ಉತ್ತರ ಕೊರಿಯಾಗಿಂತ ಪಾಕಿಸ್ತಾನ ಹೆಚ್ಚು ಅಪಾಯಕಾರಿ. ಪಾಕಿಸ್ತಾನ ಸರಕಾರಕ್ಕೆ ನ್ಯೂಕ್ಲಿಯರ್ ಶಸ್ತ್ರಸ್ತ್ರಾಗಳ ಮೇಲೆ ನಿಯಂತ್ರಣವೇ ಇಲ್ಲ. ಜಗತ್ತಿಗೇ ಅತ್ಯಂತ ಅಪಾಯಕಾರಿಯಾದ ನ್ಯೂಕ್ಲಿಯರ್ ಅನ್ನು ಯಾರೂ ಬೇಕಾದರೂ ಮಾರಾಟ ಅಥವಾ ಕಳ್ಳತನ ಮಾಡಬಹುದು.
ಹೀಗೆಂದು ಎಚ್ಚರಿಕೆ ನೀಡಿದ್ದು ಅಮೆರಿಕದ ಆಯುಧ ನಿಯಂತ್ರಣ ಉಪ ಸಮಿತಿಯ ಮಾಜಿ ಅಧ್ಯಕ್ಷ ಲ್ಯಾರಿ ಪ್ರೆಸ್ಲರ್ ಎಚ್ಚರಿಸಿದ್ದಾರೆ. ಪಾಕಿಸ್ತಾನದಲ್ಲಿನ ನ್ಯೂಕ್ಲಿಯರ್ ಗಳು ಅಮೆರಿಕ ವಿರುದ್ಧವೇ ಬಳಕೆಯಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಪರಿಸ್ಥಿತಿ ಹೇಗಿದೆ ಅಂದರೆ ಯಾವುದೋ ಜನರಲ್ ಅಥವಾ ಕರ್ನಲ್ ಮಟ್ಟದ ಅಧಿಕಾರಿಯೇ ನ್ಯೂಕ್ಲಿಯರ್ ಮಾರಿಬಿಡಬಹುದು.
ಪ್ರಸ್ತುತ ಪಾಕಿಸ್ತಾನಕ್ಕೆ ಅಮೆರಿಕ ಎಫ್-16 ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ಮಾರದೇ ಇರಲು ನಿರ್ಧರಿಸಿದೆ. ಇತ್ತೀಚೆಗೆ ಎರಡೂ ದೇಶಗಳ ನಡುವಣ ಸಂಬಂಧ ಕೂಡ ಹಳಸುತ್ತಾ ಬಂದಿದ್ದು, ಉಗ್ರರನ್ನು ಹಸ್ತಾಂತರಿಸುವಂತೆ ಪಟ್ಟಿಯನ್ನೂ ನೀಡಿದೆ.