ್ಲಿಯೂ ರೈತರು ಕಂಗಾಲಾಗಿ ನಿಂತಿದ್ದಾರೆ. ಆದರೆ ಇಲಾಖೆಯವರು ಹೇಗೆ ಇದಕ್ಕೆ ಸ್ಪಂದಿಸುತ್ತಾರೆ ಎಂಬುದೊಂದೇ ಈಗಿರುವ ಪ್ರಶ್ನೆ…