ಶಿರಸಿ : ಅರಣ್ಯ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಲಾದ 3 ದಿನಗಳ ಯುವಜನೋತ್ಸವಕ್ಕೆ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಖ್ಯಾತ ರಂಗಭೂಮಿ ನಟ ಯಶವಂತ ಸರದೇಶಪಾಂಡೆ ಚಾಲನೆ ನೀಡಿ, ವಿದ್ಯಾರ್ಥಿಗಳಲ್ಲಿ ಉತ್ಸಾಹ ಹೆಚ್ಚಬೇಕು. ಉತ್ಸಾಹಿಗಳಾಗಿರದಿದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಪ್ರತಿ ನಿತ್ಯ ಹೊಸತನವನ್ನು ಶೋಧಿಸುವ ಗುಣವನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಬೇಡದ ವಿಷಯದಲ್ಲಿ ಸಮಯ ವ್ಯರ್ಥ ಮಾಡುವ ಬದಲು ಕ್ರೀಡೆ, ಸಾಂಸ್ಕøತಿಕ ಚಟುವಟಿಕಗಳಲ್ಲಿ ತಮ್ಮ ಸಾಮಥ್ರ್ಯ ತೋರಿಸಬೇಕು ಎಂದು ಕರೆ ನೀಡಿದರು.
ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಶಿರಸಿ ಅರಣ್ಯ ಮಹಾವಿದ್ಯಾಲಯ, ಕೃಷಿ ಮಹಾವಿದ್ಯಾಲಯ ಧಾರವಾಡ, ವಿಜಯಪುರದ ಹನುಮನಮಟ್ಟಿ ಕಾಲೇಜು, ಧಾರವಾಡದ ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಸ್ನಾತಕೋತ್ತರ ಪದವಿ ಧಾರವಾಡ, ಕೃಷಿ ಮಾರಾಟ, ಸಹಕಾರ ಹಾಗೂ ಆಹಾರ ತಂತ್ರಜ್ಞಾನ ಸೇರಿ ಒಟ್ಟು 8 ತಂಡಗಳಿಂದ ಸುಮಾರು 208 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಮಣ್ಣಿನಲ್ಲಿ ಆಕೃತಿ ತಯಾರಿಕೆ, ರಸಪ್ರಶ್ನೆ, ಜಾನಪದ ನೃತ್ಯ, ರಂಗೋಲಿ, ಏಕಪಾತ್ರಾಭಿನಯ, ಲಘು ಸಂಗೀತ, ಇನ್ನಿತರ ಸ್ಪರ್ಧೆಗಳು ಜರುಗಿದವು.