ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಪ್ರಾದೇಶಿಕ ನಿರ್ದೇಶನಾಲಯ (ದಕ್ಷಿಣ), ಬೆಂಗಳೂರು ಕಚೇರಿಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಅಸಿಸ್ಟೆಂಟ್ ಹುದ್ದೆಗೆ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 06,2017ರಂದು ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಹುದ್ದೆಗಳ ವಿವರ ಹುದ್ದೆಯ ಹೆಸರು: ಅಸಿಸ್ಟಂಟ್ ವೇತನ ಶ್ರೇಣಿ: ರೂ.34,500/-, ತಿಂಗಳಿಗೆ. ವಿದ್ಯಾರ್ಹತೆ ಎಲ್ ಎಲ್ ಬಿ, ಎಲ್ ಎಲ್ ಎಂ, ಅಥವಾ ಪಿಜಿಡಿಎಲ್ ಪೂರ್ಣಗೊಳಿಸಿರಬೇಕು. ಹಾಗೂ ಬಾರ್ ಕೌನ್ಸಿಲ್ ನಿಂದ ಸರ್ಟಿಫಿಕೆಟ್ ಹೊಂದಿರಬೇಕು. ಸಂದರ್ಶನ ಸಂದರ್ಶನವು ನವೆಂಬರ್ 6 ರಂದು ಬೆಳಗ್ಗೆ 10.00 ಗಂಟೆಗೆ ಸಿಪಿಸಿಬಿ ಕಚೇರಿಯಲ್ಲಿ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಲಗತ್ತಿಸಿದ, ಸ್ವಯಂ ದೃಢೀಕರಿಸಿದ ಟೈಪ್ ಮಾಡಿದ ಅಥವಾ ಕೈಯಿಂದ ಬರೆದ ಅರ್ಜಿಯನ್ನು ತರತಕ್ಕದ್ದು.

RELATED ARTICLES  ಕುಮಟಾದ ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿದ್ದ ೫೦೦೦ ರೂಗಳ ಪರಿಹಾರಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ.

ಸಂದರ್ಶನ ನಡೆಯುವ ಸ್ಥಳ CPCB, Regional Directorate (South). ” isarga Bhawan·I st Floor, Thimmaiab Road. 7 ‘D’ cross, Shivanagar, Bengaluru-560 079. ಹೆಚ್ಚಿನ ವಿವರಗಳಿಗಾಗಿ ಶೀಮತಿ ಅಂಜನಾ ಕುಮಾರಿ ವಿ. ಎನ್ವಿರಾನ್ಮೆಂಟಲ್ ಇಂಜಿನಿಯರ್ (ಮೊಬೈಲ್ ಸಂಖ್ಯೆ: 9916355576, e-mail: [email protected]) ಸಂಪರ್ಕಿಸಲು ಕೋರಲಾಗಿದೆ.

RELATED ARTICLES  ಫೇಸ್ ಬುಕ್ ಬಳಕೆಯಿಂದ ಆಯುಷ್ಯ ಹೆಚ್ಚಳ: ಅಧ್ಯಯನ