ಕಾರವಾರ:ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ‘ಬಾಬಾಸಾಹೇಬ ಡಾ.ಅಂಬೇಡ್ಕರ ನ್ಯಾಶನಲ್ ಫಿಲಾಸಫಿ ಅವಾರ್ಡ್‌’ಗೆ ತಾಲ್ಲೂಕಿನ ಶಿರವಾಡ ಗ್ರಾಮ ಪಂಚಾಯ್ತಿ ಸದಸ್ಯ ಉದಯ ಬಶೆಟ್ಟಿ ಆಯ್ಕೆಯಾಗಿದ್ದಾರೆ.

1984ರಲ್ಲಿ ಉಪಪ್ರಧಾನಿಯಾಗಿದ್ದ ಡಾ.ಬಾಬು ಜಗಜೀವನ್‌ ರಾಂ ಅವರು ಸ್ಥಾಪಿಸಿದ್ದ ಅಕಾಡೆಮಿಯು ೩೩ ವರ್ಷದ ಸಂಭ್ರಮಾಚರಣೆಯಲ್ಲಿದೆ. ಆ ನಿಮಿತ್ತ ನವದೆಹಲಿಯಲ್ಲಿ ಡಿಸೆಂಬರ್ ೯ ಮತ್ತು ೧೦ರಂದು ರಾಷ್ಟ್ರೀಯ ಸಮಾವೇಶ ನಡೆಯುತ್ತಿದ್ದು, ಈ ವೇಳೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮಸ್ಯೆಗೆ ಸ್ಪಂದಿಸಿ, ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ, ಸಮಾಜದ ಏಳ್ಗೆಗಾಗಿ ದುಡಿಯುವವರಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

RELATED ARTICLES  ಬ್ಯಾಂಕ್ ಚೆಕ್‌ಬುಕ್ ಸೌಲಭ್ಯ ಹಿಂಪಡೆಯಲಾಗುತ್ತಾ? ಇಲ್ಲಿದೆ ಸ್ಪಷ್ಟನೆ

ಅಕಾಡೆಮಿಯ ಮುಖ್ಯ ಪೋಷಕರಾಗಿ ಡಾ.ಮಾತಾ ಪ್ರಸಾದ್, ಮೆಝೋರಾಂನ ಮಾಜಿ ರಾಜ್ಯಪಾಲ ಡಾ.ಎ.ಪದ್ಮನಾಭನ್, ಮಾಜಿ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಸಿಂಧೆ, ಮಾಜಿ ಸಾಮಾಜಿಕ ನ್ಯಾಯ ಸಚಿವ ಡಾ.ಸತ್ಯನಾರಾಯಣ ಜಾಟಿಯಾ ಉದಯ ಬಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ.

RELATED ARTICLES  ಅಡಿಕೆ ತೋಟಕ್ಕೆ ಬೆಂಕಿ: ಸುಟ್ಟು ಕರಕಲಾಯ್ತು ಅರ್ಧ ಎಕರೆ ಅಡಿಕೆ ತೋಟ.