ಭಟ್ಕಳ : ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರರ ಸಂಘ, ಮುರ್ಡೇಶ್ವರ ಇದರ ವಾರ್ಷಿಕ ಸಮ್ಮೇಳನವು ನವೆಂಬರ್ 5 ರಂದು ಬೆಂಗ್ರೆಯ ಯಕ್ಷೆಮನೆಯ ದೇವಾಡಿಗ ಸಮುದಾಯ ಭವನದಲ್ಲಿ ಜರುಗಲಿದೆ.
ಈ ಸಮಾರಂಭದಲ್ಲಿ 2017ನೇ ಸಾಲಿನ ಮಾರ್ಚ/ಎಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹಾಗೂ ಪಿ.ಯು.ಸಿ. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 90 ಹಾಗೂ ಅದಕ್ಕೂ ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪದವಿಯಲ್ಲಿ ಕಲಾ, ವಿಜ್ಞಾನ, ವಾಣಿಜ್ಯ, ಬಿ.ಬಿ.ಎ., ಬಿ.ಸಿ.ಎ., ಬಿ.ಬಿ.ಎಂ. ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ತಲಾ ಎರಡು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು. ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ಸಮಾಜದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಝೆರಾಕ್ಸ್ ಪ್ರತಿಯನ್ನು ನವೆಂಬರ್ 1 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮಾದೇವ ಗದ್ದೆಮನೆ- 9449105559, ಮಂಜುನಾಥ ಜಿ. ದೇವಡಿಗ- 9449781932, ನಾರಾಯಣ ಜಿ. ದೇವಾಡಿಗ, ದೊಡ್ಮನೆ, ಮುಂಡಳ್ಳಿ -9480495517, ಕಮಲಾಕರ ಕೋಟಮಕ್ಕಿ- 9448893961, ಪದ್ಮಯ್ಯ ನಾರಾಯಣ ದೇವಡಿಗ, ಶಿರಾಲಿ- 9448319454, ಶಶಿಧರ ಆರ್. ದೇವಾಡಿಗ, ಹಳದೀಪುರ- 9480635260 ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷ ಮಾದೇವ ಗದ್ದೆಮನೆ, ಇವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.