ಕಂಡ ತಕ್ಷಣ ಈಗಲೇ ಸವಿದು ಬಿಡೋಣ ಎನ್ನಿಸುವಷ್ಟು ರಸಭರಿತ ಹಣ್ಣುಗಳನ್ನು ಇಷ್ಟ ಪಡದವರಾರು ಹೇಳಿ? ಹಣ್ಣುಗಳಲ್ಲಿ ಖನಿಜಾಂಶಗಳು, ಪೋಷಕಾಂಶಗಳು, ವಿಟಮಿನ್ ಗಳು ಅಧಿಕವಾಗಿರುವುದರಿಂದ ಇವು ಆರೋಗ್ಯಕ್ಕೆ ಒಳ್ಳೆಯದು. ನಾವೆಲ್ಲಾ ಹಣ್ಣುಗಳ ರುಚಿಯನ್ನು ಆಸ್ವಾದಿಸುತ್ತಾ ತಿನ್ನುತ್ತೇವೆಯೇ ಹೊರತು ಅದರಲ್ಲಿರುವ ಯಾವ ಅಂಶಗಳು ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂಬುದು ನಮಗೆ ತಿಳಿದಿರುವುದಿಲ್ಲ ಮತ್ತು ವಿಪರ್ಯಾಸ ಎಂದರೆ ನಾವು ಅದರ ಬಗ್ಗೆ ತಿಳಿಯ ಹೋಗುವುದೂ ಇಲ್ಲ!

ಮನೆಯ ಹಿತ್ತಲಲ್ಲಿ ಬೆಳೆಯುವ ಪಪ್ಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರಿಗೆ ಗೊತ್ತು ಹೊರತು ಯಾವ ರೀತಿ ಎಂದು ಯಾರಿಗೆ ತಿಳಿದಿರುವುದಿಲ್ಲ. ಕೇಳಿದರೆ ನಮ್ಮ ಹಿರಿಯರು ಹೇಳುತ್ತಿದ್ದರು ಎಂಬ ುತ್ತರ ನೀಡಿ ಸುಮ್ಮನಾಗುತ್ತಾರೆ. ಎಲ್ಲ ಕಾಲದಲ್ಲೂ ಧಾರಾಳವಾಗಿ ಸಿಗುವ ಪಪ್ಪಾಯ ಪೋಷಕಾಂಶಗಳ ಆಗರ. ಇನ್ನು ಅಧಿಕ ನಾರಿನಾಂಶ ಿರುವ ಪಪ್ಪಾಯದಲ್ಲಿ ವಿಟಮಿನ್ ಎ, ಸಿ, ಈ, ಕ್ಯಾಲ್ಸಿಯಂ, ಪೋಟಾಶಿಯಂ, ಮೇಗ್ನೇಶಿಯಂ, ಪ್ರೋಟೀನ್ ಗಳು ಅಧಿಕವಾಗಿದೆ. ಚರ್ಮ ಮತ್ತು ಕಣ್ಣುಗಳ ಆರೋಗ್ಯ, ಹೃದಯ ಸಂಬಂಧಿ ಕಾಯಿಲೆ, ಮಲಬದ್ಧತೆ, ಹೊಟ್ಟೆ ಹುಳು ನಿವಾರಣೆ ಹೀಗೆ ಹಲವು ಕಾಯಿಲೆಗಳಿಗೆ ಪಪ್ಪಾಯ ರಾಮಬಾಣ. ಮುಖ್ಯವಾದ ವಿಷಯವೆಂದರೆ ಪಪ್ಪಾಯ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ. ಅದರಲ್ಲಿರುವ ಕೆಲವು ಅಂಶಗಳು ಸೋಂಕುಗಳನ್ನು ತಡೆಗಟ್ಟುವುದು ಮಾತ್ರವಲ್ಲದೆ ಮುಂದೆ ಅದು ಬಾರದಂತೆ ತಡೆಯುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಇದರಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಿರುವ ಕಾರಣ ಮಧುಮೇಹಿಗಳು ಇದನ್ನು ನಿಶ್ಚಿಂತೆಯಿಂದ ಸವಿಯಬಹುದು.

RELATED ARTICLES  ನಿಶ್ಚಿಂತೆಯಿಂದ ನಿಮ್ಮ ಫಿಟ್‌ನೆಸ್‌ ಕಾಯಕವನ್ನು ಮುಂದುವರಿಸಬಹುದು!

ಪಪ್ಪಾಯದಲ್ಲಿ ಹೇರಳವಾಗಿರುವ ವಿಟಮಿನ್ ಎ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಅಗತ್ಯ. ಪ್ರತಿದಿನ ಪಪ್ಪಾಯ ಸೇವಿಸುವುದರಿಂದ ಕಣ್ಣು ಮಂಜಾಗುವುದು, ಪೊರೆ ಬರುವುದು ಇಂತಹ ಸಮಸ್ಯೆಗಳು ಬಾರದಂತೆ ತಡೆಯಬಹುದು. ಕೊಲೆಸ್ಟ್ರಾಲ್ ಅನ್ನು ಹತೋಟಿಯಲ್ಲಿ ಇರಿಸಲು ಪಪ್ಪಾಯ ಸಹಕಾರಿ. ಒತ್ತಡ ನಿವಾರಣೆಗೆ ಪಪ್ಪಾಯದಲ್ಲಿರುವ ವಿಟಮಿನ್ ಸಿ ಸಹಾಯ ಮಾಡುತ್ತದೆ. ಮಲಬದ್ಧತೆಗೆ ಮಾತ್ರವಲ್ಲದೆ ರಕ್ತಮೂಲವ್ಯಾಧಿ ಗೆ ಪಪ್ಪಾಯ ಹೇಳಿ ಮಾಡಿಸಿದ ಮದ್ದು. ಮೊಡವೆ, ಗುಳ್ಳೆ ಸೇರಿದಂತೆ ಚರ್ಮದ ಹಲವು ಸಮಸ್ಯೆಗಳನ್ನು ನಿರ್ವಹಿಸುವ ಶಕ್ತಿ ಪಪ್ಪಾಯಕ್ಕಿದೆ. ಆದುದರಿಂದ ಚರ್ಮದ ಆರೈಕೆಗೆ ಉಪಯೋಗಿಸುವ ಉತ್ಪನ್ನಗಳಾದ ಪೇಸ್ ವಾಶ್, ಬಾಡಿ ಲೋಶನ್, ಕೋಲ್ಡ್ ಕ್ರೀಮ್ ಗಳಲ್ಲಿ ಇದನ್ನು ಬಳಸಲಾಗುತ್ತದೆ. ಇನ್ನು ಮುಖ್ಯವಾದ ಸಂಗತಿಯೆಂದರೆ ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ಮರೆಯದೆ ತಿನ್ನಬೇಕಾದ ಹಣ್ಣು ಇದು. ಇದರಲ್ಲಿರುವ ಪೇಪೆನ್ ಅಂಶ ಹೊಟ್ಟೆ ನೋವು ನಿವಾರಿಸುವುದಲ್ಲದೆ ‍ಋತುಚಕ್ರ ಸರಿಯಾಗುವಂತೆ ನೋಡಿಕೊಳ್ಳುತ್ತದೆ.

RELATED ARTICLES  ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ! ಗಾದೆಯಲ್ಲ ಔಷಧ. ‌

ಅಷ್ಟೇ ಅಲ್ಲದೇ ಇತ್ತೀಚೆಗೆ ಜನರನ್ನು ಬೆಚ್ಚಿ ಬೀಳಿಸಿದ ಮಾರಕ ರೋಗ ಡೆಂಗ್ಯೂ ಜ್ವರಕ್ಕೆ ಪಪ್ಪಾಯ ಎಲೆ ಉತ್ತಮ ಔಷಧ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರು ಪಪ್ಪಾಯ ಎಲೆಯ ಜ್ಯೂಸ್ ಕುಡಿದರೆ ದೇಹದಲ್ಲಿ ಕಡಿಮೆಯಾದಂತಹ ಪ್ಲೇಟ್ಲೆಟ್ ಗಳ ಪ್ರಮಾಣ ಹೆಚ್ಚಾಗುತ್ತದೆ. ಇನ್ನು ಔಷಧ ತಯಾರು ಮಾಡುವ ಕಂಪೆನಿಗಳು ಪಪ್ಪಾಯ ಎಲೆಯ ಸಾರವನ್ನು ಉಪಯೋಗಿಸಿ ಮಾತ್ರೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

ಬೆಣ್ಣೆಯಂತೆ ಮೃದುವಾಗಿರುವ , ವಿಶೇಷವಾದ ರಚನೆ, ಒಮ್ಮೆ ಸವಿದರೆ ಮತ್ತೊಮ್ಮೆ, ಮಗದೊಮ್ಮೆ ಸವಿಯಬೇಕು ಎನ್ನುವ ಪಪ್ಪಾಯಕ್ಕೆ ಮರುಳಾಗಿ ಕ್ರಿಸ್ಟೋಫರ್ ಕೊಲಂಬಸ್ ಇದನ್ನು ದೇವತೆಗಳ ಹಣ್ಣು ಅರ್ಥಾತ್ ಪ್ರೂಟ್ಸ್ ಆಫ್ ಏಂಜಲ್ಸ್ ಎಂದು ಕರೆದಿದ್ದಾನೆ.

ಒಟ್ಟಿನಲ್ಲಿ ಯಾವುದೇ ರೀತಿಯ ವಿಶೇಷ ಆರೈಕೆಯಿಲ್ಲದೆ ಹಿತ್ತಲಲ್ಲಿ ಬೆಳೆಯುವ ಪಪ್ಪಾಯ ತನ್ನ ವೈಶಿಷ್ಟ್ಯದಿಂದ ಜಗತ್ತಿನೆಲ್ಲಡೆ ಜನಪ್ರಿಯವಾಗಿದೆ.