ಮಾಲಿನ್ಯ ತಡೆಗಟ್ಟಲು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ 2040ನೇ ಇಸವಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಮಾರಾಟವನ್ನು ನಿಷೇಧಿಸಲು ಚಿಂತನೆಗಳು ನಡೆದಿವೆ.

ಅಂದಹಾಗೆ ಭಾರತೀಯರೇನು ಗಾಬರಿ ಪಡುವ ಅವಶ್ಯಕತೆಯಿಲ್ಲ. ಏಕೆಂದರೆ ಈ ಆಲೋಚನೆ ಮಾಡಿರುವುದು ಬ್ರಿಟನ್ ಸರ್ಕಾರ.

ಹೈಬ್ರೀಡ್ ವಾಹನಗಳನ್ನು ಉಪಯೋಗಿಸುವಂತೆ ಅಲ್ಲಿನ ಸರ್ಕಾರ ಈಗಾಗಲೇ ಕಟ್ಟಪ್ಪಣೆ ಮಾಡುತ್ತಿದೆಯಂತೆ. ದಿನದಿಂದ ದಿನಕ್ಕೆ ಪರಿಸರ ಮಾಲಿನ್ಯಗೊಳ್ಳುತ್ತಿರುವುದರಿಂದ ಜನರ ಆರೋಗ್ಯ ಸಮಸ್ಯೆ ದೊಡ್ಡ ಸವಾಲಾಗಿ ಮಾರ್ಪಟ್ಟಿರುವುದರಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

RELATED ARTICLES  ಬ್ಯಾಂಕ್ ಹಣದಲ್ಲಿಯೇ ಆನ್ಲೈನ್ ಗೇಮ್ ಆಡಿ ಕಳೆದ ಮ್ಯಾನೇಜರ್..!

ಈಗಾಗಲೇ ಬ್ಯಾಟರಿ ಚಾಲಿತ ವಾಹನಗಳ ಮಾರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹ ನೀಡುತ್ತಿರುವುದರ ಜತೆಗೆ ಇವುಗಳ ಮೇಲೆ ತೆರಿಗೆ ವಿನಾಯಿತಿ ನೀಡುವ ಮೂಲಕ ಮಾರಾಟಕ್ಕೂ ಉತ್ತೇಜನ ನೀಡಲಾಗುತ್ತಿದೆ.

ಬ್ರಿಟನ್ ಸರ್ಕಾರದ ಈ ದೂರದೃಷ್ಟಿ ನಮ್ಮ ದೇಶದ ರಾಜಕಾರಣಿಗಳಿಗೂ ಬರುವುದು ಯಾವಾಗ? ದಿನೇ ದಿನೇ ಹೊಸಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಹಣ ಮಾಡಿಕೊಳ್ಳಲು ಮುಂದಾಗುತ್ತಿರುವ ಕಾರು ಕಂಪನಿಗಳಿಗೆ ಉತ್ತೇಜನ ನೀಡುವುದಕ್ಕೆ ಬದಲಾಗಿ ಬ್ಯಾಟರಿ ಚಾಲಿತ ವಾಹನಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದರೆ ತಾನೇ ತಾನಾಗಿ ಬ್ಯಾಟರಿ ಕಾರುಗಳ ಓಡಾಟ ಹೆಚ್ಚಾಗುತ್ತದೆ.

RELATED ARTICLES  ಕುಮಟಾದ ಆಭರಣ ಚಿನ್ನಾಭರಣ ಮಳಿಗೆ ಮೇಲೆ ಐ.ಟಿ ದಾಳಿ?

ಇದರ ಜೊತೆಗೆ ಪೆಟ್ರೋಲ್ ಬಂಕ್ ಗಳ ಮಾದರಿಯಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಪ್ರತಿ 5 ಕಿ.ಮೀ.ಗೊಂದರಂತೆ ನಿರ್ಮಿಸಿದರೆ ನಮ್ಮಲ್ಲೂ ಪೆಟ್ರೋಲ್, ಡಿಸೇಲ್ ಕಾರುಗಳ ಅಬ್ಬರ ತಗ್ಗಿ ಪರಿಸರವೂ ಉಳಿದುಕೊಳ್ಳುತ್ತದೆ. ಆದರೆ ಇದು ಜಾರಿಗೆ ಬರುತ್ತದೆಯೇ ಎಂಬುದು ದೊಡ್ಡ ಸವಾಲಾಗಿದೆ.