ಹೊನ್ನಾವರ : ಸಾಲಿಗ್ರಾಮ ಯಕ್ಷಗಾನ ಮೇಳದ ಸದಸ್ಯರಾಗಿರುವ ನುರಿತ ಹೆಸರಾಂತ ಯಕ್ಷಗಾನ ಕಲಾವಿದರಾಗಿರುವ ಚಂದ್ರಹಾಸ ಗೌಡ ಅವರು ಹೊನ್ನಾವರ ತಾಲೂಕಿನ ಹೊಸಪಟ್ಟಣದಲ್ಲಿ ಮೂರು ವರ್ಷದ ಮಗುವಿನಿಂದ ಹಿಡಿದು ಹದಿನೈದು ವರ್ಷದ ಬಾಲಕ ಬಾಲಕಿಯರಿಗೆ ಉಚಿತವಾಗಿ ಯಕ್ಷಗಾನ ಶಿಬಿರವನ್ನು ಹಮ್ಮಿಕೊಂಡಿದ್ದು ಈ ಶಿಬಿರಕ್ಕೆ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಭೇಟಿ ನೀಡಿದರು.

ಈ ಶಿಬಿರದಲ್ಲಿ ಬಾಲಕರೊಂದಿಗೆ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ತರಬೇತಿಯನ್ನು ಪಡೆದುಕೊಂಡಿರುವುದನ್ನು ಗಮನಿಸಿ ಸಂತಸ ವ್ಯಕ್ತಪಡಿಸುತ್ತಾ ಚಂದ್ರಹಾಸ ಗೌಡರು ತಾವು ಅರಗಿಸಿಕೊಂಡ ಯಕ್ಷಗಾನ ಕಲೆಯನ್ನು ತಮ್ಮೂರಿನ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಬೇಕು ಎಂಬ ಕೂಗಿಗೆ ಧ್ವನಿಯಾಗಿ ಆ ನಿಟ್ಟಿನಲ್ಲಿ ಅರ್ಥಪೂರ್ಣ ಹೆಜ್ಜೆಯನ್ನಿಟ್ಟಿರುವುದು ಗಮನಾರ್ಹವಾಗಿದೆ. ಮಕ್ಕಳ ಶಾಲೆಯ ರಜಾದಿನಗಳಲ್ಲಿ ಎರಡರಿಂದ ಮೂರು ಘಂಟೆಗಳವರೆಗೆ ಭೇಟಿ ನೀಡಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಸದೃಢತೆಯೊಂದಿಗೆ ಯಕ್ಷಗಾನದಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.

RELATED ARTICLES  ಅಂಕೋಲಾದ ದತ್ತಾತ್ರೇಯ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ

ಪುಟ್ಟ ಪುಟ್ಟ ಶಿಬಿರಾರ್ಥಿಗಳು ತಾವು ಕಲಿತದ್ದನ್ನು ಅದ್ಭುತವಾಗಿ ಕುಣಿತದ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದ್ದನ್ನು ವೀಕ್ಷಿಸಿದ ನಾಗರಾಜ ನಾಯಕ ತೊರ್ಕೆಯವರು ಹೃದಯಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿ ಚಿಣ್ಣರಿಗೆ ಶುಭ ಹಾರೈಸಿದರು. ಹಾಗೂ ಬಿಡುವಿನ ವೇಳೆಯಲ್ಲಿ ಯಕ್ಷಗಾನ ಕಲಿಕೆಯನ್ನು ಮುಂದುವರಿಸುವಂತೆ ಕಿವಿಮಾತು ಹೇಳಿ ಸಂಘಟಕರಿಗೆ ಧನಸಹಾಯ ನೀಡಿದರು.

RELATED ARTICLES  ಎರಡೂವರೆ ಕೋಟಿ ರೂಪಾಯಿ ಮೌಲ್ಯದ ಬ್ರೌನ್ ಶುಗರ್ ವಶ

ಚಂದ್ರಹಾಸ ಗೌಡ ಅವರು ಓರ್ವ ವೃತ್ತಿಪರ ಯಕ್ಷಗಾನ ಕಲಾವಿದರಾದ್ದರಿಂದ ನವೆಂಬರ ತಿಂಗಳ ಮಧ್ಯಭಾಗದಲ್ಲಿ ಮೇಳಗಳು ಪ್ರಾರಂಭವಾಗುವುದರಿಂದ ಅವರ ಅನುಪಸ್ಥಿತಿಯಲ್ಲಿ ಮಕ್ಕಳಿಗೆ ತರಬೇತಿ ನೀಡಲು ಇನ್ನೋರ್ವ ನಿಪುಣ ಕಲಾವಿದರನ್ನು ನೇಮಿಸಿ ಮಕ್ಕಳ ಕಲಿಕೆಗೆ ಚ್ಯುತಿ ಬಾರದಂತೆ ಕ್ರಮ ಕೈಗೊಂಡು ತಮ್ಮ ಕಾರ್ಯಕ್ಷಮತೆಯನ್ನು ಮೆರೆದಿರುತ್ತಾರೆ.

ಈ ಸಂದರ್ಭದಲ್ಲಿ ಮುಗ್ವಾ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಹನುಮಂತ ನಾಯ್ಕ, ಪ್ರಶಾಂತ ಗಾಂವಕರ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.