ಬೆಂಗಳೂರು: ಆಪಲ್ ಭಾರತದಲ್ಲಿಯೇ ಮೊದಲ ಭಾರಿ ತನ್ನ ಮೊಬೈಲ್ ತಯಾರಿಕಾ ಕಂಪೆನಿಯನ್ನು ಬೆಂಗಳೂರಿನಲ್ಲಿ ಆರಂಭಿಸುತ್ತಿರುವ ವಿಷಯ ಗೊತ್ತೇ ಇದೆ. ಸದ್ಯದ ಹೊಸ ವಿಷಯ ಏನೆಂದರೆ ಬೆಂಗಳೂರಿನಲ್ಲಿ ತಯಾರಾಗುವ ಆಪಲ್ ಸ್ಮಾರ್ಟ್‌ಫೋನ್‌ಗಳ ಬೆಲೆ ಕೇವಲ 10 ಸಾವಿರ ರೂಪಾಯಿಗಳಿಂದ ಶುರುವಾಗಲಿದೆ ಎಂಬುವುದು.
ಹೌದು. ಭಾರತಕ್ಕೆ ಅವಶ್ಯಕತೆ ಇರುವಷ್ಟು ಐಫೋನ್‌ಗಳನ್ನು ಬೆಂಗಳೂರಿನಲ್ಲಿಯೇ ತಯಾರಿಸಲು ಆಪಲ್ ಕಂಪೆನಿ ಮುಂದಾಗಿದೆ. ಬೆಂಗಳೂರಿನಲ್ಲಿ ತಯಾರಾದ ಐಫೋನ್ ಬೆಲೆ ಕೇವಲ 10 ಸಾವಿರ ರೂಪಾಯಿಗಳಿಂದ ಶುರು ಮಾಡಲು ಕಂಪೆನಿ ನಿರ್ಧರಿಸಿದೆ. ಸ್ಮಾರ್ಟ್‌ಫೋನ್‌ಗಳಲ್ಲದೇ, ಆಪಲ್ ಟಿವಿ, ಆಪಲ್ ವಾಚ್‌ಗಳು ಸಹ ಇಲ್ಲೇ ತಯಾರಾಗುತ್ತವೆ. ಸರ್ಕಾರಕ್ಕೆ ಸಲ್ಲಿಸುತ್ತಿರುವ ಆಮದು ತೆರಿಗೆ ಹಣವನ್ನು ಉಳಿಸಲು ಆಪಲ್ ಕಂಪೆನಿ ಎಲ್ಲಾ ಉತ್ಪನ್ನಗಳನ್ನು ಇಲ್ಲಿಯೇ ತಯಾರಿಸುತ್ತಿದೆ.
ಭಾರತದಲ್ಲಿ ಆಪಲ್ ಐಫೋನ್‌ಗಳಿಗೆ ಉತ್ತಮ ಮಾರುಕಟ್ಟೆ ಇದ್ದು, ಆಪಲ್‌ಗೆ ಪ್ರತಿವರ್ಷವೂ ಶೇ 21 ಪರ್ಸೆಂಟ್‌ನಷ್ಟು ಆದಾಯ ಹೆಚ್ಚುತ್ತಿದೆ. ಆದರೆ, ಈ ಮೊದಲು ಆಪಲ್ ಸ್ಮಾರ್ಟ್‌ಫೋನ್‌ಗಳ ದರ ಹೆಚ್ಚಾಗಿರುವುದರಿಂದ ಲಾಭದ ಪ್ರಮಾಣ ಕಡಿಮೆಯಾಗಿದೆ ಎಂದು ವರದಿಯಿಂದ ತಿಳಿದುಬಂದಿತ್ತು. ಹಾಗಾಗಿ, ಬೆಲೆ ಕಡಿಮೆಯಾದರೂ ಆಪಲ್ ಆದಾಯ ಹೆಚ್ಚುತ್ತದೆ!