ಬೀದರ್, ಅಕ್ಟೋಬರ್ 29 : ಹೈದರಾಬಾದ್-ಕರ್ನಾಟಕ ಭಾಗದ ಜನರ ದಶಕಗಳ ಕನಸು ನನಸಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೀದರ್-ಕಲಬುರಗಿ ರೈಲು ಸಂಚಾರಕ್ಕೆ ಭಾನುವಾರ ಹಸಿರು ನಿಶಾನೆ ತೋರಿಸಿದರು. ಭಾನುವಾರ ಸಂಜೆ ಬೀದರ್‌ನಲ್ಲಿ ನಡೆದ ಸಮಾರಂಭದಲ್ಲಿ ಮೋದಿ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್, ಸಚಿವ ಅನಂತ್ ಕುಮಾರ್, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಲಬುರಗಿ-ಬೀದರ್ ರೈಲು ಮಾರ್ಗದ ವಿಶೇಷತೆಗಳು
; ಬೀದರ್-ಕಲಬುರಗಿ ನಡುವಿನ 104 ಕಿ.ಮೀ.ಮಾರ್ಗದಲ್ಲಿ ಡೆಮೋ ರೈಲು ಸಂಚಾರ ನಡೆಸಲಿದೆ. ಕಲಬುರಗಿಯಿಂದ 2 ಬಾರಿ, ಬೀದರ್‌ನಿಂದ 2 ಬಾರಿ ರೈಲು ಸಂಚಾರ ನಡೆಸಲಿದೆ.

RELATED ARTICLES  ಬಿಜೆಪಿಯಿಂದ ಬಂದ್'ಗೆ ಕರೆ: ನರಗುಂದದ ಗಲ್ಲಿಗಲ್ಲಿಗಳಲ್ಲಿ ಬೆಂಕಿ ಹಚ್ಚಿ ಆಕ್ರೋಶ

16 ವರ್ಷಗಳ ಬಳಿಕ ಬೀದರ್-ಕಲಬುರಗಿ ರೈಲ್ವೆ ಮಾರ್ಗ ಪೂರ್ಣ!; ಕಲಬುರಗಿ-ಬೀದರ್ ಮಾರ್ಗದಲ್ಲಿ 13 ನಿಲ್ದಾಣಗಳಿವೆ. ಮೊದಲು 383 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ನಂತರ 1,542 ಕೋಟಿ ಪರಿಷ್ಕೃತ ವೆಚ್ಚದಲ್ಲಿ ಯೋಜನೆ ಪೂರ್ಣಗೊಂಡಿದೆ. 2000ದಲ್ಲಿ ಅಂದಿನ ರೈಲ್ವೆ ಸಚಿವ ಬಂಗಾರು ಲಕ್ಷ್ಮಣ್ ಅವರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಮೊದಲು 369.7 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, 16 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದೆ.

RELATED ARTICLES  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನೆಗೆ ಹುಸಿ ಬಾಂಬ್ ಕರೆ : ಆರೋಪಿ ಬಂಧನ.