ಕುಮಟಾ : ದೇಶದ ಕಟ್ಟ ಕಡೆಯ ಪ್ರಜೆಗೂ ಅತ್ಯತ್ತಮ ಆರೋಗ್ಯ ಸೇವೆ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಲೈಪ್ ಲೈನ್ ಎಕ್ಸ ಪ್ರಸ್ ಸಂಚಾರಿ ರೈಲು ಯೋಜನೆ ಮಾಡಿದ್ದು , ಇಂದಿನಿಂದ ಜಿಲ್ಲೆಯ ಜನರಿಗೆ ಈ ಸಂಚಾರಿ ವೈದ್ಯಕೀಯ ರೈಲಿನ ಸೌಲಭ್ಯ ಸಿಗಲಿದೆ.

ಈ ರೈಲು ಕಳೆದವಾರ ನಗರಕ್ಕೆ ಆಗಮಿಸಿದ್ದು ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಹೊಂದಿದೆ. ಜಿಲ್ಲೆಯ ರೋಗಿಗಳು ಶಸ್ತ್ರ ಚಿಕಿತ್ಸೆಗಾಗಿ ಮಂಗಳೂರಿಗೋ ಅಥವಾ ಗೋವಾಕ್ಕೆ ಹೋಗಬೇಕಿತ್ತು. ಆದರೆ ಈ ರೈಲು ಇಂದಿನಿಂದ ನವೆಂಬರ 19 ರ ವರೆಗೂ ಕುಮಟಾದಲ್ಲೇ ತಂಗಲಿದ್ದು ಜಿಲ್ಲೆಯ ಜನ ಇದರ ಸದುಪಯೋಗ ಪಡೆಯಬಹುದಾಗಿದೆ.

RELATED ARTICLES  ಸಾಹಿತ್ಯ ಶರಭ ಪ್ರಶಸ್ತಿಗೆ ಸ್ಮಿತಾ ಕಲ್ಲೇಶ್ವರ ಅವರ ಕೃತಿ ಆಯ್ಕೆ.

ಇಂದು ಕುಮಟಾದಲ್ಲಿ ಲೈಫ್ ಲೈನ್ ಎಕ್ಸ್‌ಪ್ರೆಸ್‌ ಟ್ರೈನ್ ನ ಉದ್ಘಾಟನೆಯನ್ನು ಸಂಸದರು ಹಾಗು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವರಾದ ಶ್ರೀ ಅನಂತ್ ಕುಮಾರ್ ಹೆಗಡೆ ಯವರು ನೆರವೇರಿಸಿದರು.ನಂತರ ಮಾತನಾಡಿದ ಅವರು ಬಡ ಜನತೆಗೆ ಅಗತ್ಯವಾದ ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜನತೆಯ ಆರೋಗ್ಯದ ಜೊತೆಗೆ ಎಲ್ಲರ ಏಳಿಗೆಯಾಗಬೇಕು ಎಂದರು.

RELATED ARTICLES  ಪರೇಶ್ ಮೇಸ್ತಾ ಸಾವಿನ ಪ್ರಕರಣದ ಅಂತಿಮ ವರದಿ ಸಿದ್ದ..?

ಕಾರ್ಯಕ್ರಮದಲ್ಲಿ ಉತ್ತರಕನ್ನಡದ ಜಿಲ್ಲಾಧಿಕಾರಿಗಳಾದ ಎಸ್ ಎಸ್ ನಕುಲ್ ,ಉಪವಿಭಾಗಾಧಿಕಾರಿ ಕೆ ಲಕ್ಷ್ಮಿಪ್ರಿಯ ,ರೋಟರಿ ಮತ್ತು ಲಯನ್ಸ್ ಸದಸ್ಯರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರುಗಳಾದಂತಹ ಶ್ರೀ ಸೂರಜ್ ನಾಯ್ಕ್ ಸೋನಿ,ಶ್ರೀ ದಿನಕರ್ ಶೆಟ್ಟಿ ,ಶ್ರೀ ನಾಗರಾಜ್ ನಾಯಕ್ ತೊರ್ಕೆ ,ಡಾ|| ಶ್ರೀ ಜಿ. ಜಿ.ಹೆಗಡೆ ,ಶ್ರೀ ವಿನೋದ್ ಪ್ರಭು,ಶ್ರೀಮತಿ ಗಾಯತ್ರಿ ಗೌಡ, ಯಶೋಧರ ನಾಯ್ಕ್ ಹಾಗು ಇನ್ನಿತರ ಮುಖಂಡರು ,ಕಾರ್ಯಕರ್ತರು ,ಸಾರ್ವಜನಿಕರು ಉಪಸ್ಥಿತರಿದ್ದರು ,