ಕುಮಟಾ : ಪುರಸಭೆಯಲ್ಲಿ ಮತ್ತೆ ಕಾಂಗ್ರೇಸ್ ಜೆ.ಡಿ.ಎಸ್ ಮೈತ್ರಿ..? ಇದು ಆಗುತ್ತೋ ಬಿಡುತ್ತೋ? ಹೀಗೊಂದು ಪ್ರಶ್ನೆ ಕುಮಟಾ ಜನತೆಯನ್ನು ಕಾಡುತ್ತಿತ್ತು ಈಗ ಎಲ್ಲ ಕುತೂಹಲಕ್ಕೂ ಬ್ರೇಕ್ ಬಿದ್ದಿದೆ.
ಹೌದು ಕುಮಟಾ ಪುರಸಭೆಯ ಮಾಜಿ ಅಧ್ಯಕ್ಷ ಸಂತೋಷ ನಾಯ್ಕ್ ಅವರ ರಾಜೀನಾಮೆಯಿಂದ ತೆರವಾರ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೇಸ್ ಜೆ.ಡಿ.ಎಸ್ ಮೈತ್ರಿಯಾಗಿ ಅಧ್ಯಕ್ಷರ ಆಯ್ಕೆ ನಡೆದಿದೆ.
ಕುಮಟಾ ಪುರಸಭೆಯು 23 ಸದಸ್ಯರನ್ನು ಹೊಂದಿದ್ದು ಅದರಲ್ಲಿ ಹತ್ತು ಸದಸ್ಯರು ಜೆ.ಡಿ.ಎಸ್. ನಿಂದ ಹಾಗೂ ಕಾಂಗ್ರೇಸ್ ನ 6 , ಬಿ.ಜೆ.ಪಿ ಯ 6 ಮತ್ತು ಕೆ.ಜೆ.ಪಿಯ ಓರ್ವ ಸದಸ್ಯರಿದ್ದರು. ಪುರಸಭೆಯ ಆಡಳಿತದ ಬಹುಮತಕ್ಕಾಗಿ 12 ಸದಸ್ಯರ ಬಹುಮತದ ಆವಶ್ಯಕತೆ ಇದ್ದು ಕಳೆದಬಾರಿ ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ ಮೈತ್ರಿಯೊಂದಿಗೆ ಆಡಳಿತ ನಡೆಸಿತ್ತು. ಆದರೆ ಈ ಭಾರಿ ಹೊಸತಿರುವು ಪಡೆದು ನಿಗದಿತ ಸಮಯದೊಳಗೆ ಅಧಿಕೃತ ವಾಗಿ ನಾಮಪತ್ರ ಸಲ್ಲಿಸಿದ ಇಬ್ಬರನ್ನು ಹೊರತುಪಡಿಸಿ( ಅಧ್ಯಕ್ಷ, ಉಪಾಧ್ಯಕ್ಷ) ಮತ್ತಾವುದೇ ನಾಮಪತ್ರ ಸಲ್ಲಿಕೆಯಾಗದೇ ಅವಿರೋಧ ಆಯ್ಕೆ ನಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ. ಅಧಿಕೃತ ಘೋಷಣೆಗೆ ಕ್ಷಣಗಣನೆ ನಡೆದಿದೆ ಎನ್ನಲಾಗಿದೆ.
ಕುಮಟಾ ಪುರಸಭೆಗೆ ನಡೆದ ಚುನಾವಣೆಯಲ್ಲಿ ಮಧುಸೂಧನ ಶೇಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆಯುವ ಚುನಾವಣೆಗೆ ಮಧ್ಯಾಹ್ನ 2 ಗಂಟೆಯ ವರೆಗೆ ನಾಮಪತ್ರ ಸಲ್ಲಿಕೆಗೆ ಗಡುವು ನೀಡಲಾಗಿತ್ತು. ಕಾಂಗ್ರೇಸ್ ನ ಅಭ್ಯರ್ಥಿಯಾಗಿ ಮಧುಸೂಧನ ಶೇಟ್ ಗುರುತಿಸಿಕೊಂಡಿದ್ದರು. ಜೆಡಿಎಸ್ ಹಾಗೂ ಕಾಂಗ್ರೇಸ್ ಮೈತ್ರಿಯಲ್ಲಿ ನಡೆಯ ಬಹುದೆಂಬ ಅಧಿಕಾರ ಹಂಚಿಕೆ ಪ್ರಕ್ರಿಯೆಗೆ ಬಲ ಬಂದಿದ್ದು ಮಧುಸೂದನ್ ಶೇಟ್ ಹೊರತುಪಡಿಸಿ ಇನ್ನಾರೂ ನಾಮಪತ್ರ ಸಲ್ಲಿಸದ ಕಾರಣ ಮಧುಸೂಧನ ಶೇಟ್ ಅವಿರೋಧವಾಗಿ ಆಯ್ಕೆಯಾದಂತಾಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಬಂದಿದ್ದು ಅಧಿಕೃತ ಘೋಷಣೆ ಆಗಬೇಕಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಮೋಹಿನಿ ಗೌಡ ಸ್ಪರ್ಧಿಸಿದ್ದು ಅವರೂ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ನ ಸ್ಪರ್ಧಿಯಾಗಿದ್ದ ಅವರಿಗೆ ಉಪಾಧ್ಯಕ್ಷ ಸ್ಥಾನ ಒಲಿದಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಪುರಸಭಾ ಚುನಾವಣೆಗೆ ಪೂರ್ಣ ವಿರಾಮ ಸಿಕ್ಕಿದ್ದು ಕಾಂಗ್ರೇಸ್ ನ ಮಧುಸೂಧನ ಶೇಟ್ ಅಧ್ಯಕ್ಷರಾಗಿ ಹಾಗೂ ಮೋಹಿನಿ ಗೌಡ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ.
ಜನತೆಯ ಜೊತೆಗೆ ಗುರುತಿಸಿಕೊಂಡಿರುವ ಇವರೀರ್ವರು ಮುಂದಿನ ಆಡಳಿತ ಹೇಗೆ ನಡೆಸುತ್ತಾರೆ ಎಂಬುದನ್ನು ಮಾತ್ರ ಜನನಿರೀಕ್ಷಿಸುತ್ತಿದ್ದಾರೆ.