ಬಳ್ಳಾರಿ: ವಿಜಯನಗರ ಗತವೈಭವವನ್ನು ಸಾರುವ ಹಂಪಿ ಉತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಈ ಬಾರಿಯ ಉತ್ಸವಕ್ಕೆ ಜನಸಾಗರ ಹರಿದುಬರುವ ನಿರೀಕ್ಷೆಗಳಿರುವ ಹಿನ್ನಲೆಯಲ್ಲಿ ದಿನದ 24*7 ಗಂಟೆಗಳ ಕಾಲ ಪ್ರವಾಸಿಗರನ್ನು ಸೆಳೆಯಲು ಹಂಪಿಯ ಸ್ಮಾರಕಗಳನ್ನು ವಿದ್ಯುದೀಪಾಲಂಕಾರದಿಂದ ಶೃಂಗರಿಸಲು ಸರ್ಕಾರ ಮುಂದಾಗಿದೆ.
7 ವರ್ಷಗಳ ಹಿಂದೆಯೇ ಪ್ರವಾಸೋದ್ಯಮ ಇಲಾಖೆ ಹಂಪಿಯ 23 ಸ್ಮಾರಕಗಳಿಗೆ ವಿದ್ಯುದೀಪಾಲಂಕಾರ ಹಾಗೂ ಸಂಗೀತ ನೀಡಿದ ಅವುಗಳ ಸೌಂದರ್ಯ ಸೊಬಗನ್ನು ವಿಶ್ವದ ಗಮನ ಸಳೆಯುವಂತೆ ಮಾಡಲು ಯೋಜನೆಯೊಂದನ್ನು ರೂಪಿಸಿತ್ತು. ಪ್ರಾಯೋಗಿಕವಾಗಿ ಈ ಯೋಜನೆ ಚಾಲನೆಗೊಂಡಿತ್ತಾದರೂ, ಬೆಳಕಿನ ರಂಗು, ಉಪಕರಣಗಳ ಗುಣಮಟ್ಟ ಮೊದಲಾದವುಗಳಲ್ಲಿ ಕಂಡು ಬಂದ ದೋಷದಿಂದ ಯೋಜನೆ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇದೀಗ ರಾಜ್ಯ ಸರ್ಕಾರ ಯೋಜನೆಯನ್ನು ಮತ್ತೆ ಪ್ರವಾಸಿಗರಿಗೆ ಪರಿಚಯಿಸು ಎಲ್ಲಾ ರೀತಿಯ ಸಿದ್ಧತೆಗಳನ್ನುನಡೆಸುತ್ತಿದೆ.
ಹಂಪಿ ಶಿಲ್ಪಕಲಾ ಸ್ಮಾರಕಗಳ ಸೌಂದರ್ಯದ ಸೊಬಗನ್ನು ಹೆಚ್ಚಿಸಲು ಅಂದಾಜು ರೂ.12 ಕೋಟಿ ವೆಚ್ಚದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಯುಕ್ತ ಯೋಜನೆ ಇದಾಗಿದೆ. ‘ಹಂಬಿ ಬೈ ನೈಟ್’ ಯೋಜನೆಯನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನಗೊಳಿಸುತ್ತಿದೆ.
ರಾತ್ರಿ ಹೊತ್ತಿನಲ್ಲೂ ಪ್ರವಾಸಿಗರನ್ನು ಹಂಪಿಯ ಸ್ಮಾರಕಗಳತ್ತ ಸೆಳೆಯುವುದು ‘ಹಂಪಿ ಬೈ ನೈಟ್’ ಯೋಜನೆಯ ಉದ್ದೇಶವಾಗಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆ 2009-10ನೇ ಸಾಲಿನಲ್ಲಿ ಈ ಯೋಜನೆಯನ್ನು ಜಾರಿಗೆ ಬಂದಿದ್ದು, ಯೋಜನೆಗೆಂದೇ ರೂ.12 ಕೋಟಿಯನ್ನು ತೆಗೆದಿರಸಲಾಗಿತ್ತು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಯೋಜನೆಯನ್ನು ರೂಪಿಸಿದ್ದು, ಯೋಜನೆ ಕುರಿತ ಕಾರ್ಯಗಳು ಈಗಾಗಲೇ ಆರಂಭಗೊಂಡಿವೆ. ಯೋಜನೆಗಾಗಿ ಈ ವರೆಗೂ ರೂ.6 ಕೋಟಿ ಖರ್ಚು ಮಾಡಲಾಗಿದೆ ಎಂದು ಬಳ್ಳಾರಿ ಉಪ ಆಯುಕ್ತ ರಾಮ್ ಪ್ರಸತ್ ಮನೋಹರ್ ಅವರು ಹೇಳಿದ್ದಾರೆ.
23 ಸ್ಮಾರಕಗಳಿಗೆ ವಿದ್ಯುದೀಪಲಂಕಾರ ಮಾಡಲು ನಿರ್ಧರಿಸಲಾಗಿತ್ತು. ಆದರೆ, ನಾಲ್ಕು ಸ್ಮಾರಕಗಳಿಗೆ ವಿದ್ಯುದೀಪಾಲಂಕಾರ ಮಾಡಲು ಭಾರತದ ಪುರಾತತ್ವ ಸಮೀಕ್ಷೆ ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ 19 ಸ್ಮಾರಕಗಳಿಗೆ ಮಾತ್ರ ವಿದ್ಯುದೀಪಾಲಂಕಾರ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಡಿಯಲ್ಲಿ ಯೋಜನೆಯನ್ನು ನವೆಂಬರ್ ಮೊದಲ ವಾರದಲ್ಲಿ ಜಾರಿಗೆ ತರಲಾಗುತ್ತದೆ.
ಗುತ್ತಿಗೆ ಪಡೆದಿರುವ ಇನೋವೆಟಿವ್ ಲೈಟಿಂಗ್ ಸಿಸ್ಟಮ್ ಪ್ರೈಲಿ.ಗೆ ಇದೂವರೆಗೆ ರೂ.6 ಕೋಟಿ ಖರ್ಚು ಮಾಡಲಾಗಿದೆ. ವಿರೂಪಾಕ್ಷ ದೇಗುಲ ಹಾಗೂ ಅದರ ಸುತ್ತಮುತ್ತಲಿರುವ ಕೋಂದಡರಾಮ ದೇಗುಲ, ಅಚ್ಯುತಾರಾಯ ಬಜಾರ್, ಸುಗ್ರೀವಾ ಗುಹೆ, ತುಲಾಭಾರ ಮಂಟಪ ಮತ್ತು ವಿಜಯ ವಿಟ್ಠಲ ದೇಗುಲಗಳಲ್ಲಿರುವ ಸ್ಮಾರಕಗಳಿಗೆ ಶಾಶ್ವತವಾಗಿ ವಿದ್ಯುದಾಲಂಕಾರ ಮಾಡಲಾಗುತ್ತದೆ. ಇನ್ನುಳಿದ ಕಡಲೆಕಾಳು ಗಣೇಶ, ಸಾಸವೆಕಾಳು ಗಣೇಶ, ಹಜಾರಾ ವಿಟ್ಠಲ ದೇಗುಲ, ಮಹಾನವಮಿ ದಿಬ್ಬಗಳಲ್ಲಿರುವ ಸ್ಮಾರಕಗಳಿಗೆ ತಾತ್ಕಾಲಿಕವಾಗಿ ವಿದ್ಯುದಾಲಂಕಾರ ಮಾಡಲಾಗಿರುತ್ತದೆ ಎಂದು ತಿಳಿದುಬಂದಿದೆ.