ಕುಮಟಾ: ತಮಗೆ ನೀರಿನ ಸಮಸ್ಯೆ ಇದೆ ಅದನ್ನ ಪರಿಹರಿಸುವಂತೆ ವಿಜಯ ಹೊಸಕಟ್ಟಾ ಹಾಗೂ ನವಗ್ರಾಮದ ನಿವಾಸಿಗಳು ಶಾಸಕರಿಗೆ ಮನವಿ ಸಲ್ಲಿಸಿದರು. ಶಾಸಕರ ನಿವಾಸಕ್ಕೆ ಆಗಮಿಸಿದ ಗ್ರಾಮಸ್ಥರು ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ ಅವರಲ್ಲಿ ವಿನಂತಿಸಿದರು.

ಇದೇ ಸಂದರ್ಭದಲ್ಲಿ ಲಿಖಿತ ಮನವಿ ನೀಡಿದ ಅವರು.
ನವ ಗ್ರಾಮದಲ್ಲಿ ನೀರಿನ ಕೊರತೆ ತುಂಬಾ ಇದ್ದು ಈಗಾಗಲೇ ಮಾಡಿಸಿಕೊಟ್ಟಿದ್ದ ಬೋರ್ ನಲ್ಲಿ ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ .ಎಲ್ಲ ಮನೆಗಳಿಗೂ ನೀರು ಸಾಕಾಗುತ್ತಿಲ್ಲ ಹಾಗೆಯೇ ಸರ್ಕಾರದಿಂದ ಬೇಸಿಗೆಯಲ್ಲಿ ಟ್ಯಾಂಕ್ನಿಂದ ನೀರು ಸರಬರಾಜು ಮಾಡಿದರೂ ನೀರು ಸಾಕಾಗುತ್ತಿಲ್ಲ . ಮನೆಗೆ ಐದು ಕೊಡ ನೀರು ಸಹ ಸಿಗುತ್ತಿಲ್ಲ. ಯಾವುದೇ ಬಾವಿಯ ವ್ಯವಸ್ಥೆ ಕೂಡ ಈ ಊರಿಗೆ ಇರುವುದಿಲ್ಲ .ಹೀಗಾಗಿ ಶಾಸಕರು ತಮ್ಮ ಯೋಜನೆಯ ಗುಂಡುಬಾಳ- ಗೋಕರ್ಣ ನೀರು ಸರಬರಾಜು ಯೋಜನೆಯ ನೀರಿನ ಟ್ಯಾಂಕ್ಗೆ ಪೈಪ್ ಲೈನ್ ಮೂಲಕ ಸಂಪರ್ಕ ಕಲ್ಪಿಸಿ ನೀರನ್ನು ಒದಗಿಸಿ ಕೊಡಬೇಕಾಗಿ ಜನರು ವಿನಂತಿಸಿದರು .

RELATED ARTICLES  ಮದುವೆ ಮುಗಿಸಿ ತೆರಳುತ್ತಿದ್ದ ವಾಹನ ಅಪಘಾತ.

ಈ ಬಗ್ಗೆ ಹಾಗೂ ಗೋಕರ್ಣದ ಕೆಲ ಭಾಗಗಳಲ್ಲಿ ನೀರಿನ ಸಮಸ್ಯೆ ಇರುವುದನ್ನು ನಾವು ಗಮನಿಸಿದ್ದು ಸೂಕ್ತ ಪರಿಹಾರ ನೀಡುವುದಾಗಿ ಶಾಸಕರು ಭರವಸೆ ನೀಡಿದರು.

RELATED ARTICLES  ಗೋಕರ್ಣದಲ್ಲಿ ಪ್ರಾರಂಭವಾಗಲಿದೆ ವಿಶ್ವವಿದ್ಯಾಪೀಠ:ಈ ಬಗ್ಗೆ ಮಾಹಿತಿನೀಡಿದ ರಾಘವೇಶ್ವರ ಶ್ರೀಗಳು

ಶಾಸಕರಿಂದ ಭರವಸೆ ಸಿಕ್ಕಿದ್ದು ತಮ್ಮ ಸಮಸ್ಯೆ ಪರಿಹಾರವಾಗಲಿದೆ ಎಂದು ಜನತೆ ಭರವಸೆ ವ್ಯಕ್ತಪಡಿಸಿದರು.