ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೊ) ಯಲ್ಲಿ ಜೂನಿಯರ್‌ ರಿಸರ್ಚ್‌ ಫೆಲೊ, ರಿಸರ್ಚ್‌ ಅಸೋಸಿಯೇಟ್‌, ಟೆಕ್ನಿಕಲ್‌ ಅಸಿಸ್ಟೆಂಟ್‌ ಸೇರಿದಂತೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 84 ಹುದ್ದೆಗಳಿಗೆ ಅವಕಾಶವಿದ್ದು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ನವೆಂಬರ್‌ 17 ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಲೋಕ ಸಭಾ ಟಿವಿ ವಾಹಿನಿಯಲ್ಲಿ ಉದ್ಯೋಗಾವಕಾಶ ಇಸ್ರೊ ನೇಮಕಾತಿ ಹುದ್ದೆಗಳ ವಿವರ ಜೂನಿಯರ್‌ ರಿಸರ್ಚ್‌ ಫೆಲೊ: ಒಟ್ಟು 58 ಹುದ್ದೆಗಳು

ವಿದ್ಯಾರ್ಹತೆ: ಸಂಬಂಧಪಟ್ಟ ವಿಷಯಗಳಲ್ಲಿ ಎಂಎಸ್ಸಿ, ಎಂಇ ಅಥವಾ ಎಂಟೆಕ್‌ ರಿಸರ್ಚ್‌ ಅಸೋಸಿಯೇಟ್‌: ಒಟ್ಟು 14 ಹುದ್ದೆಗಳು ವಿದ್ಯಾರ್ಹತೆ: ಪಿಎಚ್‌ಡಿ ಪಡೆದವರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಫಿಸಿಕ್ಸ್‌, ಅಟೊಮೊಸ್ಪೆರಿಕ್‌ ಸೈನ್ಸ್‌, ಫಿಸಿಕಲ್‌ ಓಶಿಯಾನೋಗ್ರಫಿ, ವಾಟರ್‌ ರಿಸೋರ್ಸಸ್‌, ಹೈಡ್ರಾಲಜಿ, ಸಾಯಿಲ್‌ ಆ್ಯಂಡ್‌ ವಾಟರ್‌ ಎಂಜಿನಿಯರಿಂಗ್‌ ಸೇರಿದಂತೆ ಆಯಾ ವಿಭಾಗಕ್ಕೆ ಸಂಬಂಧಪಟ್ಟಂತೆ ಪಿಎಚ್‌ಡಿ ಪೂರ್ಣಗೊಳಿಸಿರಬೇಕು.

RELATED ARTICLES  ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಒಂದು ವರ್ಷದ ಉದ್ಯೋಗ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ:

ಟೆಕ್ನಿಕಲ್‌ ಅಸಿಸ್ಟೆಂಟ್‌: 01 ಹುದ್ದೆ (ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಟೆಲಿಕಮ್ಯುನಿಕೇಷನ್‌, ಕಂಪ್ಯೂಟರ್‌ ಸೈನ್ಸ್‌ ಮತ್ತು ಮೆಕಾನಿಕಲ್‌ ವಿಭಾಗಗಳಲ್ಲಿ ತಲಾ ಒಂದು ಹುದ್ದೆ) ವಿದ್ಯಾರ್ಹತೆ: ಆಯಾ ವಿಭಾಗಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಡಿಪ್ಲಮೊ (ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು)

ಸೈಂಟಿಫಿಕ್‌ ಅಸಿಸ್ಟೆಂಟ್‌-05 ಹುದ್ದೆಗಳು ವಿದ್ಯಾರ್ಹತೆ: ಫಿಸಿಕ್ಸ್‌ ಅಥವಾ ಅಪ್ಲೈಡ್‌ ಫಿಸಿಕ್ಸ್‌ ಹಾಗೂ ಮಲ್ಟಿಮೀಡಿಯಾ ಅಥವಾ ಅನಿಮೇಷನ್‌ನಲ್ಲಿ ಬಿಎಸ್ಸಿ ಪದವಿ ಟೆಕ್ನಿಷಿಯನ್‌-03 ಹುದ್ದೆಗಳು ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ/ಎನ್‌ಟಿಸಿ/ಎನ್‌ಎಸಿ (ಇನ್‌ಫಾರ್ಮೇಶನ್‌ ಟೆಕ್ನಾಲಜಿ/ಇನ್‌ಫಾರ್ಮೇಶನ್‌ ಆ್ಯಂಡ್‌ ಕಮ್ಯುನಿಕೇಷನ್‌ ಟೆಕ್ನಾಲಜಿ/ ಇನ್‌ಫಾರ್ಮೇಶನ್‌ ಟೆಕ್ನಾಲಜಿ ಆ್ಯಂಡ್‌ ಎಲೆಕ್ಟ್ರಾನಿಕ್‌ ಸಿಸ್ಟಂ ಮೆಂಟೇನೆನ್ಸ್‌) ಗರಿಷ್ಠ ವಯೋಮಿತಿ ಜೂನಿಯರ್‌ ರಿಸರ್ಚ್‌ ಫೆಲೊ ಹುದ್ದೆಗಳಿಗೆ ವಯೋಮಿತಿ ಗರಿಷ್ಠ 28 ವರ್ಷ ರಿಸರ್ಚ್‌ ಅಸೋಸಿಯೇಟ್‌, ಸೈಂಟಿಫಿಕ್‌ ಅಸಿಸ್ಟೆಂಟ್‌ ಮತ್ತು ಟೆಕ್ನಿಷಿಯನ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ.

RELATED ARTICLES  ಸುಜೂಕಿ ಡಿಸೈರ್ ಬಿಡುಗಡೆ

ಮೀಸಲಾತಿ ಹೊಂದಿದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-11-2017 ಹೆಚ್ಚಿನ ವಿವರಗಳಿಗೆ: www.isro.gov.in ಗಮನಿಸಿ