ಕಾರವಾರ: ರಾಜ್ಯದಲ್ಲಿ 1987ರ ನಂತರ ಸಾಮಾನ್ಯ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪ್ರಾರಂಭವಾದ ಸುಮಾರು 87 ಕ್ಕೂ ಹೆಚ್ಚು ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಕ್ರಮ ಕೈಕೊಳ್ಳಲು ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಯವರು ಒಪ್ಪಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಅವರು ತಿಳಿಸಿದ್ದಾರೆ.

ಕಳೆದ 30 ವರ್ಷಗಳಿಂದ ರಾಜ್ಯದಲ್ಲಿ ಸಾಮಾನ್ಯ ಆಡಳಿತ ಮಂಡಳಿಯವರು ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸಿ ಸರಕಾರದಿಂದ ಅನುದಾನ ಪಡೆಯದೇ ಬಡ ಹಾಗೂ ಮಧ್ಯಮ ವರ್ಗದ ಯುವಕರಿಗೆ ಪದವಿ ಶಿಕ್ಷಣ ನೀಡುತ್ತಾ ಬಂದಿರುವವು. ಈ ಒಂದು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಸಿಬ್ಬಂದಿಗೆ ಸರಿಯಾದ ವೇತನ ಸಿಗದೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವರು.

RELATED ARTICLES  ಜನರಿಗೆ ನಾಯಿ ಮಾಂಸ ತಿನ್ನಿಸಿದವರಿಗೆ ಬಿತ್ತು ಬರೋಬ್ಬರಿ ಪೆಟ್ಟು..!

ಈ ಹಿನ್ನಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಅನುದಾನ ರಹಿತ ಪದವಿ ಕಾಲೇಜುಗಳನ್ನು ಕೂಡಲೇ ಅನುದಾನಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ವಿ.ಪ. ಸದಸ್ಯ ಎಸ್.ವ್ಹಿ. ಸಂಕನೂರ ಅವರು ತಿಳಿಸಿದ್ದಾರೆ. ಶಾಸಕರು ತಮ್ಮ ಮನವಿ ಪತ್ರದಲ್ಲಿ 1987 ರಿಂದ 1995 ರವರೆಗೆ ಎಸ್.ಸಿ/ಎಸ್.ಟಿ ಆಡಳಿತ ಮಂಡಳಿಗಳಿಂದ ಪ್ರಾರಂಭವಾಗಿರುವ ಪ್ರಥಮ ದರ್ಜೆ ಕಾಲೇಜುಗಳಿಗೆ ಈಗಾಗಲೇ ಸರಕಾರ ಅನುದಾನಕ್ಕೆ ಒಳಪಡಿಸಿದ್ದು, ಸಾಮಾನ್ಯ ಆಡಳಿತ ಮಂಡಳಿಯ ಪ್ರಥಮ ದರ್ಜೆ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸದೇ ಇರುವದು ಅನ್ಯಾಯದ ಸಂಗತಿಯಾಗಿದ್ದು, ಇದನ್ನು ಕೂಡಲೇ ಸರಿಪಡಿಸಲು ಒತ್ತಾಯಿಸಿದ್ದಾರೆ.

RELATED ARTICLES  ಅನಂತಕುಮಾರ ನಿಧನಕ್ಕೆ ಮಾಜಿ ಸಚಿವ ಶಿವಾನಂದ ನಾಯ್ಕ ಸಂತಾಪ

ಈ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿಯವರು ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳನ್ನೂ ಅನುದಾನಕ್ಕೆ ಒಳಪಡಿಸಲು ಇದೇ ನವೆಂಬರ 8 ಅಥವಾ 9 ರಂದು ಸಂಪುಟದ ಉಪಸಮಿತಿ ಸಭೆಯನ್ನು ಕರೆಯಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಿದ್ದಾರೆಂದು ಎಸ್.ವಿ. ಸಂಕನೂರ ಅವರು ತಿಳಿಸಿದ್ದಾರೆ.