ಭಟ್ಕಳ: ರೋಹಿಂಗ್ಯಾ ಮುಸಲ್ಮಾನರನ್ನು ಓಡಿಸಿ, ಭಾರತ ದೇಶವನ್ನು ಉಳಿಸಿರಿ ಎಂದು ಹಾಗೂ ರೋಹಿಂಗ್ಯಾ ಹಿಂದುಗಳ ಸುರಕ್ಷೆಗೋಸ್ಕರ ಭಾರತ ಸರಕಾರವು ಕೆಲಸ ಮಾಡಲಿ ಹಾಗೂ ಹಿಂದುಗಳ ಶ್ರದ್ದಾಸ್ಥಾನಗಳ ಘೋರ ಅನಾದರ ಮಾಡುವ ಹಾಗೂ ಸಮಾಜದ ಶಾಂತಿಯನ್ನು ಕದಡುವ ಪ್ರೋ. ಭಗವಾನರ ವಿರುದ್ಧ ಕಾನೂನೂ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿ ಭಟ್ಕಳ ಹಿಂದೂ ಜನಜಾಗೃತಿ ಸಮಿತಿಯೂ ಸಹಾಯಕ ಆಯುಕ್ತರ ಮೂಲಕ ಕೇಂದ್ರೀಯ ಗೃಹ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಮನವಿಯಲ್ಲಿ ಮ್ಯಾನ್ಮಾರ್‍ನಲ್ಲಿ ವಿಸ್ಥಾಪಿತಗೊಂಡ ರೋಹಿಂಗ್ಯಾ ಮುಸಲ್ಮಾನರು ಜಮ್ಮುವಿನಿಂದ ದೆಹಲಿ, ಬಂಗಾಲ, ಬಿಹಾರ, ತೆಲಂಗಾಣ ಹೀಗೆ ಹಲವಾರು ರಾಜ್ಯಗಳಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿದ್ದು, ಇತ್ತೀಚಿಗೆ ಬಾಂಗ್ಲಾದೇಶದಲ್ಲಿನ ರೋಹಿಂಗ್ಯಾ ಮುಸಲ್ಮಾನರು ಹಿಂದುಗಳ ಮೇಲೆ ಅತ್ಯಾಚಾರ ನಡೆಸಿ ಅವರ ಮನಪರಿವರ್ತನೆ ಮಾಡಲು ಪ್ರಯತ್ನಿಸಿ ನಮಾಜ್ ಪಠಿಸುವುದನ್ನು ಕಡ್ಡಾಯ ಮಾಡಿದ್ದರು. ಆದ್ದರಿಂದ ಸಂಪೂರ್ಣ ದೇಶದಲ್ಲಿ ಸಮಾನ್ಯ ನಾಗರಿಕರಿಗೆ ರೋಹಿಂಗ್ಯಾ ಮುಸಲ್ಮಾನರ ಮೇಲೆ ರೋಷವಿದೆ. ಆದ್ದರಿಂದ ಅವರಿಗೆ ದೇಶದಲಲಿ ಎಲ್ಲಿಐಊ ಸಹ ವಾಸಿಸಲು ಬಿಡಬಾರದು. ಇವರುಗಳಿಗೆ ಭಯೋತ್ಪಾದನೆ ಸಂಘಟನೆಯಾದ ಅಲ್ ಕೈಯದಾದೊಂದಿಗೆ ಸಂಬಂಧವಿದೆ. ಆದ್ದರಿಂದ ಭಾರತಕ್ಕೆ ನುಗ್ಗಿ ಬಂದಿರುವ ರೋಹಿಂಗ್ಯಾ ಮುಸಲ್ಮಾನರನ್ನು ತಕ್ಷಣ ದೇಶದಿಂದ ಹೊರತೆ ಹಾಕಬೇಕು ಹಾಗೂ ಅವರು ಮತ್ತೆ ಭಾರತದೊಳಗೆ ಪ್ರವೇಶಿಸುವುದನ್ನು ತಡೆಯಬೇಕು. ಅದೇ ರೀತಿ ಮ್ಯಾನ್ಮಾರಿನಲ್ಲಿ ರೋಹಿಂಗ್ಯಾ ಭಯೋತ್ಪಾದಕರು 88 ಹಿಂದುಗಳನ್ನು ಕೊಲೆ ಮಾಡಿದ್ದು, ಆರಾಕಾನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿಯು ರಖಾಯಿನ್ ಪ್ರಾಂತ್ಯದಲ್ಲಿ 28 ಹಿಂದುಗಳ ಸಾಮೂಹಿಕ ಕೋಲೆ ನಡೆಸಿತು.

RELATED ARTICLES  ಗೋಕರ್ಣ ರಾಮತೀರ್ಥದ ಗುಡ್ಡದ ಮೇಲೆ ಬೆಂಕಿ : ಕೆಲಕಾಲ ಗೊಂದಲ

ಆಗಸ್ಟ ತಿಂಗಳಿನಲ್ಲಿ ರಖಾಯಿನ್ ಪ್ರಾಂತ್ಯದಲ್ಲಿಇ ನಡೆದ ಹಿಂಸಾಚಾರದಿಂದ ಅಲ್ಲಿಂದ ಸಾವಿರಾರು ಹಿಂದುಗಳು ಓಡಿ ಹೋಗಿ ಬಾಂಗ್ಲಾದೇಶದಲ್ಲಿನ ಶರಣಾರ್ಥಿಗಳ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ರೋಹಿಂಗ್ಯಾ ಮುಸಲ್ಮಾನರು ಹಿಂದು ಮಹಿಳೆಯರ ಮಂತಾಂತರವನ್ನು ಮಾಡುತ್ತಿದ್ದು, ನಮಾಜ್ ಪಠಿಸಲು ಒತ್ತಾಯ ಪಡಿಸುತ್ತಿದ್ದಾರೆ. ಆದ್ದರಿಂದ ಭಾರತ ಸರಕಾರವು ರೋಹಿಂಗ್ಯಾ ಹಿಂದುಗಳ ಸುರಕ್ಷೆಯಂತಹ ಗಂಭೀರ ವಿಷಯವನ್ನು ವಿಶ್ವದ ಮೇಲೆ ತರಲು ಸಂಯುಕ್ತ ರಾಷ್ಟ್ರ ಸಂಘದಲ್ಲಿ ತನ್ನ ಪ್ರಸ್ತಾಪವ್ನು ಮುಂದಿಡಲಿ. ಹಾಗೂ ಶ್ರೀ ರಾಮ ದೇವರಲ್ಲ, ಕವಿ ವಾಲ್ಮೀಕಿಯೂ ಸಹ ಅವರನ್ನು ದೇವರೆಂದು ಹೇಳಿಲ್ಲ, ಶ್ರೀ ರಾಮ ಜಾತಿವಾದಿ ಎಂದೆಲ್ಲ ಹೇಳಿಕೆಯನ್ನು ಕೊಟ್ಟು ಪ್ರೋ.ಕೆ.ಎಸ್.ಭಗವಾನರು ಕೋಟಿ ಕೋಟಿ ಹಿಂದುಗಳ ಭಾವನೆಯನ್ನು ನೋಯಿಸಿದ್ದಾರೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಹೀಗೆ ಅವರಿಂದ ಪದೇ ಪದೇ ಇಂತಹ ಹೇಳಿಕೆಗಳು ಬರುತ್ತಲೇ ಇರುತ್ತದೆ. ಅಷ್ಟೇ ಅಲ್ಲದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದುಗಳ ದೇಔತೆಗಳ ಅನಾದರವನ್ನು ಮಾಡಿ ಸಾಮಾಜಿಕ ಶಾಂತಿಯನ್ನು ಭಂಗಗೊಳಿಸುವ ಪ್ರಯತ್ನ ಮಾಡಿದ್ದಾರೆ. ಆದ್ದರಿಂದ ಪ್ರೋ ಭಗವನಾರ ವಿರುದ್ಧ ಕಾನೂನು ಕ್ರವವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಭಟ್ಕಳ ಹಿಂದೂ ಜನಜಾಗೃತಿ ಸಮಿತಿಯೂ ಸಹಾಯಕ ಆಯುಕ್ತರ ಮೂಲಕ ಕೇಂದ್ರೀಯ ಗೃಹ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಅಧಿಕಾರಿ ಎಲ್.ಎ.ಭಟ್ಟ ಮನವಿ ಸ್ವೀಕರಿಸಿದರು.

ಈ ಸಂಧರ್ಭದಲ್ಲಿ ಭಟ್ಕಳ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಪುಂಡಲೀಕ ಪೈ, ಸೋಮೇಶ ಗುರವ, ದಯಾನಂದ ಪ್ರಭು, ರಾಮಚಂದ್ರ ನಾಯ್ಕ, ರಂಗ ಪ್ರಭು, ಮಾಸ್ತಪ್ಪ ನಾಯ್ಕ, ಉಲ್ಲಾಸ ಪ್ರಭು, ಗಂಗಾ ಮೋಗೇರ, ಸುರೇಶ ಲಿಂಗಪ್ಪ ನಾಯ್ಕ, ಸುಧಾಕರ ಮಹಾಲೆ ಹಾಗೂ ಮುಂತಾದವರು ಇದ್ದರು.