ವಾಷಿಂಗ್ ಟನ್: ಭಾರತದೊಂದಿಗೆ ಮುಖ್ಯ ರಕ್ಷಣಾ ಒಪ್ಪಂದಗಳನ್ನು ಯಶಸ್ವಿಗೊಳಿಸಲು ಅಮೆರಿಕ ಉತ್ಸುಕವಾಗಿದ್ದು, ಈ ಮೂಲಕ ವರ್ಗೀಕೃತ ಡಾಟಾ ಹಾಗೂ ಎಫ್-16, ಎಫ್ 18 ಫೈಟರ್ ಜೆಟ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಟ್ರಂಪ್ ಆಡಳಿತ ದೃಢ ಬೆಂಬಲ ಸೂಚಿಸಿದೆ.
ಕಳೆದ ತಿಂಗಳು ಕಾಂಗ್ರೆಸ್ ಗೆ ಹೇಳಿಕೆ ನೀಡಿದ್ದ ಟ್ರಂಪ್ ಆಡಳಿತ, ಭಾರತಕ್ಕೆ ಎಫ್-16, ಎಫ್-18 ಫೈಟರ್ ಜೆಟ್ ಗಳನ್ನು ಮಾರಾಟ ಮಾಡುವುದನ್ನು ಅಮೆರಿಕ ಆಡಳಿತ ಬೆಂಬಲಿಸುತ್ತದೆ, ಈ ಪ್ರಸ್ತಾವನೆಯಿಂದ ಭಾರತ- ಅಮೆರಿಕ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳಲಿದೆ ಎಂದಿತ್ತು.
ಉಭಯ ರಾಷ್ಟ್ರಗಳ ನಡುವೆ ಆಗಬೇಕಿರುವ ಮಹತ್ವದ ರಕ್ಷಣಾ ಒಪ್ಪಂದಗಳು ಹಲವಾರು ಇವೆ ಎಂದು ದಕ್ಷಿಣ ಹಾಗೂ ಕೇಂದ್ರ ಏಷ್ಯಾ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ ವೆಲ್ಸ್ ಹೇಳಿದ್ದಾರೆ. ಒಪ್ಪಂದಗಳು ಯಶಸ್ವಿಯಾಗುವುದರಿಂದ ಭಾರತಕ್ಕೆ ಎಫ್-16, ಎಫ್-18 ಫೈಟರ್ ಜೆಟ್ ಮಾರಾಟವನ್ನು ಸಾಧ್ಯವಾಗಿಸುವುದರ ಜತೆಗೆ ರಕ್ಷಣಾ ತಂತ್ರಜ್ಞಾನ ಪಾಲುದಾರಿಕೆಗೂ ಸಹಕಾರಿಯಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.