ಕಾರವಾರ: ವನ್ಯಜೀವಿ ರಕ್ಷಣೆಯಲ್ಲಿ ಸಾಕಷ್ಟು ಸೇವೆಯನ್ನ ಸಲ್ಲಿಸಿರುವುದನ್ನ ಗುರುತಿಸಿ ಪ್ರತಿಷ್ಟಿತ ಅರ್ಥ ಹಿರೋಸ್ ಪ್ರಶಸ್ತಿ ಪಡೆದಿರುವ ಅರಣ್ಯ ಇಲಾಖೆ ಸಿಬ್ಬಂದಿ ಚಂದ್ರಕಾಂತ ನಾಯ್ಕರಿಗೆ (ಸಿ.ಆರ್ ನಾಯ್ಕ್) ಜನಶಕ್ತಿ ವೇದಿಕೆಯಿಂದ ಸನ್ಮಾನಿಸಲಾಯಿತು.
ಕಾಳಿ ಹುಲಿ ಯೋಜನಾ ವ್ಯಾಪ್ತಿಯ ಕುಂಬಾರ ವಾಡಾ ವಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಚಂದ್ರಕಾಂತ ನಾಯ್ಕ್ ವನ್ಯ ಜೀವಿ ರಕ್ಷಣೆಯಲ್ಲಿ ಸೇವೆ ಸಲ್ಲಿಸುವವರಿಗೆ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಕೊಡುವ ಆರ್.ಬಿ.ಎಸ್ ಅರ್ಥ್ ಹಿರೋಸ್ ಎಂಬ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.
ನಿನ್ನೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದು ಗೋವಾ ಮೂಲಕ ಕಾರವಾರಕ್ಕೆ ಆಗಮಿಸಿದ ಚಂದ್ರಕಾಂತ್ ನಾಯ್ಕ್ ಗೆ ಜನಶಕ್ತಿ ವೇದಿಕೆಯಿಂದ ಮೈಸೂರು ಪೇಟ ಹಾರ ಹಾಕಿ ಸನ್ಮಾನಿಸಲಾಯಿತು. ರಾಮ್ ಶ್ರೀ ಗ್ಲೋಬಲ್ ಕನ್ ಸ್ಟ್ರಕ್ಷನ್ ಗ್ರೂಪ್ ನ ಜಿ.ಕೆ ಶಿವಪ್ರಸಾದ್ ಸನ್ಮಾನ ನಡೆಸಿಕೊಟ್ಟರು. *NAMMAUK*
೨೦೦೦ ನೇ ಇಸವಿಯಲ್ಲಿ ಅರಣ್ಯ ಇಲಾಖೆಗೆ ಕರ್ತವ್ಯಕ್ಕೆ ಸೇರಿದ ಸಿ.ಆರ್ ನಾಯ್ಕ್ ಹಾವುಗಳ ರಕ್ಷಣೆ, ಸಂಕಷ್ಟದ ಸ್ಥಿತಿಯಲ್ಲಿರುವ ಪ್ರಾಣಿಗಳ ರಕ್ಷಣೆಗೆ ತನ್ನದೇ ಆದ ಸೇವೆಯನ್ನ ಸಲಿಸುತ್ತಾ ಬಂದಿದ್ದು ಸದಾ ವನ್ಯ ಜೀವಿಗಳ ರಕ್ಷಣೆಯಲಿಯೇ ತಮ್ಮ ಜೀವನವನ್ನ ಇಲಾಖೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಷ್ಟಿತ ಪ್ರಶಸ್ತಿ ಸಿಕ್ಕಿದ್ದು ಪ್ರಾಮಾಣಿಕತೆ ಮತ್ತು ನಿಜವಾದ ಸೇವೆಗೆ ಸಿಕ್ಕ ಗೌರವ ಇದಾಗಿದೆ ಎಂದು ಸನ್ಮಾನ ಮಾಡಿದ ಜಿ.ಕೆ ಶಿವಪ್ರಸಾದ್ ಹೇಳಿದರು.
ಈ ಸಂದರ್ಭದಲ್ಲಿ ಜನಶಕ್ತಿ ವೇದಿಕೆಯ ಅಧ್ಯಕ್ಷರಾದ ಮಾಧವ ನಾಯಕ, ಜಿ.ಕೆ ಜಯಪ್ರಕಾಶ್, ಚಂದನ್ ಸ್ವಾರ್, ವನ್ಯಜೀವಿ ರಕ್ಷಣೆಯ ತಂಡವಾದ ಡೇರಿಂಗ್ ಟೀಮಿನ ಸದಸ್ಯರಾದ ಮಹೇಶ ನಾಯ್ಕ್, ಅಶೋಕ್ ನಾಯ್ಕ್, ಯಲ್ಲಾ ನಾಯಕ ಹಮಾಣಿ, ರಮೇಶ್ ನೀವೃತ್ತ ಅರಣ್ಯ ಇಲಾಖೆ ಸಿಬ್ಬಂದಿ ಸಿ.ಎನ್ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.