1. ಶಿಶುವಿಗೆ ತಪ್ಪದೆ ತಾಯಿಯ ಎದೆಹಾಲು ಕುಡಿಸಬೇಕು.
2. ಮಕ್ಕಳಿಗೆ ದೇಶಿ ಆಕಳ ಹಾಲನ್ನೇ ಕುಡಿಸಬೇಕು.
3. ತಪ್ಪದೇ ತಲೆಗೆ ಸ್ನಾನ ಮಾಡಿಸಬೇಕು, ಎಣ್ಣೆ ಮಾಲಿಷ ಮಾಡಬೇಕು. ಶಿಶುವಿಗೆ ಮಾಲಿಷ ಮಾಡಲು ಬದಾಮಿ ಎಣ್ಣೆ ಉಪಯೋಗಿಸಬೇಕು. ಸಾಬೂನಿಗೆ ಬದಲಾಗಿ ಹೆಸರು ಹಿಟ್ಟಿನಲ್ಲಿ ಹಾಲು ಹಾಕಿ ಕಲೆಸಿ, ಲೇಪಿಸಿ, ಸ್ನಾನ ಮಾಡಬೇಕು. ಇದರಿಂದ ಬಹುತೇಕ ಕಾಯಿಲೆಗಳಿಂದ ಮಗುವನ್ನು ರಕ್ಷಿಸಬಹುದು.

4. ಚಾಕಲೇಟ್, ಬಿಸ್ಕಿಟ್,ಬ್ರೆಡ್, ಐಸ್‌ಕ್ರೀಮ್, ತಂಪುಪಾನೀಯ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಅದರ ಬದಲಾಗಿ ಆರೋಗ್ಯದಿಂದಿರಲು ಖರ್ಜೂರ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಕಲ್ಲು ಸಕ್ಕರೆ, ಒಣ ಹಣ್ಣುಗಳು, ಪಿಸ್ತಾ, ಹೆಸರು ಉಂಡೆ, ಎಳ್ಳು ಉಂಡೆ, ಕರದಂಟು, ಕುಂದಾ, ಪೇಡಾ, ಪುಟಾಣಿ, ಬೆಲ್ಲ, ಕಬ್ಬಿನ ಹಾಲು, ಹಣ್ಣಿನ ರಸ, ಎಳನೀರು, ಕಷಾಯ ಹಾಗೂ ಮನೆಯಲ್ಲಿ ತಯಾರಿಸಿದ ಪದಾರ್ಥಗಳ ರೂಢಿಯನ್ನು ಮಕ್ಕಳಿಗೆ ಮಾಡಿದರೆ ತುಂಬಾ ರೋಗಗಳಿಂದ ಮುಕ್ತ ಮಾಡಬಹುದು.
5. ಮಕ್ಕಳಿಗೆ ಶುದ್ಧ ಹತ್ತಿ ಬಟ್ಟೆ ಹಾಕಬೇಕು.

RELATED ARTICLES  ಪೂರ್ಣಾವದಿ ಶಿಶಿಕ್ಷು (ಅಪ್ರೆಂಟಿಸ್) ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.

6. ತುಂಬಾ ಬಿಸಿ ನೀರು ಸ್ನಾನ ಮಾಡಿಸಬಾರದು. 7. ಪ್ರತಿನಿತ್ಯ ಕಬ್ಬು ತಿನ್ನಿಸಿದರೆ ಹಲ್ಲು ಹಾಗೂ ಹೊಟ್ಟೆಯ ತೊಂದರೆ ಇರುವುದಿಲ್ಲ.
8. ಬೆಳಿಗ್ಗೆ ಮಲಮೂತ್ರ ವಿಸರ್ಜನೆ ಮೊದಲು ಏನು ಆಹಾರವಾಗಲಿ, ಚಹಾ ಕಾಫಿಯಾಗಲಿ ಕೊಡಬಾರದು

RELATED ARTICLES  ಬಿ.ಎಸ್.ಎನ್.ಎಲ್ ನಿಂದ ಗ್ರಾಹಕರಿಗೆ ಭರ್ಜರಿ ಗಿಫ್ಟ! ಘೋಷಣೆಯಾಯ್ತು ರಾಖಿ ಯೋಜನೆ

9. ಮಕ್ಕಳಿಗೆ ಜ್ವರಬಾಧೆ ಬರದಂತೆ ತಡೆಯಲು ಆಗಾಗ ಅಥವಾ ದಿನಾಲು 1 ಸಾರಿ ತುಳಸಿ ಕಷಾಯಕೊಡಬೇಕು.
10. ರಾತ್ರಿ ಊಟದ ನಂತರ 1/2 ಲೋಟ ಬಿಸಿ ನೀರು, 1 ಚಿಟಕಿ ಇಂಗು, ಸ್ವಲ್ಪ ಉಪ್ಪು , 1 ಚಿಟಕಿ ಅಜವಾಣ ಚೂರ್ಣ ಹಾಕಿ ವಾರಕ್ಕೆ 2 ಸಾರಿ ಕುಡಿಸಬೇಕು.

11. ಮಕ್ಕಳ ನೆನಪಿನ ಶಕ್ತಿ ಅಭಿವೃದ್ಧಿಗೆ, ಲೋಟ ಹಾಲು, 1 ಚಮಚ ಜೇನು ಹಾಕಿ ಕುಡಿಸಬೇಕು, ದೂರದರ್ಶನ ತುಂಬಾ ಹಿತಮಿತವಿರಬೇಕು.
12. ಮಕ್ಕಳು ಶಕ್ತಿವಂತರಾಗಲು 1 ಲೋಟ ಹಾಲು + 2 ಬದಾಮಿ ಬೀಜ + 1 ಚಮಚ ಕಲ್ಲುಸಕ್ಕರೆ ಹಾಕಿ ಸೇವಿಸಲು ಕೊಡಬೇಕು.