ಭಟ್ಕಳ : ತಾಲೂಕಿನ ವೆಂಕಟಾಪುರದ ಹುರುಳಿಸಾಲಿನಲ್ಲಿ ರೈತರ ಗದ್ದೆಗಳಿಗೆ ಕಾಡುಹಂದಿ ನುಗ್ಗಿ ಲಕ್ಷಗಟ್ಟಲೇ ಭತ್ತದ ಬೆಳೆಗಳು ನಾಶ ಮಾಡಿದ ಘಟನೆಯ ಸಂಭವಿಸಿ ಎರಡು ದಿನ ಕಳೆದಿಲ್ಲ . ಮತ್ತೆ ತಾಲುಕಿನ ಶಿರಾಲಿಯ ಚಿತ್ರಾಪುರದ ಬಪ್ಪನಕೊಡ್ಲು ಮಜಿರೆಯ ರೈತ ಮಂಜುನಾಥ ದೇವಯ್ಯ ನಾಯ್ಕ ಎನ್ನುವವರ ಗದ್ದೆಯಲ್ಲಿ ಕಟಾವಿಗೆ ಬಂದ ಭತ್ತದ ಬೆಳೆಗಳನ್ನು ಕಾಡು ಹಂದಿ ದಾಳಿಯಿಂದ ನಾಶವಾಗಿದ ಘಟನೆ ವರದಿಯಾಗಿದೆ.
ರೈತ ದೇಶದ ಬೆನ್ನೆಲುಬು, ರೈತನಿಲ್ಲದೇ ದೇಶದ ಅಭಿವೃದ್ಧಿ ಅಸಾಧ್ಯ ಎಂಬ ಮಾತು ನೂರಕ್ಕೆ ನೂರು ಸತ್ಯ. ಆದರೆ ರೈತ ಸಂಕಷ್ಟಕ್ಕೆ ಇಡಾದಾಗ ಮಾತ್ರ ಅವನ ಕಷ್ಟಗಳನ್ನು ಯಾರು ಕೇಳುವುದಿಲ್ಲ ಎಂಬ ಮಾತಿಗೆ ಪುಷ್ಟಿ ನೀಡುವಂತಹ ಘಟನೆ ಭಟ್ಕಳದಲ್ಲಿ ಮತ್ತೆ ವರದಿಯಾಗಿದೆ. ತಾಲೂಕಿನ ಶಿರಾಲಿಯ ಚಿತ್ರಾಪುರದ ಬಪ್ಪನಕೊಡ್ಲು ಮಜಿರೆಯ ರೈತ ಮಂಜುನಾಥ ದೇವಯ್ಯ ನಾಯ್ಕ ಎನ್ನುವವರಿಗೆ ಸೇರಿದ 1.20 ಎಕರೆ ಜಮೀನು ಸಾಗುವಳಿ ನಡೆಸುತ್ತಿದ್ದು, ಎಕರೆ ಸಾಗದಲ್ಲಿ ಕಟಾವಿಗೆ ಬಂದ ಭತ್ತದ ಬೆಳೆಗಳು ಕಾಡು ಹಂದಿಗಳು ಒಮ್ಮೆಲೆ ಗದ್ದೆಗೆ ನುಗ್ಗಿ ಇಡೀ ಗದ್ದೆಯಲ್ಲಿ ಬೆಳೆದು ನಿಂತ ಪೈರನ್ನು ನಾಶಮಾಡಿ ಹೋಗಿವೆ. ಇದು ಭತ್ತವನ್ನೇ ನಂಬಿ ಬದುಕುತ್ತಿದ್ದ ರೈತನಿಗೆ ಸಂಕಷ್ಟ ಎದುರಾಗಿದೆ.
ಈ ಬಗ್ಗೆ ಸಂಕಷ್ಟ ಎದುರಿಸುತ್ತಿರುವ ರೈತ ಮಂಜುನಾಥ ದೇವಯ್ಯ ನಾಯ್ಕ ಅವರಿಗೆ ಇಲಾಖೆಯ ಅಧಿಕಾರಿಗಳಿಂದ ಯಾವುದೇ ಸಹಾಯ ಹಸ್ತ ಸಿಗಲಿಲ್ಲವಾಗಿದೆ. ಈ ಬಗ್ಗೆ ಇಲ್ಲಿನ ಸ್ಥಳಿಯ ರೈತ ಮಂಜುನಾಥ ದೇವಯ್ಯ ನಾಯ್ಕ ಮಾತನಾಡಿದ್ದು, “ಸುಮಾರು 1.20 ಎಕರೆ ಜಮೀನಿನಲ್ಲಿ ಭತ್ತದ ಬೆಳೆಯನ್ನು ಬೆಳೆದು ಜೀವನ ಸಾಗಿಸುತ್ತಿದ್ದು, ನನ್ನ ಜಮೀನಿನ ಮೇಲೆ ಹಂದಿ ದಾಳಿಯಿಂದ ಸಂಕಷ್ಟ ಎದುರಾಗಿದೆ. ಸರಕಾರದಿಂದ ರೈತನಿಗೆ ವಿವಿಧ ಪರಿಹಾರ ಮೊತ್ತ ಕೆಲವು ಯೋಜನೆಯಡಿಯಲ್ಲಿ ಸಿಗುತ್ತವೆಂದು ಕೇಳಿದ್ದು, ಆದರೆ ಇನ್ನು ತನಕ ಯಾವುದೇ ಪರಿಹಾರ ಸಿಕ್ಕಿಲ್ಲವಾಗಿದೆ. ಈಗ ಎರಡು ದಿನದ ನಂತರ ಭತ್ತದ ಬೆಳೆಯ ಕಟಾವು ಮಾಡುವ ಹಂತದಲ್ಲಿದ್ದು, ಹಂದಿ ಭತ್ತದ ಬೆಳೆಯನ್ನೆಲ್ಲ ನಾಶ ಮಾಡಿದೆ. ಇದಕ್ಕೆ ನಮಗೆ ಸಿಗಬೇಕಾದ ಸರಿಯಾದ ಪರಿಹಾರ ಸಿಗಬೇಕಾಗಿದೆ. ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದ ನಮಗಾದ ನಷ್ಟವನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.
ಅಂದಾಜು 50-60 ಸಾವಿರ ನಷ್ಟ ಅನುಭವಿಸಿದ ರೈತನಿಗೆ ಸದ್ಯ ದಿಕ್ಕು ತೋಚದಂತಾಗಿದೆ. ಶೀಘ್ರವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಪರಿಹಾರ ನೀಡಬೇಕಾದ ಜವಾಬ್ದಾರಿ ಕೆಲಸ ಮಾಡಬೇಕಾಗಿದೆ.