ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜದಿದ್ದರೆ ಹಲ್ಲುಗಳು ಹಾಳಾಗುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಹಲ್ಲಿನ ಬಗ್ಗೆ ಸರಿಯಾದ ಕಾಳಜಿ ವಹಿಸದಿದ್ದರೆ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಅಚ್ಚರಿಯ ಅಂಶ ತಜ್ಞರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ನಿತ್ಯ ಹಲ್ಲುಜ್ಜದಿದ್ದರೆ ಬಾಯಿಯಲ್ಲಿರುವ ವೈರಾಣುಗಳು ರಕ್ತದೊಂದಿಗೆ ಸೇರಿ ಹೃದಯ ಸೇರುತ್ತವೆ. ಈ ವೈರಾಣುಗಳು ರಕ್ತ ನಾಳಗಳನ್ನು ಬ್ಲಾಕ್ ಮಾಡುವ ಸಾಧ್ಯತೆಗಳಿರುತ್ತವೆ. ಇದರಿಂದ ಹೃದಯಾಘಾತ ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು. ಸರಿಯಾಗಿ ಹಲ್ಲುಜ್ಜದಿದ್ದರೆ ಹಲ್ಲಿನ ನಡುವೆ ಆಹಾರದ ಕಣಗಳು ಹಾಗೆಯೇ ಉಳಿದುಕೊಂಡು ಬ್ಯಾಕ್ಟೀರಿಯಾ ಬೆಳೆಯಲು ಸಹಕಾರಿಯಾಗುತ್ತವೆ. ಇದರಿಂದ ನಿಮ್ಮ ಬಾಯಿಯಿಂದ ದುರ್ನಾಥ ಬರಲು ಪ್ರಾರಂಭವಾಗುತ್ತದೆ.

RELATED ARTICLES  ಗಾಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಂದು ಸಿಹಿ ಸುದ್ದಿ!

ಈ ಬ್ಯಾಕ್ಟೀರಿಯಾಗಳು ಕ್ಯಾವಿಟಿ ಉಂಟು ಮಾಡಲೂಬಹುದು. ಸರಿಯಾಗಿ ಹಲ್ಲುಜ್ಜದಿದ್ದರೆ ದಂತಪಂಕ್ತಿ ಸಡಿಲಗೊಳ್ಳುತ್ತವೆ. ವಸಡುಗಳಲ್ಲಿ ರಕ್ತ ಬರಲು ಪ್ರಾರಂಭವಾಗುತ್ತದೆ. ಜತೆಗೆ ಹಲ್ಲಿನ ಬಣ್ಣ ಸಹ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಿತ್ಯ ಎರಡು ಬಾರಿ ಹಲ್ಲುಜ್ಜುವುದು ಒಳಿತು ಎಂದು ಸಲಹೆ ನೀಡುತ್ತಾರೆ ತಜ್ಞರು.

RELATED ARTICLES  ಗರಿಕೆ ಬೆಳೆಸಿ : ಆರೋಗ್ಯ ಗಳಿಸಿ