ಕಾರವಾರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ಡಾ. ಆರ್.ಪಿ.ಹೆಗಡೆ ಸೂಳಗಾರ ಅವರು ಆಯ್ಕೆ ಆಗಿದ್ದಾರೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

ಇಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಂಡಿದ್ದು ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರಕ್ಕೆ ಹೊನ್ನಾವರದ ಪ್ರಶಾಂತ ಹೆಗಡೆ ಮೂಡಲಮನೆ, ಯಲ್ಲಾಪುರದ ನಾಗರಾಜ ಹುಡೇದ, ಶಿರಸಿಯ ಗಾಯತ್ರಿ ರಾಘವೇಂದ್ರ, ದಾಂಡೇಲಿಯ ನರೇಶ ನಾಯ್ಕ ಅವರು ಆಯ್ಕೆ ಆಗಿದ್ದಾರೆ.

Photo A Prashant Hegde Moodlamane

Photo C Gayatri Raghavendra

Photo D Naresh Naik Dandeli

IMG 20171028 185921

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದ ಹಿರಿಯ ಸಾಹಿತಿ ಆರ್.ಪಿ.ಹೆಗಡೆ ಸೂಳಗಾರ ಅವರು ಕಳೆದ ಐದು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ದುಡಿಯುತ್ತ ಬಂದವರು. ಕಥೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶೆ, ಅನುವಾದ ಸಾಹಿತ್ಯ, ಜಾನಪದ ಸಂಗ್ರಹ ಸೇರಿದಂತೆ ಸುಮಾರು 84 ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಹಿಂದಿ ಸಾಹಿತ್ಯವನ್ನು ವಿಫುಲವಾಗಿ ಕನ್ನಡಕ್ಕೆ ತಂದ ಹಿರಿಮೆ ಆರ್.ಪಿ.ಹೆಗಡೆ ಸೂಳಗಾರ ಅವರದ್ದು.

RELATED ARTICLES  ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಹೊನ್ನಾವರ ಎಸ್.ಡಿ.ಎಂ ಕಾಲೇಜ್ ವಿದ್ಯಾರ್ಥಿಗಳು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರೂ. 10000, ಪ್ರಶಸ್ತಿ ಫಲಕ, ಸನ್ಮಾನ ಒಳಗೊಂಡಿರುತ್ತದೆ.
ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ರೂಪವಾಗಿ ನೀಡಲಾಗುವ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ ಕನ್ನಡದ ಕೃತಿಯೊಂದರ ಜೊತೆಗೆ ಪುರಸ್ಕಾರ ಫಲಕ ಒಳಗೊಂಡಿರುತ್ತದೆ.

ಸಿದ್ದಾಪುರದಲ್ಲಿ ನ.1 ರಂದು ಮಧ್ಯಾಹ್ನ ಜಿಲ್ಲಾ ಕಸಾಪ ಹಮ್ಮಿಕೊಳ್ಳುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ಆರ್.ಪಿ.ಹೆಗಡೆ ಸೂಳಗಾರ ಸಾಹಿತ್ಯ ಪಯಣ :

ಉತ್ತರ ಕನ್ನಡ ಜಿಲ್ಲೆ ಕಂಡ ವಸ್ತುನಿಷ್ಠ, ನಿಷ್ಠುರ ಬರಹಗಾರರಲ್ಲಿ ಆರ್.ಪಿ.ಹೆಗಡೆ ಸೂಳಗಾರ ಒಬ್ಬರು. ಸಿದ್ದಾಪುರ ತಾಲೂಕ 1ನೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಅವರು ಹಿಂದಿ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ನಡುವೆ ಸೇತುವೆಯಂತೆ ಕೆಲಸ ಮಾಡಿದವರು. ಅವರು ಹಿಂದಿಯ ವೃಕ್ಷಾಯುರ್ವೇದ, ದೂರದ ಆಕಾಶ (ನಾಟಕ), ಮೋಹನದಾಸ ,ಚಿನ್ನದ ಸೂಜಿ, ಛಿನ್ನಮಸ್ತಾ ಚಂದ್ರಕಾಂತ, ಮನಃಸಾಕ್ಷಿಯ ಮನುಷ್ಯ, ಮಾಯಾಜಾಲ,ಕಮಲಿನಿಯ ಕಾರಸ್ತಾನ, ಚಕ್ರವ್ಯೂಹ, ನಿಗೂಢ ರಹಸ್ಯ, ಬೆಳಕು ಹರಿಯಿತು, ಕೊನೆಯ ಜಿಗಿತ, ಭಾಗ್ಯಹೀನತೆ ಮುಂತಾದ ಕಾದಂಬರಿಗಳು, ಕತಾ ಸಂಸ್ಕøತಿಯ ಮೂರು ಭಾಗಗಳು, ದಶರಥನ ವನವಾಸ, ಆಕಾರದ ಅಕ್ಕಪಕ್ಕ, ಆವಿಗಿ, ನಿರುತ್ತರ, ಶ್ರೇಷ್ಠ ದಲಿತ ಕತೆಗಳು ಮುಂತಾದ ಸಣ್ಣಕತೆಗನ್ನು ಕನ್ನಡಕ್ಕೆ ಸಶಕ್ತವಾಗಿ ಅನುವಾದಿಸಿದ್ದಾರೆ.
ಅವರ ಪುಟ್ಟಿ-ಪಾಪು, ಆನೆ ಬಂತು ಆನೆ ಪರಿಣಾಮಕಾರಿಯಾದ ಮಕ್ಕಳ ಕವನ ಸಂಕಲನವಾಗಿದೆ.
ಶಿಶುನಾಳ ಶರೀಫ ಮತ್ತು ಸಂತ ಕಬೀರ –ಒಂದು ತೌಲನಿಕ ಅಧ್ಯಯನದ ಮೇಲೆ ಪಿ.ಹೆಚ್.ಡಿ ಪ್ರಬಂಧ ಮಂಡಿಸಿರುವ ಆರ್.ಪಿ.ಹೆಗಡೆ ಅವರು ಬರೆದಿರುವ ನಾಟಕ ಕಲಾವಿದ ದಿ. ಸೀತಾರಾಮ ಶಾಸ್ತ್ರಿ ಹಲಿಮನೆ ಅವರ ಜೀವನ ಚರಿತ್ರೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತ್ರಿ ಬಂದಿದೆ.
ಚಂಪೂ ಸಾಹಿತ್ಯ, ನಾತನಾಡುವ ಕಷ್ಟ, ವಿಚಾರ ವಾಹಿನಿ, ಮುಖಾಮುಖಿ, ಕರ್ನಾಟಕದ ಅನುಭಾವಿಗಳು ಮತ್ತು ಭಕ್ತರು (ಲೇಖನ ಸಂಗ್ರಹ) ವಿಜಯದ ಹಾದಿಯಲ್ಲಿ (ಮಕ್ಕಳ ಕಾದಂಬರಿ) ಇವು ಆರ್.ಪಿ.ಹೆಗಡೆ ಅವರ ಗಮನಾರ್ಗ ಬರಗಳಾಗಿವೆ.ಡಾ.ಆರ್.ಪಿ. ಹೆಗಡೆ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ಸೃಜನಶೀಲ ಅನುವಾದ’ ಪುರಸ್ಕಾರ ನೀಡಿ ಗೌರವಿಸಿದೆ.

RELATED ARTICLES  ದಾನದಿಂದ ನಮ್ಮ ಬದುಕಿಗೆ ಅಂತರಂಗ ವೈಭವ: ರಾಘವೇಶ್ವರ ಶ್ರೀ