ಶಿರಸಿ: ಹಿಂದೂ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಆದೇಶ ವಿರೋಧಿಸಿ ಶಿರಸಿಯಲ್ಲಿ ಪಂಚ ಮಠಾಧೀಶರ ಉಪಸ್ಥಿತಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಈ ವೇಳೆ ಧಾರ್ಮಿಕ ಕೇಂದ್ರಗಳ ಮೇಲಿನ ಸರ್ಕಾರದ ಸವಾರಿಯನ್ನು ತೀವ್ರವಾಗಿ ಖಂಡಿಸಿ, ಹೋರಾಟವನ್ನು ಇನ್ನಷ್ಟು ತೀವ್ರ ಸ್ವರೂಪಕ್ಕೆ ಕೊಂಡೊಯ್ಯಲು ತೀರ್ಮಾನಿಸಲಾಯಿತು.

ನಗರದ ಕರ್ಜಗಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆ ಹಾಗೂ ಹೊರಜಿಲ್ಲೆಗಳ ಹಿಂದೂ ದೇವಾಲಯಗಳ ಮೊಕ್ತೇಸರರು, ಧರ್ಮದರ್ಶಿಗಳು, ಧಾರ್ಮಿಕ ಮುಖಂಡರು ಹಾಗೂ ಭಕ್ತರು ಭಾಗಿಯಾಗಿದ್ದರು.

RELATED ARTICLES  ಜನತೆಗೆ ಅವಶ್ಯಕವಿರುವ ಮೂಲಭೂತ ಸೌಕರ್ಯಗಳನ್ನು ಆದಷ್ಟು ಬೇಗನೆ ಒದಗಿಸಲು ತನ್ನ ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ : ಮಂಕಾಳ ವೈದ್ಯ

ಸಭೆಯಲ್ಲಿ ಪಾಲ್ಗೊಂಡಿದ್ದ ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ಮಠ, ಮಂದಿರಗಳು ಹಾಗೂ ದೇವಾಲಯಗಳು ಸರ್ಕಾರದ ಅನುದಾನವನ್ನು ಯಾವತ್ತೂ ಪಡೆಯಬಾರದು. ಮಠಾಧಿಪತಿಗಳನ್ನೂ ದಾರಿ ತಪ್ಪಿಸಿ ರಾಜಕಾರಣಿಗಳು ಮತ ಗಳಿಸಲು ಪ್ರಯತ್ನಿಸುತ್ತಾರೆ. ಈ ಬಗ್ಗೆ ಜನಸಾಮಾನ್ಯರು ಎಚ್ಚರದಿಂದ ಇರಬೇಕು ಎಂದರು.

RELATED ARTICLES  ಗಮನ ಸೆಳೆದ ವಿಜ್ಞಾನ ಮಾದರಿ ಪ್ರದರ್ಶನ : ಎಕ್ಸ್ಪೋ 2022 ಸಂಪನ್ನ

ಸ್ವಾದಿ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಹುಬ್ಬಳ್ಳಿ ಆರ್ಷ ವಿದ್ಯಾ ಗುರುಕುಲದ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿ, ಸಂಕಲ್ಪ ಸಂಸ್ಥೆ ಪ್ರಮುಖ ಪ್ರಮೋದ ಹೆಗಡೆ, ಸಾಮಾಜಿಕ ಧುರೀಣರಾದ ಶಶಿಭೂಷಣ ಹೆಗಡೆ, ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸೇರಿದಂತೆ ಹಲವರು ಹಾಜರಿದ್ದರು.