ಕುಮಟಾ; ಕುಮಟಾ ಪುಸಭೆಯ ಗದ್ದುಗೆ ಯಾರಿಗೆ ಸಿಗಲಿದೆ? ಮಧುಸೂಧನ ಶೇಟ್ ನಾಳೆಗಾಗಿ ಕಾಯುತ್ತಿದ್ದಾರೆಯೇ? ಪ್ರಶಾಂತ ನಾಯ್ಕ ಅಧಿಕಾರದ ಕಸರತ್ತು ನಡೆಸಿದ್ದಾರೆಯೇ? ಹೀಗೆ ಮೂಡಿರುವ ಪ್ರಶ್ನೆಗೆ ಉತ್ತರ ನಿಮ್ಮ ಗಮನದಲ್ಲಿಯೂ ಇರಬಹುದು ಅಲ್ಲವೇ? ಹೌದು ಇದು ಕುಮಟಾ ಪುರಸಭೆಯ ಅಧ್ಯಕ್ಷಸ್ಥಾನದ ಪೈಪೋಟಿಯ ವಿಚಾರ..

ಬಿಜೆಪಿಯ ಪ್ರಶಾಂತ ನಾಯ್ಕ ಅವರ ಬಗ್ಗೆ ಅನೇಕರ ಬೆಂಬಲವಿದ್ದು ಅವರೂ ಕೂಡಾ ಅಧಿಕಾರದ ಗದ್ದುಗೆಗೆ ಬರಬಹುದು ಎಂಬ ಮಾತುಗಳೊಂದಿಗೆ ಕಾಂಗ್ರೇಸ್ ನ ಮಧುಸೂಧನ ಶೇಟ್ ಪ್ರಭಲರಾಗಿದ್ದಾರೆ ಅವರೇ ಅಧಿಕಾರಕ್ಕೆ ಬರುತ್ತಾರೆ? ಈ ಎರಡೂ ಮಾತುಗಳ ನಡುವೆ ಹೊಯ್ದಾಟ ನಡೆದಿದೆ. ಏತನ್ಮದ್ಯೆ ಜೆ.ಡಿ.ಎಸ್ ನ ಸದಸ್ಯರಿಗೆ ವಿಪ್ ಜಾರಿಯಾಗಿದ್ದು ವಿಪ್ ಉಲ್ಲಂಘಿಸಲು ನಿರಾಕರಿಸಬಹುದು ಎಂಬ ಸುದ್ದಿಯನ್ನೂ ಅಲ್ಲಗಳೆಯುವಂತಿಲ್ಲ. ಇದರಲ್ಲಿ ಮಧುಸೂಧನ ಶೇಟ್ ಬಗ್ಗೆ ಅಧಿಕೃತ ಹೇಳಿಕೆಗಳಿದ್ದು ಅದನ್ನು ಸದಸ್ಯರು ಪಾಲಿಸಬಹುದು ಎಂಬುದು ಸುದ್ದಿಯಲ್ಲಿದೆ.


ಕುಮಟಾ ಪುರಸಭೆಯಲ್ಲಿ ಮತ್ತೆ ಕಾಂಗ್ರೇಸ್ ಜೆ.ಡಿ.ಎಸ್ ಮೈತ್ರಿ..?
ಇದು ಆಗುತ್ತೋ ಬಿಡುತ್ತೋ? ಹೀಗೊಂದು ಪ್ರಶ್ನೆ ಕುಮಟಾ ಜನತೆಯನ್ನು ಕಾಡುತ್ತಿದೆ.

ನಿರೀಕ್ಷೆ ಮೂಡಿಸಿದ್ದ ಬಿ.ಜೆ.ಪಿಯ ಪ್ರಶಾಂತ ನಾಯ್ಕ್ ಅಧ್ಯಕ್ಷಪಟ್ಟ ಸಾಧ್ಯತೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಅದರ ನಡುವೆಯೆ ಮಧುಸೂಧನ ಶೇಟ್ ಅವರ ಹೆಸರು ಪ್ರಭಲವಾಗಿ ಕೇಳಿ ಬರುತ್ತಿದೆ.

ಕಾಂಗ್ರೇಸ್ ನ ಮಧುಸೂಧನ್ ಶೇಟ್ ಹಿಡಿಯಲಿದ್ದಾರಾ ಪುರಸಭೆಯ ಚುಕ್ಕಾಣಿ..?
ಅಥವಾ ಬಿಜೆಪಿಯ ಪ್ರಶಾಂತ ನಾಯ್ಕ ಅಧಿಕಾರದ ಗದ್ದುಗೆ ಏರಲಿದ್ದಾರಾ? ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ.

RELATED ARTICLES  ಶಾಲೆಯಲ್ಲಿ ದಾಖಲೆ ಅಂಕ ಪಡೆದ ಕು.ಜ್ಯೋತಿ ಲಿಂಗಪ್ಪ ಪಟಗಾರಗೆ ಸನ್ಮಾನ

ಹೌದು ಕುಮಟಾ ಪುರಸಭೆಯ ಮಾಜಿ ಅಧ್ಯಕ್ಷ ಸಂತೋಷ ನಾಯ್ಕ್ ಅವರ ರಾಜೀನಾಮೆಯಿಂದ ತೆರವಾರ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೇಸ್ ಜೆ.ಡಿ.ಎಸ್ ಮೈತ್ರಿಯಾಗಿ ಅಧ್ಯಕ್ಷರ ಆಯ್ಕೆ ಮಾಡುವ ಸಾದ್ಯತೆ ಹೆಚ್ಚಾಗಿದೆ.

ಕುಮಟಾ ಪುರಸಭೆಯು 23 ಸದಸ್ಯರನ್ನು ಹೊಂದಿದ್ದು ಅದರಲ್ಲಿ ಹತ್ತು ಸದಸ್ಯರು ಜೆ.ಡಿ.ಎಸ್. ನಿಂದ ಹಾಗೂ ಕಾಂಗ್ರೇಸ್ ನ 6 , ಬಿ.ಜೆ.ಪಿ ಯ 6 ಮತ್ತು ಕೆ.ಜೆ.ಪಿಯ ಓರ್ವ ಸದಸ್ಯರಿದ್ದಾರೆ. ಪುರಸಭೆಯ ಆಡಳಿತದ ಬಹುಮತಕ್ಕಾಗಿ 12 ಸದಸ್ಯರ ಬಹುಮತದ ಆವಶ್ಯಕತೆ ಇದ್ದು ಕಳೆದಬಾರಿ ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ ಮೈತ್ರಿಯೊಂದಿಗೆ ಆಡಳಿತ ನಡೆಸಿತ್ತು.

ಕಳೆದ ಚುನಾವಣೆಯಲ್ಲಿ ಜೆ.ಡಿ.ಎಸ್ ನ ಹತ್ತು ಸದಸ್ಯರನ್ನು ಆರಿಸುವಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚಿಗೆ ದಿನಕರ ಶೆಟ್ಟಿ ಅವರು ಬಿ.ಜೆ.ಪಿ ಸೇರಿದ್ದು ಅವರ ಜೊತೆ ಪುರಸಭೆಯ ಅನೇಕ ಜೆ.ಡಿ.ಎಸ್ ಸದಸ್ಯರು ಬಿ.ಜೆ.ಪಿ ಸೇರಿದ್ದಾರೆ. ಆದ್ದರಿಂದ ಈ ಬಾರಿಯ ಪುರಸಭೆಯ ಆಡಳಿತ ಬಿ.ಜೆ.ಪಿ ತೆಕ್ಕೆಗೆ ಎಂಬ ಮಾತು ನಗರದಲ್ಲಿ ಹರಿದಾಡಿತ್ತು.

RELATED ARTICLES  ಹೊನ್ನಾವರದಲ್ಲಿ ಫೆಬ್ರವರಿ 3 ರಂದು ಹವ್ಯಕ ಹಬ್ಬ : ವೆಂಕಟ್ರಮಣ ಹೆಗಡೆ ನೇತ್ರತ್ವದಲ್ಲಿ ನಡೆದಿದೆ ಭರ್ಜರಿ ತಯಾರಿ.

ಮಾಜಿ ಶಾಸಕ ದಿನಕರ ಶೆಟ್ಟಿ ಅವರಜೊತೆ ಬಿಜೆಪಿಯಲ್ಲಿ ಕಾಣಿಸಿಕೊಳ್ಳುವ ಎಂಟು ಜನ ಜೆಡಿಎಸ್ ಸದಸ್ಯರು ಹಾಗೂ ಬಿಜೆಪಿಯ ಆರು ಸದಸ್ಯರ ಬಹುಮತದೊಂದಿಗೆ ಬಿ.ಜೆ.ಪಿ ಸದಸ್ಯ ಪ್ರಶಾಂತ ನಾಯ್ಕ್ ಅವರು ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಭಾವಿಸಲಾಗಿತ್ತು. ಎಲ್ಲರ ಊಹೆಗೂ ನಿಲುಕದಂತೆ ತೆರೆಮರೆಯಲ್ಲೇ ರಾಜಕೀಯ ನಡೆದಿದ್ದು ಸದ್ಯ ಮತ್ತೆ ಪುರಸಭೆಯಲ್ಲಿ ಕಾಂಗ್ರೇಸ್ ಜೆಡಿಎಸ್ ಮೈತ್ರಿ ಆಡಳಿತ ಎಂಬ ಮಾಹಿತಿ ಹೊರಬಿದ್ದಿದೆ.

ಕಾಂಗ್ರೇಸ್ ಜೆಡಿಎಸ್ ಮೈತ್ರಿ ದಿನಕರ ಶೆಟ್ಟಿಯವರ ನಿರ್ದೇಶನದಲ್ಲಿ ನಡೆಯುತ್ತಿದ್ದೆಯೋ.? ಅಥವಾ ದಿನಕರ ಶೆಟ್ಟಿ ಅವರ ಬಿಂಬಲಿಗರಾದ ಜೆ.ಡಿ.ಎಸ್ ಸದಸ್ಯರು ಬಿಜೆಪಿ ಸದಸ್ಯರ ಜೊತೆ ಮೈತ್ರಿಗೆ ನಿರಾಕರಿಸಿದ್ದಾರೋ.? ಎಂಬ ಮಾಹಿತಿ ಇನ್ನೂ ತಿಳಿದಿಲ್ಲ. ಆದರೆ ಕಾಂಗ್ರೇಸ್ ನ ಮಧುಸೂಧನ್ ಶೇಟ್ ಭಾವಿ ಪುರಸಭೆ ಅಧ್ಯಕ್ಷ ಎಂಬ ಮಾತು ಕಾಂಗ್ರೇಸ್ ವಲಯದಿಂದ ಕೇಳಿಬಂದಿದೆ.

ಆದರೆ ದಿನಕರ ಶೆಟ್ಟಿ ಪ್ರಭಲವಾಗಿರುವುದರಿಂದ ಬಿಜೆಪಿ ತನ್ನ ತೆಕ್ಕೆಯಲ್ಲಿ ಪುರಸಭೆಯ ಅಧಿಕಾರವನ್ನು ಇಟ್ಟುಕೊಳ್ಳಬಹುದು. ಪ್ರಶಾಂತ ನಾಯ್ಕ ಅಧ್ಯಕ್ಷರಾಗಿ ಆಡಳಿತ ನಡೆಸಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಒಟ್ಟಾರೆ ನಾಳಿನ ವರೆಗೆ ಕಾಯುವ ಸ್ಥಿತಿ ಎಲ್ಲರದ್ದೂ. ಸದಸ್ಯರಲ್ಲಿ ತವಕ ಜನತೆಯಲ್ಲಿ ಕುತೂಹಲ ಎರಡೂ ಹೆಚ್ಚಿರುವುದಂತೂ ಸುಳ್ಳಲ್ಲ.