ಭಟ್ಕಳ : ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಭಟ್ಕಳ ಘಟಕದಿಂದ ಹಾಗೂ ಅರಣ್ಯ ಅತಿಕ್ರಮಣದಾರ ವತಿಯಿಂದ ಮಹಾಧರಣಿ ನಡೆಸಲಾಯಿತು. ಕಳೆದ ಹತ್ತು- ಹಲವು ವರ್ಷಗಳಿಂದ ಅರಣ್ಯ ಅತಿಕ್ರಮಣದಾರರ ಮತ್ತು ಬಡ ರೈತಾಪಿ ಜನತೆಯ ಪ್ರಶ್ನೆಯಲ್ಲಿ ಅನೇಕ ಬಾರಿ ಮನವಿ ಪತ್ರವನ್ನು ಸರ್ಕಾರಕ್ಕೆ ನೀಡುತ್ತಾ ಬಂದಿದ್ದು, ಇನ್ನು ತನಕ ಬರೀ ಆಶ್ವಾಸನೆ ಬಿಟ್ಟರೆ ಯಾವುದೇ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಆಡಳಿತ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಬಡ ರೈತರು ಹಾಗೂ ಅರಣ್ಯ ಅತಿಕ್ರಮಣದಾರರು ಪದೇ ಪದೇ ಭಿಕ್ಷೆ ಬೇಡುವ ರೀತಿಯಲ್ಲಿ ಅಂಗಲಾಚುವುದು ತೀರಾ ವಿಷಾದನೀಯ ಸಂಗತಿ. ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆಯಿದ್ದು, ಮಂತ್ರಿವರ್ಯರು ಕೇವಲ ಮಾತಿನ ಭರವಸೆ ನೀಡಿ ಅಧಿಕಾರಿಗಳಿಗೆ ಆದೇಶ ನೀಡಿ ಕೊನೆಗೆ ಯಾವುದೇ ನ್ಯಾಯ ಅತಿಕ್ರಮಣದಾರರಿಗೆ ಸಿಗುತ್ತಿಲ್ಲ. ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಪ್ರಥಮ ಆದ್ಯತೆಯ ಕೆಲಸವಾಗಿ ಅರಣ್ಯ ಅತಿಕ್ರಮಣ ಭೂಮಿ ಮಂಜೂರಿ ಎಂದು ಆಶ್ವಾಸನೆ ನೀಡಿದ್ದರು. 5 ವರ್ಷ ಕಳೆದರೂ ಇನ್ನೊಂದು ಚುನಾವಣೆಗೆ ತಯಾರಿ ನಡೆಸಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯ ಲಕ್ಷಾಂತರ ಕುಟುಂಬಗಳಿಗೆ ಭೂಮಿ ಹಕ್ಕನ್ನು ನೀಡಲು ಉದಾಶೀನ ಮಾಡಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES  ಹಿರೇಗುತ್ತಿ ಹೈಸ್ಕೂಲ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ

ಈ ಎಲ್ಲಾ ಬೇಡಿಕೆಗಳನ್ನ ಈಡೇರಿಕೆ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ತಾಲೂಕಾ ಪಂಚಾಯತ್ ಸದಸ್ಯೆ ಜಯಲಕ್ಷ್ಮೀ ಗೊಂಡ, ಹಾಗೂ ಸಿ.ಐ.ಟಿ.ಯು. ಪ್ರಮುಖ ಸುಭಾಶ ಕೊಪ್ಪಿಕರ್ ಧರಣಿಯಲ್ಲಿ ನಿರತ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಮಹಾಧರಣಿಗೂ ಪೂರ್ವದಲ್ಲಿ ಎಲ್ಲಾ ಅರಣ್ಯ ಅತಿಕ್ರಮಣದಾರರು ಪ್ರವಾಸಿ ಮಂದಿರದಿಂದ ಭಟ್ಕಳ ಶಂಶುದ್ದೀನ್ ಸರ್ಕಲ್‍ಗೆ ತೆರಳಿ ಅಲ್ಲಿಂದ ಸಹಾಯಕ ಆಯುಕ್ತರ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ಪ್ರತಿಭಟನಾಕಾರರ ಒಟ್ಟೂ 36 ಗಂಟೆಗಳ ಮಹಾಧರಣಿಗೆ ಚಾಲನೆ ಸಿಕ್ಕಿದ್ದು, ನೂರಕ್ಕೂ ಅಧಿಕ ಅರಣ್ಯ ಅತಿಕ್ರಮಣದಾರರು, ರೈತರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಜಮಾಯಿಸಿದರು. ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲುಕಾ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ, ಕಾರ್ಯದರ್ಶಿ ಶ್ರೀಧರ ನಾಯ್ಕ, ಖಜಾಂಜಿ ನವೀನ್ ಜೈನ್, ಹಾಗೂ ಇನ್ನುಳಿದ ಸಂಘಟನೆಯ ಪ್ರಮುಖ ಸುಭಾಶ ಕೊಪ್ಪಿಕರ್, ಸುಲೇಮನ್ ಜಾಲಿ ಸೇರಿದಂತೆ ಮುಂತಾದವರು ಇದ್ದರು.

RELATED ARTICLES  ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಜಾಥಾ