ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಚಿತ್ರಕಲೆಯ ಕುರಿತು ಜನಜಾಗೃತಿಗಾಗಿ ಒಂದು ಬೃಹತ್ಹಾಗೂ ವ್ಯವಸ್ಥಿತ ಚಿತ್ರಸಂತೆಯನ್ನು ಆಯೋಜಿಸಿದ್ದು, ನಾಡಿನ ಚಿತ್ರಕಲಾವಿದರಿಗೆ ಸುವರ್ಣಅವಕಾಶವನ್ನುಕಲ್ಪಿಸಲಾಗಿದೆ.ನವಂಬರ್31 ರಿಂದಡಿಸೆಂಬರ್ 3ರವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಅಂಗಳದಲ್ಲಿ ಏರ್ಪಡಿಸಲಾಗಿರುವ ಈ ಚಿತ್ರಕಲಾ ಮೇಳವುನಾಡು ನುಡಿಯ ಸಂಸ್ಕೃತಿ ಹಬ್ಬದಲ್ಲಿ ಪಾಲ್ಗೊಳ್ಳುವ ಸಾವಿರಾರು ಕಲಾರಸಿಕರಿಗೆ ರಸದೌತಣ ನೀಡಲಿದೆ.

RELATED ARTICLES  ಚಂದ್ರಯಾನ-2 ಮತ್ತು ಬಾಹ್ಯಾಕಾಶ ವಿಜ್ಞಾನದ ಕುರಿತು ಕೊಂಕಣ ಎಜ್ಯುಕೇಶನ್‍ನಲ್ಲಿ ರಸಪ್ರಶ್ನೆ ಸ್ಪರ್ಧೆ

ರಾಜ್ಯದ ವಿವಿಧ ಜಿಲ್ಲೆಗಳ ಚಿತ್ರಕಲಾವಿದರುತಮ್ಮ ಕಲಾಕೃತಿಗಳ ಪ್ರದರ್ಶನದಜೊತೆಗೆ ಸ್ಥಳದಲ್ಲೇ ಮಾರಾಟವನ್ನೂ ಮಾಡಬಹುದು. ಕಲಾ ಶಾಲೆಗಳ ವಿದ್ಯಾರ್ಥಿಗಳೂ ತಮ್ಮ ಶಾಲಾ ಮುಖ್ಯಸ್ಥರಅನುಮತಿ ಪತ್ರದೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.ಒಬ್ಬರಿಗೆಒಂದು ಮಳಿಗೆಯನ್ನು ಮಾತ್ರ ಪಡೆಯಲುಅವಕಾಶವಿದ್ದು, ಕಲಾಕೃತಿಗಳ ಪ್ರದರ್ಶನಕ್ಕಾಗಿ 7 ಅಡಿ ಎತ್ತರ ಹಾಗೂ 10 ಅಡಿ ಅಗಲ ವಿಸ್ತಾರದ ಸಮತಳ ಮಳಿಗೆಗಳನ್ನು ನೀಡಲಾಗುವುದು.ಉಳಿದಂತೆ ಪ್ರದರ್ಶನಕ್ಕೆ ಬೇಕಾದಅಗತ್ಯ ವಸ್ತುಗಳನ್ನು ಚಿತ್ರಕಲಾವಿದರೇತರಬೇಕಾಗುತ್ತದೆ.

RELATED ARTICLES  ಪ್ರಕಟವಾದ ಮತದಾರರ ಪಟ್ಟಿಯ ಪರಿಷ್ಕರಣಾ ವೇಳಾ ಪಟ್ಟಿ : ಗಮನಿಸಬೇಕಾಗಿದೆ ಸಾರ್ವಜನಿಕರು.

ಡಿಸೆಂಬರ್1ರ ಬೆಳಿಗ್ಗೆ 9ಗಂಟೆಯೊಳಗೆ ಮಳಿಗೆಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಸಂಪೂರ್ಣಗೊಳಿಸಿರಬೇಕು.
ಕಲಾವಿದರುತಮ್ಮ ಮಳಿಗೆಗಳಲ್ಲಿ ಚಿತ್ರಕಲೆಯಕುರಿತುಪ್ರಾತ್ಯಕ್ಷಿಕೆ ನೀಡಬಹುದು.ಭಾಗವಹಿಸುವ ಪ್ರತೀಚಿತ್ರಕಲಾವಿದರಿಗೂಉಚಿತ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.ಇದರಜೊತೆಗೆಕಲಾವಿದರಿಗೆಅಭಿನಂದನಾ ಪತ್ರವನ್ನೂನೀಡಲಾಗುವುದು.ಆಸಕ್ತರು ನವಂಬರ್ 25ರೊಳಗೆwww.alvasnudisiri.com ಜಾಲತಾಣದಲ್ಲಿಆನ್ಲೈನ್ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಿದ ಕಲಾವಿದರಿಗೆ ಮಳಿಗೆ ಸಂಖ್ಯೆ ನೀಡಲಾಗುವುದು.