ಶಿರಸಿ: ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ 28 ನೇ ಅಂತರ್ ಮಹಾವಿದ್ಯಾಲಯ ಯುವಜನೋತ್ಸವದಲ್ಲಿ ಗುರವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರಂಭದಲ್ಲಿ ಧಾರವಾಡದ ಕೃಷಿ ಮಹಾವಿದ್ಯಾಲಯದ ಕೃಷಿ ತಂಡ ಸಮಗ್ರ ವೀರಾಗ್ರಹಣಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಅಂತರ್ ಮಹಾವಿದ್ಯಾಯದ ಯುವಜನೋತ್ಸವದಲ್ಲಿ ವಯಕ್ತಿಕ ತಂಡದಲ್ಲಿ ವಿಜಯಿಯಾದ 26 ವಿದ್ಯಾರ್ಥಿಗಳು ಹಾಗೂ ಸಹಕಲಾವಿದರೊಂದಿಗೆ ಸೇರಿ ಪ್ರಶಸ್ತಿ ಪಡೆದುಕೊಂಡ ಸುಮಾರು 50 ವಿದ್ಯಾರ್ಥಿಗಳು ಮುಂದಿನ ತಿಂಗಳು ಚೆನೈ ನಲ್ಲಿ ನಡೆಯಲಿರುವ ದಕ್ಷಿಣ ವಲಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೊದಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಿ.ಪಿ.ಬಿರಾದಾರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾಧನೆ ಮಾಡುವವರಿಗೆ ಸ್ನಾತಕೋತ್ತರ ಪದವಿ (ಪಿಜಿ) ವಿಭಾಗದಲ್ಲಿ ಒಂದು ಸ್ಥಾನ ಮೀಸಲಿಡಲಾಗುತ್ತಿದ್ದು, ಮುಂಬರುವ ವರ್ಷದಲ್ಲಿ ಈ ಮೀಸಲಾತಿಯಡಿ ಸ್ಥಾನ ಹೆಚ್ಚಿಸಲಾಗುವುದು. ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಚಟುವಟಿಕೆಗೆ ಆದ್ಯತೆ ನೀಡುವ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಆದ್ದರಿಂದ ಯುವಕರು ಕೇವಲ ಅಂಕಗಳಿಗೆ ಮಾತ್ರ ಪ್ರಾಮುಖ್ಯತೆ ಎಂದು ತಿಳಿದುಕೊಳ್ಳದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು ಎಂದರು.

RELATED ARTICLES  ವಿಷ್ಣುತೀರ್ಥದಲ್ಲಿ ತಾಲೂಕು ಮಟ್ಟದ ಈಜು ಸ್ಪರ್ಧೆ ಸಂಪನ್ನ.

ವಿದ್ಯಾರ್ಥಿ ಕಲ್ಯಾಣದ ಡೀನ್ ಎಸ್.ಕೆ.ಗಾಳಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ರಾಮಕೃಷ್ಣ ದೊಡ್ಮನಿ , ಶಿಕ್ಷಣ ನಿರ್ದೇಶಕ ಬಿ.ಎಸ್.ಜನಗೌಡರ್, ಪ್ರಾಧ್ಯಾಪಕ ಶ್ರೀಪಾದ ಕುಲಕರ್ಣಿ, ವಿಸ್ತರಣಾಧಿಕಾರಿ ಎಚ್.ಬಸಪ್ಪ, ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರಚಂದ್ರ ಹೊಸಮನಿ ಹಾಗೂ ಇತರರು ಇದ್ದರು. ಅರಣ್ಯ ಕಾಲೇಜಿನ ಡೀನ್ ಎಸ್.ಜೆ.ಪಾಟೀಲ ಸ್ವಾಗತಿಸಿದರು. ವಿದ್ಯಾರ್ಥಿನಿ ಅನುಷಾ ಪ್ರಾರ್ಥಿಸಿದರು.

RELATED ARTICLES  43 ಲಕ್ಷ ರೂ. ವಂಚಿಸಿದ ಆರೋಪಿ ಪೊಲೀಸ್ ಬಲೆಗೆ.