ಕುಮಟಾ: ಜೆ ಡಿ ಎಸ್ ಪಕ್ಷದ ಕಾಗಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಮಟ್ಟದ ಸಭೆಯನ್ನು ಅಘನಾಶಿನಿಯ ಮಾಸ್ತಿ ದೇವಸ್ಥಾನದ ಹತ್ತಿರ ಅಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಪ್ರದೀಪ ನಾಯಕ ಅವರು ಮಾತನಾಡಿ ಹೆಗಡೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ನಮ್ಮ ಪಕ್ಷ ಬಲಾಢ್ಯವಾಗಿದ್ದು ಮುಂಬರುವ ಚುನಾವಣೆಯಲ್ಲಿ ಗೆಲ್ಲಲು ಪಕ್ಶವನ್ನ ಇನ್ನಷ್ಟು ಸಂಘಟಿಸಬೇಕಾಗಿದ್ದು ಕಾರ್ಯಕರ್ತರು ಇನ್ನು ಹೆಚ್ಚಿನ ಕೆಲಸ ಮಾಡಬೇಕೆಂದರು, ಜನರು ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದು ಹಾಗೂ ಎರಡು ರಾಷ್ಟ್ರೀಯ ಪಕ್ಷಗಳಿಗೆ ರಾಷ್ಟ್ರೀಯ ನೀತಿಯ ಕೊರತೆಯಿದ್ದು ಒಬ್ಬರಿಗೊಬ್ಬರು ಕಚ್ಚಾಡುವದರಲ್ಲೇ ಕಾಲಹರಣ ಮಾಡುತ್ತಿದ್ದು ಅಭಿವೃದ್ಧಿ ಎನ್ನುವದು ಕೇವಲ ಭಾಷಣಕ್ಕೆ ಸೀಮಿತವಾಗಿದೆ,ಹಾಗಾಗಿ ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಜನ ನಿರ್ಧರಿಸಿದ್ದು ಕುಮಟಾ ಹೊನ್ನಾವರ ಕ್ಷೇತ್ರದಲ್ಲೂ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ತಿಳಿಸಿದರು,

RELATED ARTICLES  ಉತ್ತರಕನ್ನಡದ ಎಸ್.ಪಿ ಸುಮನ್ ಪೆನ್ನೇಕರ್ ಅವರಿಗೆ ಕೊರೋನಾ ಪಾಸಿಟಿವ್

ಈ ಸಂದರ್ಭದಲ್ಲಿ ತಾ ಪಂ ಸದಸ್ಯರಾದ ಈಶ್ವರ್ ನಾಯ್ಕ್ ಮಾತನಾಡಿದರು ಕಾರ್ಯಕ್ರಮದ ವೇದಿಕೆಯಲ್ಲಿ ಗಜು ನಾಯ್ಕ್, ಭಾಸ್ಕರ್ ಪಟಗಾರ್, ಸಿ ಜೆ ಗೌಡ,ಪಾರ್ವತಿ ಪಟಗಾರ್,ಎಸ್ ಟಿ ಗೌಡ,ಗಜು ಗೌಡ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್ ಎಸ್ ಹಳ್ಳೆರ,ನಾರಾಯಣ ಹಿಣಿ,ಜಗದೀಶ್ ಹಿಣಿ,
ತುಕರಾಮ್ ಪಟಗಾರ್,ದಿನೇಶ್ ಪಟಗಾರ್,ದಾಮೋಧರ್ ಲಕ್ಕುಮನೆ,ಅನಂತ್ ನಾಯ್ಕ್,ಅನಂತ್ ಗೌಡ,ದೇವಕಿ ಗೌಡ,ಖಾಧರ್, ಗೋವಿಂದ್ ಗೌಡ,ಮಂಜುನಾಥ್ ನಾಯ್ಕ್ ನಿರೂಪಣೆ ಮಾಡಿದರು,ಕಾರ್ಯಕ್ರಮವನ್ನು ಲಂಬೋಧರ್ ನಾಯ್ಕ್ ಅಯೋಜಿಸಿದ್ದು ಬೂತ್ ಮಟ್ಟದ ಸಭೆಗೆ ಸುಮಾರು 400ಕ್ಕಿಂತ್ ಹೆಚ್ಚಿನ ಜನರು ಆಗಮಿಸಿದ್ದು ವಿಶೇಷವಾಗಿತ್ತು.

RELATED ARTICLES  ಯಶಸ್ವಿಯಾದ ಕುಮಟಾ 'ಕುಮಾರಪರ್ವ' : ಬಿಸಿಲ‌ ಝಳದಲ್ಲೂ ಜನಸ್ತೋಮ ನೋಡಿ ಭಾವುಕರಾದ ಕುಮಾರಣ್ಣ.