ಹೊನ್ನಾವರ :ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯವು ತಲಾ ರೂ.10 ಸಾವಿರ ದಂಡ ಹಾಗೂ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೆಳಗಿನೂರಿನ ವಿಷ್ಣು ಗಣಪತಿ ಗೌಡ, ನಾರಾಯಣ ದೇವಾ ಗೌಡ ಹಾಗೂ ಭಾಸ್ಕರ ಮಂಜು ಗೌಡ ಶಿಕ್ಷೆಗೊಳಗಾದವರು.

RELATED ARTICLES  ಕುಮಟಾ ಅರ್ಬನ್ ಬ್ಯಾಂಕ್ ವತಿಯಿಂದ ಪ್ರತಿಭಾ ಪುರಸ್ಕಾರ: ಸಾಧಕ ೧೪ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಡಳಿಯೊಂದಕ್ಕೆ ದೇಣಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜು ಶಂಭು ಗೌಡ ಎಂಬುವರ ಮೇಲೆ ಆರೋಪಿ ಹಲ್ಲೆ ನಡೆಸಿದ್ದರು. ಈ ಕುರಿತು ಮಂಕಿ ಪೋಲಿಸ್ ಠಾಣೆಯಲ್ಲಿ ಮೇ.13,2016 ರಂದು ದೂರು ದಾಖಲಾಗಿತ್ತು. ಪಿಎಸ್‍ಐ ಕೆ.ಎಸ್.ಸುಂಕದ್ ಪ್ರಕರಣದ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

RELATED ARTICLES  ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಮಹಿಳಾ ದಿನಾಚರಣೆ: ಮಹಿಳೆ ಮನುಕುಲವನ್ನೇ ಹೊತ್ತ ಜಗಜ್ಜನನಿ! -ಎನ್.ಆರ್.ಗಜು

ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್‍ಸಿ ನ್ಯಾಯಾಧೀಶ ಮಧುಕರ ಭಾಗ್ವತ ಆರೋಪಿಗಳಿಗೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಎಸಿಪಿ ಬದರೀನಾಥ ದೂರುದಾರರ ಪರವಾಗಿ ವಾದ ಮಂಡಿಸಿದ್ದರು.