ಅಂಕೋಲಾ : ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 3000 ಮೀ. ಓಟ, 1500 ಮೀ. ಓಟ, 800 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿರುವ ಪಿ.ಎಂ. ಹೈಸ್ಕೂಲಿನ ವಿದ್ಯಾರ್ಥಿನಿ ಅಕ್ಷತಾ ಪೊಕ್ಕ ಗೌಡ ಇವಳಿಗೆ ತಾಲೂಕಿನ ಮಂಜಗುಣಿ ಗ್ರಾಮದ ಸೇವಾ ಸಂಸ್ಥೆಯಾದ ಅಪ್ಪ ಅಮ್ಮ ಸೇವಾ ಸಂಸ್ಥೆ ವತಿಯಿಂದ ಸನ್ಮಾನಿಸಿ ಎರಡು ಸಾವಿರ ರೂ. ಸಹಾಯಧನ ನೀಡಲಾಯಿತು. ಸೇವಾ ಸಂಸ್ಥೆಯ ಸಂಚಾಲಕರಾದ ಜಿ.ಆರ್. ತಾಂಡೇಲರವರು ಈಕೆಯನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಆರ್.ವಿ. ಕೇಣಿ ಮಾತನಾಡಿ, ವಿದ್ಯಾರ್ಥಿಗಳು ಪ್ರಯತ್ನಪಟ್ಟರೆ ಯಶಸ್ಸು ಖಂಡಿತ. ಆ ದಿಶೆಯಲ್ಲಿ ಅಕ್ಷತಾ ಗೌಡ ಬಡ ಕುಟುಂಬದಲ್ಲಿ ಜನಿಸಿದರೂ ಶಾಲೆಗೆ ಕೀರ್ತಿ ತಂದಿರುವುದು ಸಂತೋಷದ ವಿಷಯ ಎಂದರು. ಶಿಕ್ಷಕರಾದ ನಾಗಪತಿ ಹೆಗಡೆ, ವಿ.ಎಂ. ನಾಯ್ಕ, ವಿ.ಕೆ. ನಾಯಕ, ಪ್ರಕಾಶ ಕುಂಜಿ, ಶೀಲಾ ಐ. ಬಂಟ, ರೇಷ್ಮಾ ಮಾನಕಾಮೆ, ಸವಿತಾ ಪಿ.ಟಿ., ಮುಗ್ದುಮ್ ಅಲ್ಗೋಡಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.