ಹೊನ್ನಾವರ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹೊನ್ನಾವರ ಹಾಗೂ ರಾಗಶ್ರೀ ಸಂಗೀತ – ಸಾಂಸ್ಕೃತಿಕ ಸಂಸ್ಥೆ ಹಡಿನಬಾಳ ಇವರ ಸಹಯೋಗದಲ್ಲಿ ಯಕ್ಷ ದ್ರುವ ತಾರೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸಂಸ್ಮರಣಾ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಕವಲಕ್ಕಿ ಶ್ರೀ ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಯಕ್ಷ ಲೋಕದ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಯವರಿಗೆ ನಾದ ನಮನ ಯಕ್ಷ ನಮನ ಹಾಗೂ ನುಡಿನಮನ ಸಲ್ಲಿಸಲಾಯಿತು.

RELATED ARTICLES  ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿಗೆ ಭಾಜನರಾದ ಉತ್ತರ ಕನ್ನಡ ಮೂಲದ ಶ್ರೀ ಆರ್.ಕೆ ಬಾಲಚಂದ್ರ

ಈ ಸಂದರ್ಭದಲ್ಲಿ ಖ್ಯಾತ ಗಾಯಕರು ಉಪನ್ಯಾಸಕರಾದ ಶ್ರೀ ಅಶೋಕ ಹುಗ್ಗಣ್ಣನವರು ಗಾನ ನಮನ ಸಲ್ಲಿಸಿದರು. ಇವರಿಗೆ ತಬಲಾದಲ್ಲಿ ಶ್ರೀ ಗೋಪಾಲಕೃಷ್ಣ ಹೆಗಡೆ ಕಲಭಾಗ ಹಾಗೂ ಸಂವಾಧಿನಿಯಲ್ಲಿ ಶ್ರೀ ವಿಶ್ವೇಶ್ವರ ಭಟ್ಟ ಖರ್ವಾ ಇವರು ಸಹಕರಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಚಿಟ್ಟಾಣಿಯವ ಜೊತೆಗಿನ ೊಡನಾಟು ಹಾಗೂ ಯಕ್ಷಲೋಕದಲ್ಲಿ ಅವರ ಸಾಧನೆಯನ್ನು ತೆರದಿಟ್ಟರು. ಯಕ್ಷಗಾನದ ಮೇರು ನಟನಿಗೆ ನುಡಿ ನಮನ ಸಲ್ಲಿಸಿದ ಕಸಾಪ ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ ಹಾಗೂ ಕಸಾಪ ಸದಸ್ಯರುಗಳು ಚಿಟ್ಟಾಣಿ ಅದೊಂದು ಅಮೂಲ್ಯ ರತ್ನವಾಗಿತ್ತು. ಅವರ ಜಾಗ ತುಂಬಲು ಅಂತಹುದೇ ಕಲಾವಿದರು ಹುಟ್ಟಿ ಬರಬೇಕಾಗಬಹುದು ಎಂದು ಅಭಿಪ್ರಾಯಪಟ್ಟರು.

RELATED ARTICLES  ದೇಶದ ಜನತೆಗೆ ಕಾಂಗ್ರೇಸ್ ಪಕ್ಷವೊಂದೇ ಆಶಾಕಿರಣ : ಮಾಜಿ ಸಚಿವ ಆರ್. ವಿ. ದೇಶಪಾಂಡೆ.

ರಾಗಶ್ರೀ ಸಂಸ್ಥೆಯ ಅಧ್ಯಕ್ಷ ಶಿವಾನಂದ ಭಟ್ಟ ಹಾಗೂ ಎಂ.ಜಿ ಹೆಗಡೆ ಕಪ್ಪೆಕೆರೆ, ಕಸಾಪದ ಕಾರ್ಯದರ್ಶಿ ಶಶಿಧರ ದೇವಾಡಿಗ ಹಾಗೂ ಇನ್ನಿತರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ನಡೆದ ಯಕ್ಷನಮನ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.