ಕುಮಟಾ: ರೈತನ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗ್ವೆಖಾನ್ವಾಡಿಯಲ್ಲಿ ನಡೆದಿದೆ.

ಚಿರತೆದಾಳಿಗೊಳಗಾದ ವ್ಯಕ್ತಿಯನ್ನು ಮಾದೇವ ಓಮುಗೌಡ ಎಂದು ಗುರುತಿಸಲಾಗಿದೆ. ಕಾಡಿನಿಂದ ಬಂದ ಚಿರತೆಯೊಂದು ಮನೆಯ ಬೆಕ್ಕನ್ನು ಹಿಡಿಯಲು ಬಂದ ವೇಳೆ ಅಡ್ಡ ಬಂದ ಈತನ ಮೇಲೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ರಾತ್ರಿ ವೇಳೆಯ ಸಂದರ್ಭದಲ್ಲಿ ಏಕಾಏಕಿ ಮನೆಯೊಳಗೆ ನುಗ್ಗಿದ ಚಿರತೆ ದಾಳಿ ನಡೆಸಿದ್ದು, ದಾಳಿಯಿಂದ ವ್ಯಕ್ತಿಯ ಕೈ ಭಾಗದಲ್ಲಿ ಗಾಯವಾಗಿದೆ.

RELATED ARTICLES  ಸಿದ್ಧಾಪುರದಲ್ಲಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018' ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾಗೇರಿ.

ದಾಳಿ ನಡೆಸಿದ ಚಿರತೆ ತಕ್ಷಣದಲ್ಲಿ ಓಡಿ ಹೋಗಿದೆ. ಚಿರತೆ ದಾಳಿಗೊಳಗಾದವರನ್ನು ಕುಮಟಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.