ಪ್ರಸಕ್ತ ದಿನಗಳಲ್ಲಿ ಕೂದಲು ಉದುರುವಿಕೆ ಸಾಮಾನ್ಯ. ಹಿಂದೊಂದು ಕಾಲದಲ್ಲಿ ವೃದ್ಧಾಪ್ಯ ಬಂದರೆ ಮಾತ್ರ ಕೂದಲು ಉದುರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ 20ನೇ ವಯಸ್ಸಿಗೇ ಕೂದಲು ಉದುರಲು ಪ್ರಾರಂಭವಾಗಿ ಬಿಟ್ಟಿದೆ. ಅಲ್ಲದೆ ಇಂತಹ ಸಮಸ್ಯೆ ಎದುರಿಸುವವರು ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಹೋಗಿ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ಬಗೆ ರಾಸಾಯನಿಕ ಶಾಂಪೂಗಳಿಗೆ ಮರುಳಾಗಿ, ಕೊನೆಗೆ ಯಾವುದೇ ಫಲಿತಾಂಶ ಕಾಣದೇ ಬೇಸತ್ತು ಹೋಗಿರುತ್ತಾರೆ. ಮೊದಲಿಗೆ ಕೂದಲು ಯಾಕೆ ಉದುರುತ್ತದೆ ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ನಾವು ತಿಳಿದುಕೊಳ್ಳುವುದು ಅತ್ಯಗತ್ಯ.

ಸಾಮಾನ್ಯವಾಗಿ, ಆರೋಗ್ಯವಂತ ಮನುಷ್ಯನಲ್ಲಿ ಪ್ರತಿ ದಿನ 50 ರಿಂದ 100 ಕೂದಲು ಉದುರುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ. ಆದರೆ ಇವುಗಳಿಗಿಂತಲೂ ಮಿಗಿಲಾಗಿ ಇಂದಿನ ಒತ್ತಡ ಮತ್ತು ಅಧಿಕ ಕೆಲಸದಿಂದ ಕೂಡಿದ ಜೀವನ ಶೈಲಿಯೇ ಕೂದಲು ಉದುರುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಯಾವಾಗ ನಾವು ಆರೋಗ್ಯಕರವಾದ ಆಹಾರ ಮತ್ತು ಜೀವನ ಶೈಲಿಗೆ ಬೆನ್ನು ಮಾಡಿ ಸಾಗುತ್ತೇವೆಯೋ, ಆಗ ಅದರಿಂದ ನಮ್ಮ ಸೌಂದರ್ಯ ಮತ್ತು ಕೂದಲಿನ ಮೇಲೆ ಇದರ ದುಷ್ಪರಿಣಾಮಗಳು ಕಂಡು ಬರುತ್ತವೆ. ಅಲ್ಲದೆ ಕೆಲವೊಮ್ಮೆ ಆರೋಗ್ಯಕರವಾದ ಡಯಟ್ ನಿಮ್ಮ ಕೂದಲಿಗೆ ಒಳ್ಳೆಯ ಲುಕ್ ನೀಡಿದರೆ, ಡಯಟ್‌ನಿಂದಾಗುವ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು, ನಿಮ್ಮ ಕೂದಲು ಉದುರುವಿಕೆಗೆ ಮತ್ತು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ನಿಮ್ಮ ತಲೆಯಲ್ಲಿ ಬೊಕ್ಕ ತಲೆಯ ಲಕ್ಷಣಗಳನ್ನು ನೀವು ಗುರುತಿಸಿದಲ್ಲಿ, ಅದಕ್ಕೆ ನೀವು ಸೇವಿಸುತ್ತಿರುವ ಕೆಟ್ಟ ಊಟ ಮತ್ತು ತಲೆ ಕೂದಲಿಗೆ ಬಳಸುತ್ತಿರುವ ಕೆಟ್ಟ ಪದಾರ್ಥಗಳೇ ಕಾರಣ ಎಂದು ತಿಳಿಯಿರಿ. ಚಿಂತಿಸಬೇಡಿ, ಬೊಕ್ಕ ತಲೆಯ ಮೇಲೆ ಕೂದಲು ಬೆಳೆಯಲು ಮನೆಯಲ್ಲಿಯೇ ಹಲವಾರು ಮನೆ ಮದ್ದುಗಳು ದೊರೆಯುತ್ತವೆ.

RELATED ARTICLES  ಬಾಳೆಹಣ್ಣು ಆವಕಾಡೊ(ಬೆಣ್ಣೆ ಹಣ್ಣು) ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುವುದು.

ಅವುಗಳನ್ನು ಸುಲಭವಾಗಿ ಬಳಸಿಕೊಂಡು, ಸ್ವಾಭಾವಿಕವಾಗಿ ನಿಮ್ಮ ತಲೆಯಲ್ಲಿ ಕೂದಲನ್ನು ಬೆಳೆಯುವ ಹಾಗೆ ಮಾಡಬಹುದು!, ಬನ್ನಿ ಅದಕ್ಕಾಗಿ ಯಾವ ಮನೆ ಮದ್ದುಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ..

ಹೀರೇಕಾಯಿ (Ribbed Gourd) ಹಿಗ್ಗಿ ಹಿಗ್ಗಿ ಹೀರೇಕಾಯಿಯಾದ ಎಂಬ ಗಾದೆಯೇ ಇದೆ. ಇಲ್ಲಿ ಹಿಗ್ಗಲು ಕಾರಣ ಇದರ ಕೂದಲ ರಕ್ಷಣೆಯ ಶಕ್ತಿ. ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಅದರಲ್ಲಿ ಹೀರೇಕಾಯಿಯನ್ನು ಅಡ್ಡಲಾಗಿ ಕತ್ತರಿಸಿದ ಕೆಲವು ಹೋಳುಗಳನ್ನು ಚಿಕ್ಕ ಉರಿಯಲ್ಲಿ ಕುದಿಸಿ. ಎಷ್ಟು ಕುದಿಸಬೇಕು ಎಂದರೆ ಈ ಹೋಳುಗಳು ಸುಟ್ಟು ಕಪ್ಪಗಾಗುವಷ್ಟು. ಬಳಿಕ ಈ ಎಣ್ಣೆಯನ್ನು ತಣಿಯಲು ಬಿಟ್ಟು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ಎಣ್ಣೆಯನ್ನು ನಿತ್ಯವೂ ತಲೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ನಯವಾಗಿ ಮಸಾಜ್ ಮಾಡಿ. ಇದರಿಂದ ಕೂದಲು ಉದುರುವ ಸಾಧ್ಯತೆ ಕಡಿಮೆಯಾಗುತ್ತದೆ.

ಪೇರಳೆ ಮರದ ಎಲೆಗಳು ಕೆಲವು ಪೇರಳೆ ಎಲೆಗಳನ್ನು (ತುಂಬಾ ಬಲಿತವೂ ಅಲ್ಲ, ತೀರಾ ಎಳೆಯವೂ ಅಲ್ಲ) ಕೊಂಚ ನೀರಿನೊಂದಿಗೆ ನಯವಗಿ ಅರೆಯಿರಿ. ಈ ಲೇಪನವನ್ನು ದಪ್ಪನಾಗಿ ತಲೆಯ ಕೂದಲಿಗೆ ಹಚ್ಚಿ ಒಣಗಲು ಬಿಡಿ. ಇಪ್ಪತ್ತು ನಿಮಿಷದ ಬಳಿಕ ಕೇವಲ ತಣ್ಣೀರು ಉಪಯೋಗಿಸಿ ತೊಳೆದುಕೊಳ್ಳಿ. ಇದು ಕೂದಲು ಉದುರುವುದನ್ನು ತಡೆಯುವುದರ ಜೊತೆಗೇ ಕೂದಲಿಗೆ ಕಾಂತಿ ನೀಡಲೂ ನೆರವಾಗುತ್ತದೆ. ಅಶ್ವಗಂಧ ಬೊಕ್ಕ ತಲೆ ತಡೆಯಲು ಅಶ್ವಗಂಧ ಸೂಕ್ತವಾಗಿದೆ.

ಅಶ್ವಗಂಧ ಪುಡಿಯನ್ನು ಕೊಂಚ ಬಿಸಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ನಿತ್ಯದ ಉಪಯೋಗದಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಉದುರಿದ್ದ ಕೂದಲಿನ ಸ್ಥಾನದಲ್ಲಿ ಹೊಸ ಕೂದಲು ಬೆಳೆಯಲೂ ನೆರವಾಗುತ್ತದೆ. ಮಾವಿನ ಗೊರಟು ಮಾವಿನ ಗೊರಟನ್ನು ತೆರೆದು ಒಳಗಿನ ಬೀಜವನ್ನು ಹೊರತೆಗೆಯಿರಿ. ಈ ಬೀಜವನ್ನು ಕುಟ್ಟಿ ಪುಡಿಮಾಡಿ ಕೊಂಚ ನೆಲ್ಲಿಕಾಯಿ ಪುಡಿಯೊಂದಿಗೆ ನೀರಿನಲ್ಲಿ ಸೇರಿಸಿ ದಪ್ಪನಾದ ಲೇಪನವಾಗುವಂತೆ ಅರೆಯಿರಿ. ಕೂದಲನ್ನು ನೀರಿನಿಂದ ಒದ್ದೆ ಮಾಡಿ ಈ ಲೇಪನವನ್ನು ದಪ್ಪನಾಗಿ ಕೂದಲಿಗೆ ಹಚ್ಚಿ ಇಪತ್ತು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದಲೂ ಬೊಕ್ಕ ತಲೆಯಾಗುವ ಸಂಭವ ತಡವಾಗುತ್ತದೆ. ಗೋರಂಟಿ ಎಲೆಗಳು / ಮದರಂಗಿ ಎಲೆಗಳು ಇದು ಭಾರತದಲ್ಲಿ ಅತ್ಯಂತ ಪ್ರಸಿದ್ಧ ಕೇಶವರ್ಧಕ ಮತ್ತು ಕೂದಲನ್ನು ಕಪ್ಪಾಗಿಡಲು ಬಳಸುವ ಔಷಧ. ಇದು ಮದುವೆಯ ಸಮಯದಲ್ಲಿ ಕೈಯಲ್ಲಿ ಬಿಡಿಸುವ ವಿವಿಧ ಚಿತ್ತಾರಗಳ ಕಾರಣದಿಂದಲೂ ಬಹಳ ಪ್ರಸಿದ್ಧ.

RELATED ARTICLES  ಆರೋಗ್ಯಕರ ಜೀವನದ ಗುಟ್ಟು ಏನು ಗೊತ್ತಾ?

ಸಾಸಿವೆ ಎಣ್ಣೆಯಲ್ಲಿ ಮದರಂಗಿ ಎಲೆಗಳನ್ನು ಬೇಯಿಸಬೇಕು ಇದನ್ನು ಸಾಮಾನ್ಯ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಾಗೂ ತಲೆಯ ಮೇಲೆ ಹಚ್ಚಿಕೊಳ್ಳಿ. ನೆಲ್ಲಿಕಾಯಿ ಕೂದಲಿನ ವೃದ್ಧಿಸಲು ಹಾಗೂ ಕೂದಲನ್ನು ಸುಸ್ಥಿತಿಯಲ್ಲಿಡುವಲ್ಲಿ ನೆಲ್ಲಿಕಾಯಿಯ ಪಾತ್ರ ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿರುವ ವಿಟಮಿನ್ ಸಿ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೆಲ್ಲಿಕಾಯಿ ರಸ ಮತ್ತು ಲಿಂಬೆ ಹಣ್ಣಿನ ರಸಗಳ ಮಿಶ್ರಣವನ್ನು ಕೂದಲು ಉದುರಿರುವ ಜಾಗಕ್ಕೆ ಹಚ್ಚಿ, ಅಲ್ಲದೆ ಒಂದು ದಿನ ಹಾಗೆಯೇ ಬಿಡಿ ಹಾಗೂ ಮರುದಿನ ಸ್ನಾನ ಮಾಡುವಾಗ ನೈಸರ್ಗಿಕ ಶಾಂಪೂ ಬಳಸಿ ಸ್ನಾನ ಮಾಡಿ. ಮೆಂತೆ ಗಿಡ ಮೆಂತೆ ಗಿಡ ಮತ್ತು ಸೊಪ್ಪು ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಮಕಾರಿ ದಾರಿಯಾಗಿದೆ.