ಹೊನ್ನಾವರ : ಪಟ್ಟಣದ ತುಳಸಿ ನಗರದ ಬಡ ಮೀನುಗಾರ ವಿನಾಯಕ ಮೆಸ್ತರ ಇವರ ಮನೆಗೆ ಬೆಳಕು ಗ್ರಾಮೀಣಾಭಿವೃದ್ದಿ ಟ್ರಸ್ಟ ವತಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ವಿನಾಯಕ ಮೆಸ್ತ ತಮ್ಮ ಮನೆಯ ವಿದ್ಯುತ್ತ ಸಮಸ್ಯೆಯನ್ನು ನಾಗರಾಜ ನಾಯಕರಿಗೆ ತಿಳಿಸಿದ್ದರು. ಇದಕ್ಕೆ ತಮ್ಮ ಸಂಸ್ಥೆ ವತಿಯಿಂದ ನಾಗರಾಜ ನಾಯಕ ತೊರ್ಕೆ ಶಿಘ್ರದಲ್ಲಿ ಸ್ಪಂದಿಸಿ ಕತ್ತಲೆಯ ಮನೆಯಲ್ಲಿ ಬೆಳಕಿನ ಕಿರಣ ಮೂಡಿಸಿದ್ದಾರೆ, ಈ ವೇಳೆ ಇವರ ಮನೆಗೆ ಭೇಟಿ ನೀಡಿದ ಬೆಳಕು ಟ್ರಸ್ಟ ಅಧ್ಯಕ್ಷ ನಾಗರಾಜ ನಾಯ್ಕ ತೊರ್ಕೆ ಮಾತನಾಡಿ ಈ ಭಾಗದ ಬಿಜೆಪಿ ಯುವ ಮುಖಂಡ ವಿನಾಯಕ್ ಆಚಾರಿ ಸಮಸ್ಯೆ ಬಗ್ಗೆ ನನಗೆ ತಿಳಿಸಿದಾಗ ನಾನು ಈ ಬಗ್ಗೆ ಗಮನ ಹರಿಸಿದೆ. ಇತಂಹ ಹಲವರಿಗೆ ಸೌಕರ್ಯ ಒದಗಿಸಿದ ಸಂತೃಪ್ತಿ ನಮ್ಮ ಸಂಸ್ದೆಗಿದೆ. ಇಂತಹ ಕಾರ್ಯಕ್ರಮವನ್ನು ನಮ್ಮ ಸಂಸ್ದೆ ವತಿಯಿಂದ ತಾಲೂಕಿನಾದ್ಯಂತ ನಡೆಸುತ್ತಾ ಬಂದಿದ್ದೇವೆ. ಜನರಿಗೆ ಉಪಯೋಗವಾಗುವ ಸೌಕರ್ಯ ನೀಡಿದರೆ ಜನರಿಂದ ನಮಗೆ ಪ್ರೀತಿ, ವಿಶ್ವಾಸ ದೊರೆಯುವುದು. ಮುಂದೆಯು ಯಾವುದೇ ಬಗೆಯ ಸಹಾಯ ಸಹಕಾರ ಮಾಡಲು ಸಿದ್ದಎಂದರು.
ಮಿನುಗಾರ ಮುಕಂಡ ಉಮೇಶ ಮೆಸ್ತ ಮಾತನಾಡಿ, ನಾಗರಾಜ್ ನಾಯಕರು ಅಸಹಾಯಕರಿಗೆ ಬೆಳಕು ನೀಡಿದ ಮೊದಲಿಗರು ಎಂದರೆ ತಪ್ಪಾಗಲಾರದು. ಇದು ಹೃದಯದಿಂದ ಹೇಳಿದ ಮಾತು. ಹಲವರು ಈ ರೀತಿಯಾದ ಎಷ್ಟೋ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಂತವರಿಗು ಸೌಲಭ್ಯ ಸಿಗುವಂತಾಗಲಿ ಎಂದರು.
ಇದೆ ಸಂಧರ್ಭದಲ್ಲಿ ದೇವಿ ಮಡರ್ ಎಂಬುವವರಿಗೆ ಗ್ಯಾಸ್ ಕಿಟ್ ವಿತರಿಸಿದರು. ಈ ಸಂಧರ್ಬದಲ್ಲಿ ವಿನಾಯಕ್ ಆಚಾರಿ, ನವೀನ್ ನಾಯ್ಕ, ನಾಗರಾಜ ಮೆಸ್ತ, ಪ್ರಭಾಕರ ಹರಿಜನ, ಮುಂತಾದವರು ಇದ್ದರು.