ಬೆಂಗಳೂರು: ನೈರುತ್ಯ ಮುಂಗಾರು ನಿರ್ಗಮಿಸಿದ್ದು, ಹಿಂಗಾರು ಆಗಮನವಾಗಲಿದೆ. ದಕ್ಷಿಣ ಒಳನಾಡು ಸೇರಿದಂತೆ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಇತ್ತೀಚೆಗಷ್ಟೇ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜನ ಹೈರಾಣಾಗಿದ್ದರು. ಮತ್ತೆ ಮಳೆ ಅವಾಂತರ ಸೃಷ್ಠಿಸುವ ಆತಂಕ ಎದುರಾಗಿದೆ.

RELATED ARTICLES  ಗೌರಿ ಲಂಕೇಶ್ ಕಥೆ ಮುಗಿಯಿತು, ಈಗ ನಿಮ್ಮ ಸಮಯ ಬಂದಿದೆ : ಅನಾಮಧೇಯ ಜೀವ ಬೆದರಿಕೆ ಪತ್ರ

ಸಾಮಾನ್ಯವಾಗಿ ಈ ವೇಳೆಗೆ ಹಿಂಗಾರು ಆಗಮನವಾಗುತ್ತಿತ್ತು. ಈ ಬಾರಿ ಹಿಂಗಾರು ಪ್ರವೇಶ ತಡವಾಗಿದ್ದು, ಕೆಲವು ದಿನಗಳಿಂದ ಬಿಸಿಲ ವಾತಾವರಣ ಇದೆ. ಮತ್ತೆ ಕೆಲವು ಕಡೆಗಳಲ್ಲಿ ಬೆಳಗಿನ ವೇಳೆ ಮಂಜು ಕವಿದ ವಾತಾವರಣ ಕಂಡು ಬಂದಿದೆ.

RELATED ARTICLES  ಚಾಣಾಕ್ಷ ನಡೆಯತ್ತ ಎಲ್ಲರ ಚಿತ್ತ! ಅಖಾಡಕ್ಕೆ ಅಮಿತ್ ಶಾ, ಶುರುವಾಯ್ತು BJP ಆಟ

ಹಿಂಗಾರು ಮಳೆ ಚದುರಿದಂತೆ ಆಗಲಿದ್ದು, ಬೆಂಗಳೂರು ಮತ್ತು ಒಳನಾಡು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.