ಶಿರಸಿ – ಸೋಂದಾ ವಾದಿರಾಜಮಠದಿಂದ ಹುಬ್ಬಳ್ಳಿಗೆ ನೂತನ ವೇಗದೂತ ಸಾರಿಗೆಯನ್ನು ಶಿರಸಿ ಘಟಕದಿಂದ ಪ್ರಾರಂಭಿಸಲಾಗಿದೆ.ವಾದಿರಾಜಮಠದಿಂದ ಹೊರಡುವ ಬಸ್ಸು ಮಧ್ಯಾಹ್ನ 02. ಗಂಟೆಯಿಂದ ಸ್ವರ್ಣವಲ್ಲಿಮಠ, ಉಮಚಗಿ, ಮಾವಿನಕಟ್ಟಾ, ಚಿಪಗೇರಿ, ಚಳಗೇರಿ, ಕಾತೂರು, ಮುಂಡಗೋಡ ಮಾರ್ಗವಾಗಿ ಹುಬ್ಬಳ್ಳಿಯನ್ನು ಸಂಜೆ 4.45ಕ್ಕೆ ಮತ್ತು ಮರುದಿನ ಹುಬ್ಬಳ್ಳಿಯಿಂದ ಬೆಳ್ಳಗ್ಗೆ 07.30ಕ್ಕೆ ಹೊರಡಲಿದ್ದು 10.30 ಗಂಟೆಗೆ ಸೋಂದ ವಾದಿರಾಜಮಠವನ್ನು ತಲುಪಲಿದೆ.
ಪ್ರಯಾಣಿಕರ ಬೇಡಿಕೆ ಮೆರೆಗೆ ವೇಗದೂತ ಸಾರಿಗೆ ಆರಂಭಿಸಲಾಗಿದೆ ಎಂದು ವಾಕರಸಾಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.